ತತ್ವಾದರ್ಶ ಬಸವಣ್ಣ ಜಯಂತಿ ನಡೆಯಲಿ

ತಿಪಟೂರು:

     ಬಸವಣ್ಣ ಅವರ ತತ್ವಾದರ್ಶಗಳನ್ನು ಪಾಲಿಸುವ ಮೂಲಕ ಅವರ ಜಯಂತಿಯನ್ನು ಅರ್ಥಪೂರ್ಣಗೊಳಿಸಬೇಕು ಎಂದು ಸಾಹಿತಿ ಪ್ರೊ. ಟಿ.ಎಸ್. ನಾಗರಾಗಶೆಟ್ಟಿ ತಿಳಿಸಿದರು.

      ನಗರದ ನಡೆನುಡಿ ಸಂಘಟನೆಯಿಂದ ಗುರುವಾರ ಸಂಜೆ ನಡೆದ `ನಮ್ಮ ನಡೆ ನುಡಿಯಲ್ಲಿ ಬಸವಣ್ಣ’ ಎಂಬ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಸವಣ್ಣ ಕೇವಲ ಭಾಷಣದ ವಸ್ತುವಾಗಬಾರದು. ತಮ್ಮ ಬದುಕಿನಲ್ಲಿ ಬಸವಣ್ಣ ಅವರ ತತ್ವಗಳನ್ನು ಎಷ್ಟರ ಮಟ್ಟಿಗೆ ಅಳವಡಿಸಿಕೊಂಡಿದ್ದೇವೆ ಎಂಬುದು ಮುಖ್ಯವಾಗಬೇಕು. ಶರಣದ ಸಾಮಾಜಿಕ ಚಿಂತನೆಗಳು ಅವರ ಸರಳ ವಚನಗಳ ಮೂಲಕ ಮನೆಮನೆ ಮುಟ್ಟಿವೆ.

    ಆದರೆ ಅವು ಮನಸ್ಸನ್ನು ತಟ್ಟಬೇಕು. ಆತ್ಮಸಾಕ್ಷಿಯನ್ನು ಜಾಗೃತಗೊಳಿಸಬೇಕು ಎಂದರು.ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ. ಬಾಲಕೃಷ್ಣ ಮಾತನಾಡಿ, ಬಸವಣ್ಣ ಕೇವಲ ಭಾಷಣದ ವಸ್ತುವಾಗಿ ಸೀಮಿತವಾಗುತ್ತಿದ್ದಾರೆ. ಆಚರಣೆಯಲ್ಲಿ ಮಾತ್ರ ಇಂದಿಗೂ ಬಹಳಷ್ಟು ತಪ್ಪುಗಳು ನಿತ್ಯ ಗೋಚರಿಸುತ್ತವೆ. ಸಮಾಜದಲ್ಲಿ ಅಸಮಾನತೆ, ತಾರತಮ್ಯ ಎಲ್ಲೆಡೆ ಉಳಿದಿದೆ. ಅಃತಶುದ್ಧಿಯಿಂದ ಶರಣರ ವಿಚಾರಗಳನ್ನು ಸಾಕ್ಷೀಕರಿಸಿಕೊಂಡರೆ ಮಾತ್ರ ಸಮೃದ್ಧತೆ ಸಾಧ್ಯ ಎಂದರು.

    ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪರಮೇಶ್ವರಯ್ಯ ಮಾತನಾಡಿ, ದಲಿತರನ್ನು ಕುಡಿವ ನೀರಿನ ಬಾವಿ ಮುಟ್ಟಿಸದಿದ್ದ ದಿನಗಳನ್ನು ಕಂಡಿದ್ದೇವೆ. ಸಾಂಸ್ಕತಿಕ ಮತ್ತು ಸಾಮಾಜಿಕವಾಗಿ ಅಪಾರ ಕೊಡುಗೆ ನೀಡುತ್ತಿರುವ ತಳ ಸಮುದಾಯಗಳು ಸಮಾಜದ ಸ್ವಾಸ್ಥ್ಯಕ್ಕೆ ಅಪಾರ ಕೊಡುಗೆ ನೀಡಿವೆ. ಆದರೆ ಆ ಸಮುದಾಯಗಳನ್ನು ಕೇವಲ ದುಡಿಸಿಕೊಳ್ಳಲು ಬಳಸಿ ತಾರತಮ್ಯ ಎಸಗುವ ಮನಸ್ಥಿತಿ ದೂರವಾಗಬೇಕು ಎಂದರು.

     ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ಮಾತನಾಡಿ, ಹನ್ನೆರಡನೇ ಶತಮಾನದ ಮಹಾಮನೆ ಪರಿಕಲ್ಪನೆ ಇಂದಿಗೂ ಅಗತ್ಯವಿದೆ. ಎಲ್ಲಾ ಜಾತಿ, ಜನಾಂಗಗಳನ್ನು ಒಟ್ಟಿಗೆ ಕರೆದೊಯ್ಯುವ ಶಕ್ತಿ ಶರಣರ ವಿಚಾರಗಳಲ್ಲಿ ಇವೆ. ಪ್ರತಿ ಊರಿನಲ್ಲೂ ಮಹಾಮನೆ ಪ್ರತಿರೂಪಗಳು ಸೃಷ್ಟಿಯಾದರೆ ಅಸಮಾನತೆಗೆ ಆಸ್ಪದ ಇರುವುದಿಲ್ಲ ಎಂದು ಹೇಳಿದರು.

     ಪ್ರಾಚಾರ್ಯ ಎಂ.ಡಿ. ಶಿವಕುಮಾರ್, ದಲಿತ ಮುಖಂಡರಾದ ರಂಗಸ್ವಾಮಿ, ಬಜಗೂರು ಮಂಜುನಾಥ್, ಬಿ.ಎಂ.ಹರಿಪ್ರಸಾದ್, ಎಸ್.ಎ. ಶ್ರೀನಿವಾಸ್, ರಂಗಕರ್ಮಿ ಸತೀಶ್ ತಿಪಟೂರು, ತಿಪಟೂರು ಕೃಷ್ಣ, ಉಜ್ಜಜ್ಜಿ ರಾಜಣ್ಣ, ಅಲ್ಲಾ ಬಕಾಶ್, ಚೆನ್ನೇಗೌಡ, ಗೋವಿಂದರಾಜು, ಸಂತೋಶ್, ಆನಂದ್, ಸಾ.ಚ. ಜಗದೀಶ್, ಡಾ. ರಘುಪತಿ, ಶ್ರೀಕಾಂತ್ ಕೆಳಹಟ್ಟಿ, ದೇವರಾಜ್, ಶೈಲಜ, ಸಂಘಮಿತ್ರೆ ಸಂವಾದದಲ್ಲಿ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link