ವೆಬ್‍ಸೈಟ್‍ಗಳ ಮೂಲಕ ಇ-ಕಡತಗಳ ಮಾಹಿತಿಗೆ ಮನವಿ

ಬೆಂಗಳೂರು:

    ಸರಕಾರದ ಹಂತದಲ್ಲಿ ಪತ್ರವ್ಯವಹಾರದ ಸ್ಥಿತಿಗತಿಗಳ ಮಾಹಿತಿಯನ್ನು ಪಡೆಯಲು ಈ ಹಿಂದೆ ಸಚಿವಾಲಯ ವಾಹಿನಿಯಲ್ಲಿ ಇ-ಕಡತಗಳ ಪ್ರಗತಿ ತಿಳಿಯಬಹುದಿತ್ತು. ಇದೀಗ ಮತ್ತೆ ಹಳೆಯ ವ್ಯವಸ್ಥೆ ಕಲ್ಪಿಸಬೇಕು ಎಂದು ಮಾಜಿ ಸಭಾಪತಿ ಹಾಗೂ ಜೆಡಿಎಸ್‍ನ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಒತ್ತಾಯಿಸಿದ್ದಾರೆ.

    ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಇತ್ತೀಚೆಗೆ ಸರ್ಕಾರ ಎಲ್ಲಾ ಇಲಾಖೆಗಳ ಕಡತಗಳನ್ನು ಇ-ಆಫೀಸ್‍ನಲ್ಲಿ ಮಾಡುತ್ತಿರುವುದು ಸಂತಸದ ವಿಷಯ. ಇದು ತ್ವರಿತ ಮತ್ತು ಪಾರದರ್ಶಕವಾಗಿ ಉತ್ತಮ ಸ್ಥಿತಿಯಲ್ಲಿ ನಿರ್ವಹಣೆ ಆಗುತ್ತಿರುವುದಾಗಿ ತಿಳಿದು ಬಂದಿದೆ. ಸರ್ಕಾರದ ಎಲ್ಲಾ ಕೆಲಸ-ಕಾರ್ಯಗಳು, ಪತ್ರಗಳ ಮತ್ತು ಕಡತಗಳ ವಿಲೇವಾರಿ ಪಾರದರ್ಶಕವಾಗಿರಬೇಕೆಂಬ ಆಶಯ ಸರಿಯಾಗಿದೆ. ಆದರೆ ಇ-ಕಡತಗಳ ಸ್ಥಿತಿಗತಿಗಳ ಮಾಹಿತಿಯು ಮೊದಲಿನಂತೆ ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುತ್ತಿಲ್ಲ.

    ಈ ಮೊದಲು ಕಡತಗಳ ಮಾಹಿತಿಯನ್ನು ಸಚಿವಾಲಯ ವಾಹಿನಿಯಲ್ಲಿ ಪಡೆದುಕೊಳ್ಳುತ್ತಿದ್ದರು. ಸ್ಥಿತಿಗತಿಗಳನ್ನು ತಮ್ಮ ಊರುಗಳಿಂದಲೇ ತಿಳಿದುಕೊಳ್ಳುತ್ತಿದ್ದರು. ಆದರೆ ಈ-ಕಡತದ ವ್ಯವಸ್ಥೆಯಿಂದ ಯಾವುದೇ ಮಾಹಿತಿಯು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುತ್ತಿಲ್ಲ. ಇದನ್ನು ಸಂಬಂಧಪಟ್ಟ ಅಧಿಕಾರಿಗಳ ಮೂಲಕ ತಿಳಿದುಕೊಳ್ಳುವುದು ಸಾಮಾನ್ಯರಿಗೆ ಸಾಹಸ ಕೆಲಸವಾಗಿದೆ. ಮಾಹಿತಿ ಕೊರತೆಯಿಂದ ಸಾರ್ವನಿಕರು ತಮ್ಮ ದೂರದ ಊರುಗಳಿಂದ ಇದಕ್ಕಾಗಿಯೇ ಬೆಂಗಳೂರು ಕೇಂದ್ರ ಕಛೇರಿಗೆ ಅಥವಾ ಜಿಲ್ಲಾ ಕಛೇರಿಗಳಿಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಾರ್ವಜನಿಕರಿಗೆ ಸಮಯದ ಅಭಾವ ಮತ್ತು ಹೆಚ್ಚಿನ ಆರ್ಥಿಕ ಹೊರೆಯಾಗುತ್ತಿದೆ ಎಂದು ಹೇಳಿದ್ದಾರೆ.ಆದ್ದರಿಂದ, ಸಾರ್ವನಿಕರಿಗೆ ತಮ್ಮ ಪತ್ರವ್ಯವಹಾರಗಳ ಇ-ಕಡತಗಳ ಮಾಹಿತಿಯನ್ನು ಸುಲಭವಾಗಿ ಲಭ್ಯವಾಗುವಂತೆ ಸಚಿವಾಲಯ ವಾಹಿನಿ ಮತ್ತು ಸಂಬಂಧಪಟ್ಟ ಇಲಾಖೆಗಳ ವೆಬ್‍ಸೈಟ್‍ಗಳ ಮೂಲಕ ದೊರಕಿಸಿ ಕೊಡಬೇಕು ಎಂದು ಜಗದೀಶ್ ಶೆಟ್ಟರ್ ಮನವಿ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap