ಲಿಂಗಪ್ಪನಪಾಳ್ಯಕ್ಕೆ ಮೂಲ ಸೌಲಭ್ಯ ಒದಗಿಸಲು ಧರಣಿ

ಹುಳಿಯಾರು:

       ಹುಳಿಯಾರು ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಲಿಂಗಪ್ಪನಪಾಳ್ಯಕ್ಕೆ ಮೂಲ ಸೌಲಭ್ಯ ಒದಗಿಸುವಂತೆ ಗ್ರಾಮಸ್ಥರು ಪಂಚಾಯ್ತಿ ಎದುರು ಧರಣಿ ಮಾಡಿದ ಘಟನೆ ಸೋಮವಾರ ಜರುಗಿತು.

      20 ದಿನಗಳಿಂದ ನಮ್ಮೂರಿಗೆ ನೀರು ಬಿಟ್ಟಿಲ್ಲ ಅವರಿವರ ತೋಟ, ಜಮೀನಿಗೆ ಹೋಗಿ ನೀರು ತರಬೇಕಿದ್ದು ಐದಾರು ಕಿಮೀ ದೂರದಿಂದ ನೀರು ತರಬೇಕಿದೆ. ಮಹಿಳೆಯರು ನಿತ್ಯ ನೀರಿಗಾಗಿ ಪರದಾಡುವ ದೃಶ್ಯ ಇಲ್ಲಿ ಸಾಮಾನ್ಯವಾಗಿದೆ. ಈ ಬಗ್ಗೆ ಗ್ರಾಪಂ ಸದಸ್ಯರನ್ನು ಪ್ರಶ್ನಿಸಿದರೆ ಪಟ್ಟಣ ಪಂಚಾಯ್ತಿ ಆದ ಕ್ಷಣದಿಂದ ತಮ್ಮ ಅಧಿಕಾರ ಇಲ್ಲದಾಗಿದೆ. ನಮಗೇ 1.5 ಲಕ್ಷ ರೂ ಬಿಲ್ ಕೊಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎನ್ನುತ್ತಾರೆ ಎಂದು ಧರಣಿ ನಿರತ ರಾಜಮ್ಮ ಆರೋಪಿಸಿದರು.

        ಚರಂಡಿ ಕ್ಲೀನ್ ಮಾಡುವವರಿಲ್ಲ, ಕಸ ಹೊಡೆಯುವವರು ಇಲ್ಲ. 6 ತಿಂಗಳಿಂದ ಬೀದಿ ದೀಪ ಕಟ್ಟದೆ ಊರಿಗೆ ಊರು ಕತ್ತಲ್ಲೆಯಿಂದಿದೆ. ಈ ಬಗ್ಗೆ ಅಧ್ಯಕ್ಷರು, ಪಿಡಿಓ ಹಾಗೂ ಗ್ರಾಪಂ ಸದಸ್ಯರಿಗೆ ದೂರು ಸಲ್ಲಿಸಿದ್ದರೂ ಸ್ಪಂಧಿಸುತ್ತಿಲ್ಲ. ಹಾಗಾಗಿ ಕಛೇರಿ ಮುಂದೆ ಧರಣಿ ಕೈಗೊಂಡಿದ್ದು ತಕ್ಷಣ ಮೂಲ ಸೌಲಭ್ಯ ಕಲ್ಪಿಸದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಗ್ರಾಮದ ಹನುಂತಯ್ಯ ಎಚ್ಚರಿಸಿದರು.

        ಪಟ್ಟಣ ಪಂಚಾಯ್ತಿಯ ಅಧಿಕಾರಿಗಳಾದ ಜಿನೇಜ್ ಹಾಗೂ ಪ್ರದೀಪ್ ಅವರು ಧರಣಿ ಸ್ಥಳಕ್ಕೆ ಆಗಮಿಸಿ ಧರಣಿ ನಿರತರ ಅಹವಾಲು ಆಲಿಸಿ ಗ್ರಾಪಂ ಅಧಿಕಾರಿಗಳು ಇನ್ನೂ ನಮಗೆ ಅಧಿಕಾರ ಹಸ್ತಾಂತರಿಸಿಲ್ಲ. ಹಾಗಾಗಿ ನಾವು ಕ್ರಮ ಕೈಗೊಳ್ಳಲು ಕಾನೂನು ತೊಡಕಿದೆ. ಆದರೂ ಕುಡಿಯುವ ನೀರಿನ ಸಮಸ್ಯೆಯಾಗಿರುವುದರಿಂದ ಇಂದೇ ಮೋಟರ್ ರಿಪೇರಿ ಮಾಡಲು ಸೂಚಿಸುವುದಾಗಿ ಹೇಳಿ ಧರಣಿ ಹಿಂಪಡೆಯುವಂತೆ ಮಾಡಿದರು.

        ಧರಣಿಯಲ್ಲಿ ಗ್ರಾಮದ ಆರ್.ನಿಂಗಯ್ಯ, ಜಯಮ್ಮ, ಶಂಕರಣ್ಣ, ದುರ್ಗಯ್ಯ, ನಾಗರಾಜು, ಎಲ್.ಎಚ್.ರಾಜಣ್ಣ, ರೇಣುಕಮ್ಮ, ಲಕ್ಷ್ಮಮ್ಮ, ಮಂಜಮ್ಮ, ವಿನಯ್, ಹೊನ್ನಮ್ಮ, ನಾಗಮ್ಮ, ಕವಿತ, ರೂಪ, ನೀಲಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap