ತುಮಕೂರು
ನಗರ ವೀರಶೈವ ಸಮಾಜ ಸೇವಾ ಸಮತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಮೂವರು ಮಹಾತ್ಮರ ಜಂಟಿ ಉತ್ಸವವನ್ನು ಮೇ6 ಮತ್ತು ಮೇ.7ರಂದು ನಗರದಲ್ಲಿ ಆಯೋಜನೆ ಮಾಡಲಾಗಿದೆ ಎಂದು ವೀರಶೈವ ಸೇವಾ ಸಮಿತಿಯ ಅಧ್ಯಕ್ಷ ಟಿ.ಬಿ.ಶೇಖರ್ ತಿಳಿಸಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜನೆ ಮಾಡಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೇ.6 ಮತ್ತು ಮೇ.7ರಂದು ಜಗದ್ಗುರು ಶ್ರೀರೇಣುಕಾಚಾರ್ಯರು, ಜಗಜ್ಯೋತಿ ಬಸವೇಶ್ವರರು ಮತ್ತು ಕಾಯಕಯೋಗಿ ಶ್ರೀ ಸಿದ್ದರಾಮೇಶ್ವರರ ಜಯಂತಿಯೋತ್ಸವದ ಅಂಗವಾಗಿ ವೀರಶೈವ ಧರ್ಮ ಸಮ್ಮೇಳನ ಹಾಗೂ ಮೂವರು ಮಹಾತ್ಮರುಗಳ ಜಂಟಿ ಉತ್ಸವವನ್ನು ನೆರವೇರಿಸಲಾಗುವುದು ಎಂದು ತಿಳಿಸಿದರು.
ಉತ್ಸವ ಸಮಿತಿಯ ಅಧ್ಯಕ್ಷ ಕೋರಿ ಮಂಜುನಾಥ್ ಮಾತನಾಡಿ, ಮೇ.6 ಸೋಮವಾರದಂದು ಷಟ್‍ಸ್ಥಲ ಧ್ವಜಾರೋಹಣ ಕಾರ್ಯಕ್ರಮವು ವೀರಶೈವ ಕಲ್ಯಾಣ ಮಂಟಪದಲ್ಲಿ ನೆರವೇರಲಿದ್ದು,ಜಗದ್ಗುರು ಶ್ರೀ ಚನ್ನಬಸವರಾಜೇಂದ್ರ ಮಹಾಸ್ವಾಮಿಗಳು ಆಗಮಿಸಲಿದ್ದಾರೆ. ಅಂದು ಟಿ.ಎಸ್.ಸಾಗರ್ ಮತ್ತು ತಂಡದವರಿಂದ ಸಂಜೆ 5.45ಕ್ಕೆ ವಚನ ವೈಭವ ಮತ್ತು ನೃತ್ಯ ರೂಪಕ ನಡೆಯುವುದು.
ಸಂಜೆ 6.30ಕ್ಕೆ ವೀರಶೈವ ಧರ್ಮ ಸಮ್ಮೇಳನ ನಡೆಯಲಿದ್ದು, ಶ್ರೀ ಅಟವಿಶಿವಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಶ್ರೀ ಅಭಿನವ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಉದ್ಘಾಟನೆ ನೆರವೇರಿಸಲಿದ್ದಾರೆ. ಸಿದ್ದಗಂಗಾ ಪದವಿ ಕಾಲೇಜುಗಳ ಸಂಯೋಜಕರಾದ ಡಾ.ಡಿ.ಎನ್.ಯೋಗೀಶ್ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿ.ಎಸ್.ಬಸವರಾಜು, ಜಿ.ಬಿ.ಜ್ಯೋತಿ ಗಣೇಶ್ ಸೇರಿದಂತೆ ವೀರಶೈವ ಸಮಾಜದ ವಿವಿಧ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿರುವರು. ಈ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಮಾಡಲಾಗುವುದು.
ಮೇ.7ರ ಬೆಳಗ್ಗೆ ಕೋಡಿಬಸವೇಶ್ವರ ದೇವಸ್ಥಾನದಲ್ಲಿ ರೇಣುಕಾಚಾರ್ಯರು, ಬಸವೇಶ್ವರರು ಮತ್ತು ಶ್ರೀ ಸಿದ್ದರಾಮೇಶ್ವರರಿಗೆ ಮಹಾನ್ಯಾಸ ಮಹಾರುದ್ರಾಭಿಷೇಕ, ಮಹಾಮಂಗಳಾರತಿ ಮಾಡಿದ ನಂತರ ಮಧ್ಯಾಹ್ನ 2.45 ಗಂಟೆಗೆ ಎಸ್‍ಐಟಿ ಕಾಲೇಜು ಆವರಣದ ಶಿವಗಣಪತಿ ದೇವಸ್ಥಾನದಿಂದ ಮೂವರು ಮಹನೀಯರ ಉತ್ಸವ ನಡೆಯಲಿದೆ. ಈ ಉತ್ಸವಕ್ಕೆ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಚಾಲನೆ ನೀಡಲಾಗುವುದು.
