ಎಂ ಬಿ ಪಾಟೀಲ್ ಕಾಲೆಳೆದ ಬಸನಗೌಡ ಪಾಟೀಲ್ ಯತ್ನಾಳ್

ವಿಜಯಪುರ

      ಮತ್ತೆ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವನ್ನು ಪ್ರಸ್ತಾಪಿಸುವ ಮೂಲಕ ಬಿಜೆಪಿಯ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೃಹಸಚಿವ ಎಂ.ಬಿ.ಪಾಟೀಲ್ ಅವರ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ.

      ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ಉಳಿದರೆ ಲಿಂಗಾಯತ ಧರ್ಮ ಉಳಿಯುತ್ತದೆ.ಅದೇ ರೀತಿ ಎಲ್ಲ ಜಾತಿಗಳು ಉಳಿಯುತ್ತವೆ. ಭಾರತ ಉಳಿಯಲಿಲ್ಲ ಎಂದರೆ ಯಾವ ಲಿಂಗಾಯತರು ಉಳಿಯುವುದಿಲ್ಲ. ಜಾತಿಜಾತಿ ಧರ್ಮ ಧರ್ಮಗಳ ನಡುವೆ ಯಾವುದೇ ಒಡಕು ಉಂಟು ಮಾಡದೇ ಎಲ್ಲರೂ ದೇಶ ರಕ್ಷಣೆ ಮಾಡಬೇಕು ಎನ್ನುವ ಮೂಲಕ ಎಂ.ಬಿ.ಪಾಟೀಲರನ್ನು ಅವರು ಕುಟುಕಿದರು.

       ಮೈತ್ರಿ ಪಕ್ಷಗಳ ಸಮನ್ವಯ ಸಮಿತಿ ಅಧ್ಯಕ್ಷರೂ ಹಾಗೂ ಮಾಜಿ ಮುಖ್ಯಮಂತ್ರಿಗಳೂ ಆಗಿರುವ ಸಿದ್ದರಾಮಯ್ಯ ಅವರಿಗೆ ರಾಜಕೀಯ ಭವಿಷ್ಯವಿಲ್ಲ.ಕೆಲವು ದಿನಗಳಲ್ಲಿ ಸಿದ್ದರಾಮಯ್ಯ ಅವರು ಮೂಲೆ ಗುಂಪು ಆಗಲಿದ್ದಾರೆ. ಮೇ 23 ರ ನಂತರ ಮೈತ್ರಿ ಸರ್ಕಾರವನ್ನು ಪತಗನಗೊಳಿಸಬೇಕು ಎಂದು ಪ್ರಯತ್ನ ಮಾಡುತ್ತಿದ್ದಾರೆ. ಮೈತ್ರಿ ಸರ್ಕಾರ ಅಸ್ಥಿರಗೊಳ್ಳದೇ ಹೋದರೆ ಕಾಂಗ್ರೆಸ್ ಸರ್ವನಾಶ ಆಗುತ್ತದೆ. ಸಿದ್ದರಾಮಯ್ಯ ಆಗ ಮನೆಗೆ ಹೋಗುತ್ತಾರೆ. ತಮ್ಮ ಮುಂದಿನ ರಾಜಕೀಯ ಭವಿಷ್ಯ ಬೇಕೆಂದಲ್ಲಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವನ್ನು ಅವರು ಪತನಗೊಳಿಸಲೇ ಬೇಕು ಎಂದು ಯತ್ನಾಳ್ ಭವಿಷ್ಯ ನುಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link