ರವೀಂದ್ರ ಕಲಾ ಕ್ಷೇತ್ರದಲ್ಲಿ ಬಸವ ಜಯಂತಿ ಕಾರ್ಯಕ್ರಮ

ಬೆಂಗಳೂರು

      ಇಸ್ರೋ ನಡೆಸಿರುವ ಅಧ್ಯಯನ ತಂತ್ರಜ್ಷಾನದ ನೆರವಿನಿಂದ ಮುನ್ನೆಚ್ಚರಿಕೆ ವಹಿಸಿ ಫನಿ ಚಂಡಮಾರುತದ ಹವಾಮಾನ ಇಲಾಖೆ ನೀಡಿದ್ದ ಮಾಹಿತಿಯಿಂದ ಲಕ್ಷಾಂತರ ಮಂದಿಯ ಸಾವು ನೋವುಗಳನ್ನು ತಪ್ಪಿಸಲು ಸಾಧ್ಯವಾಗಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ವಿಜ್ಞಾನಿ ಡಾ.ಕಿರಣ್ ಕುಮಾರ್ ಅವರು ತಿಳಿಸಿದ್ದಾರೆ.

       ಪ್ರತಿ 15 ನಿಮಿಷಗಳಿಗೊಮ್ಮೆ ಭೂಮಿಯ ಮೇಲಿನ ಚಿತ್ರಗಳನ್ನು ಬೇರೆ ಬೇರೆ ತರಂಗ ಆಂತರಗಳಿಂದ ನೋಡಿ ಹವಾಮಾನ ಇಲಾಖೆಗೆ ಮಾಹಿತಿ ಒದಗಿಸುವ ತಂತ್ರಜ್ಞಾನವನ್ನು ಇಸ್ರೋ ಒದಗಿಸಿ ಮಹತ್ವದ ಸಾಧನೆಯತ್ತ ಹೆಜ್ಜೆ ಇರಿಸಿದೆ ಎಂದರು.

        ಬಸವ ವೇದಿಕೆಯು ನಗರದ ರವೀಂದ್ರ ಕಲಾ ಕ್ಷೇತ್ರದಲ್ಲಿ ಏರ್ಪಡಿಸಿದ ಬಸವ ಜಯಂತಿ, ಬಸವಶ್ರೀ ಮತ್ತು ವಚನ ಸಾಹಿತ್ಯಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಬಸವಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ಇಸ್ರೋದಿಂದ ಉಡಾಯಿಸಿರುವ 4 ಉಪಗ್ರಹಗಳಿಂದ ವಿಶ್ವದ ಯಾವುದೇ ಭಾಗದಲ್ಲಿನ ಚಿತ್ರಣವನ್ನು ಒಂದು ನಿಮಿಷಗಳ ಕಾಲ ನೋಡಬಹುದಾದ ವ್ಯವಸ್ಥೆ ಸಾಧ್ಯವಾಗಿದೆ ಎಂದು ತಿಳಿಸಿದರು.

       ವಚನ ಸಾಹಿತ್ಯದಲ್ಲಿ ಅಡಗಿರುವ ಅಂಶಗಳನ್ನು ಜನ ಪಾಲಿಸಿದ್ದೇ ಆದರೆ ಭಾರತ ವಿಶ್ವದ ಗುರುವಾಗುವಲ್ಲಿ ಸಂದೇಹವೇ ಇಲ್ಲ. ಜ್ಞಾನ ತಂತ್ರಜ್ಞಾನ ಕೌಶಲ್ಯ ಬಳಸಿ ಸಮಾಜಕ್ಕೆ ಉಪಯುಕ್ತ ಸೇವೆ ಹಾಗೂ ಸಂದೇಶಗಳನ್ನು ನೀಡಬೇಕಾಗಿರುವುದು ನಮ್ಮೇಲ್ಲರ ಕರ್ತವ್ಯ ಎಂದರು.

       ವಚನ ಸಾಹಿತ್ಯಗಳಲ್ಲಿ ಅಡಗಿರುವ ವೈಜ್ಞಾನಿಕ ಅಂಶಗಳ ಅಧ್ಯಯನ ನಡೆಸುವುದು ಅತ್ಯಗತ್ಯ ಎಂದ ಅವರು ಸಮಾಜ ಸೇವೆಗೆ ಪುರಸ್ಕಾರ ಹಾಗೂ ಪ್ರಶಸ್ತಿಗಳನ್ನು ನೀಡುವುದು ಮತ್ತೊಬ್ಬರಿಗೆ ಉತ್ಸಾಹ ತುಂಬುವ ಉದ್ದೇಶದಿಂದ ಕೂಡಿದೆ. ಇಂದು ನನಗೆ ದೊರಕಿರುವ ಈ ಬಸವಶ್ರೀ ಪ್ರಶಸ್ತಿಯನ್ನು ನನ್ನ ವೈಯಕ್ತಿಕ ಸಾಧನೆಗಾಗಿ ಎಂದು ಪರಿಗಣಿಸದೇ ನನ್ನೊಂದಿಗೆ ಕೆಲಸ ನಿರ್ವಹಿಸಿದ ಇಸ್ರೋ ತಂಡದೊಂದಿಗೆ ಹಂಚಿಕೊಳ್ಳಲು ಇಷ್ಟ ಪಡುತ್ತೇನೆ ಎಂದರು.

        ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಈ ಹಿಂದೆ ರಾಜ್ಯದಲ್ಲಿ ಅನೇಕ ಧಾರ್ಮಿಕ ಹಾಗೂ ಸಮಾಜ ಸುಧಾರಕರಿದ್ದರು. ಅವರ ಆದರ್ಶಗಳು ಪಾಲನೆಯಾಗಬೇಕು. ಬಸವಣ್ಣ ಅವರ ವಚನಗಳಲ್ಲಿ ಉತ್ತಮ ಸಂದೇಶವಿದೆ. ಜನತೆಯೇ ಆಡಳಿತ ನಡೆಸಬೇಕು ಎನ್ನುವ ಪ್ರಜಾಪ್ರಭುತ್ವದ ಕಲ್ಪನೆಯನ್ನು ಪರಿಚಯಿಸಿದವರು ಬಸವಣ್ಣ ನವರು ವಚನ ಸಂಸ್ಕೃತಿಯಲ್ಲಿ ನಮ್ಮ ಮುಂದಿನ ಪೀಳಿಗೆಗೂ ಉತ್ತಮ ಸಂದೇಶವಿದೆ ಎಂದು ಬಣ್ಣಿಸಿದರು.ಕಾರ್ಯಕ್ರಮದಲ್ಲಿ ಕವಿ ಜರಗನಹಳ್ಳಿ ಶಿವಶಂಕರ್ ಹಾಗೂ ಸಾಹಿತಿ ಡಾ.ನ. ಮೊಗಸಾಲೆ ಅವರಿಗೆ ವಚನ ಸಾಹಿತ್ಯ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

      ವೇದಿಕೆಯಲ್ಲಿ ತೋಂಟದ ಸಿದ್ದಲಿಂಗಶ್ರೀಗಳು ವಚನಾನಂದ ಶ್ರೀಗಳು, ಹಿರಿಯ ನಟಿ ಜಯಶ್ರೀ, ಆಳ್ವಾ ಸಂಸ್ಥೆ ಸಂಸ್ಥಾಪಕ ಡಾ.ಮೋಹನ್ ಆಳ್ವಾ, ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link