ಶ್ರೀ ಅಟವಿ ಶಿವಲಿಂಗ ಸ್ವಾಮಿಗಳು, ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ಶ್ರೀ ಗಂಗಾಧರ ಸ್ವಾಮಿಗಳು, ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು, ಶ್ರೀ ಚನ್ನವೀರ ಶಿವಾಚಾರ್ಯ ಸ್ವಾಮಿಗಳು, ಶ್ರೀ ಮೃತ್ಯುಂಜಯ ಸ್ವಾಮಿಗಳು, ಶ್ರೀ ಕಾರದ ವೀರ ಬಸವ ಸ್ವಾಮಿಗಳು, ಶ್ರೀ ಇಮ್ಮಡಿ ಬಸವರಾಜ ಸ್ವಾಮಿಗಳು, ಶ್ರೀ ವಿಜಯಕುಮಾರ ಸ್ವಾಮಿಗಳು ಉಪಸ್ಥಿತರಿರುತ್ತಾರೆ.
ಈ ಕಾರ್ಯಕ್ರಮದಲ್ಲಿ ವಿವಿಧ ಕಲಾತಂಡಗಳು ಭಾಗವಹಿಸಲಿದ್ದು, ಎಸ್‍ಐಟಿ ಕಾಲೇಜಿನ ನಿರ್ದೇಶಕರಾದ ಎಂ.ಎನ್. ಚನ್ನಬಸಪ್ಪನವರು ಕಲಾತಂಡಗಳ ಉದ್ಘಾಟನೆ ಮಾಡಲಿದ್ದಾರೆ.ಅಂದು ಡಾ.ಶಿವಕುಮಾರಯ್ಯ, ಡಾ.ಕೆ.ಪಿ.ಶಿವಾನಂದ್, ಪಾಲಿಕೆ ಸದಸ್ಯರಾದ ಟಿ.ಎಂ.ಮಹೇಶ್‍ಕುಮಾರ್, ಮಂಜುಳಾ ಆದರ್ಶ್, ನಿರ್ಮಲಾ ಶಿವಕುಮಾರ್, ದೀಪಶ್ರೀ ಮಹೇಶ್‍ಬಾಬು ಸೇರಿದಂತೆ ಇನ್ನಿತರರು ಆಗಮಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ವೀರಶೈವ ಸೇವಾ ಸಮಿತಿಯ ಉಪಾಧ್ಯಕ್ಷ ಎಸ್.ಜಿ.ಚಂದ್ರಮೌಳಿ, ಗೌರವ ಕಾರ್ಯದರ್ಶಿ ಎ.ಎಸ್.ರುದ್ರಕುಮಾರ್ ಆರಾಧ್ಯ, ಖಜಾಂಚಿ ಶಿವಲಿಂಗಮ್ಮ, ನಿರ್ದೇಶಕರುಗಳಾದ ಪಿ.ರವಿಶಂಕರ್, ಮೋಹನ್‍ಕುಮಾರ್ ಪಟೇಲ್, ಟಿ.ಎನ್.ರುದ್ರೇಶ್, ಎಂ.ಪ್ರಕಾಶ್, ಟಿ.ಆರ್.ನಟರಾಜು, ಡಿ.ಆರ್.ಮಲ್ಲೇಶಯ್ಯ, ಕೆ.ಜಿ.ಉಮೇಶ್‍ಕುಮಾರ್, ಆರ್.ಮಂಜುನಾಥ್, ಎಸ್.ಸುಮಾ ಮತ್ತಿತರರು ಉಪಸ್ಥಿತರಿದ್ದರು.
ಮೆರವಣಿಗೆ
ಉತ್ಸವವು ವೈಭವಯುತವಾಗಿ ನಡೆಯಲಿದ್ದು, ಈ ಉತ್ಸವವು ಎಸ್‍ಐಟಿ ಗಣಪತಿ ದೇವಾಲಯದಿಂದ ಹೊರಟು, ಗಂಗೋತ್ರಿ ರಸ್ತೆ, ಎಸ್‍ಐಟಿ ಮುಖ್ಯರಸ್ತೆ, ಎಸ್‍ಎಸ್‍ಪುರಂ, ಡಾ.ರಾಧಾಕೃಷ್ಣನ್ ರಸ್ತೆ, ಭದ್ರಮ್ಮ ವೃತ್ತ, ಜಯಶ್ರೀ ನರ್ಸಿಗ್ ಹೋಂ, ಕೆ.ಆರ್.ಬಡಾವಣೆ, ಶ್ರೀದೇವಿ ನರ್ಸಿಂಗ್ ಹೋಂ, ಎಂ.ಜಿ.ರಸ್ತೆ, ಅರಳೇಪೇಟೆ ಬಸವೇಶ್ವರ ದೇವಾಲಯದಿಂದ , ಜನರಲ್ ಕಾರ್ಯಪ್ಪ ರಸ್ತೆ ಮುಖಾಂತರ ಹೊರಪೇಟೆ ವೃತ್ತ, ಗುಂಚಿ ವೃತ್ತ, ಮಂಡಿಪೇಟೆ ಮುಖ್ಯರಸ್ತೆ, ಆಯುಲ್ ಮಿಲ್ ರಸ್ತೆ, ಹಳೆ ಪೊಲೀಸ್ ಸ್ಟೇಷನ್ ರಸ್ತೆ, ಚಿಕ್ಕಪೇಟೆ ವೃತ್ತದಿಂದ ವೀರಭದ್ರ ಸ್ವಾಮಿ ದೇವಾಲಯ ತಲುಪುತ್ತದೆ.