ದಾವಣಗೆರೆ:
ಬಸವ ಜಯಂತಿ ಪ್ರಯುಕ್ತ ವಿರಕ್ತಮಠದಿಂದ ಶ್ರೀಬಸವಪ್ರಭು ಸ್ವಾಮೀಜಿ ನೇತೃತ್ವದಲ್ಲಿ ಏರ್ಪಡಿಸಿರುವ ಬಸವ ಪ್ರಭಾತ್ ಫೇರಿಯು ಎರಡನೇ ದಿನವಾದ ಗುರುವಾರ ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿತು.ವಿರಕ್ತಮಠದಿಂದ ಆರಂಭವಾದ ಪಾದಯಾತ್ರೆ ಬಕ್ಕೇಶ್ವರ ದೇವಸ್ಥಾನ, ಮಹಾರಾಜಪೇಟೆ, ಗಾಂಧಿನಗರ, ಕಾಳಿಕಾದೇವಿ ರಸ್ತೆ ಮೂಲಕ ಮತ್ತೆ ವಿರಕ್ತಮಠಕ್ಕೆ ಮರಳಿ ಮುಕ್ತಾಯವಾಯಿತು .ರಸ್ತೆಯುದ್ದಕ್ಕೂ ಶ್ರೀಗಳನ್ನು ಹಾಗೂ ಬಸವಪ್ರಭಾತ ಫೇರಿಯನ್ನು ಭಕ್ತಿಪೂರ್ವಕವಾಗಿ ಭಕ್ತರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶ್ರೀಗಳ ಪಾದಪೂಜೆ, ಪುಷ್ಟಾರ್ಚನೆ ಕೆಲ ಭಕ್ತರು ನೆರವೇರಿಸಿದರು.
ಪ್ರಭಾತ್ ಪೇರಿಯಲ್ಲಿ ವೀರಶೈವ ತರುಣ ಸಂಘದ ಕಣಕುಪ್ಪಿ ಮುರುಗೇಶಪ್ಪ, ನಗರಸಭೆ ಮಾಜಿ ಅಧ್ಯಕ್ಷ ಎ.ನಾಗರಾಜ್, ಶಿವಶಿಂಪಿ ಸಮಾಜ ಗುರುಬಸಪ್ಪ ಬೂಸ್ನೂರು, ಹೆಮಣ್ಣ, ಭಾವಿಕಟ್ಟೆ ಜಗದೀಶ, ಶರಣಬಸವ, ಜಿ.ಎನ್.ಶಿವಕುಮಾರ್ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು. ಬಸವಕಲಾ ಲೋಕ ತಂಡದವರು ವಚನ ಜಾಗೃತಿ ಗೀತೆಗಳನ್ನು ಹಾಡಿದರು.