ಕಾಯಕದ ಮೂಲಕ ಪ್ರತಿಯೊಬ್ಬರೂ ದುಡಿದು ತಿನ್ನಬೇಕು ಎಂಬ ತತ್ವವನ್ನು ಕೊಟ್ಟವರು ಬಸವಣ್ಣನವರು.

ಹೊಸದುರ್ಗ:

     ಕಾಯಕದ ಮೂಲಕ ಪ್ರತಿಯೊಬ್ಬರೂದುಡಿದುತಿನ್ನಬೇಕು ಎಂಬ ತತ್ವವನ್ನುಕೊಟ್ಟವರು ಬಸವಣ್ಣನವರು,ಬರುಡಾದ ಬದುಕಿಗೆ ಭರವಸೆಚಲ್ಲಿದವರು ಬಸವಣ್ಣನವರು,ದಲಿತರ ಹಿಂದುಳಿದ ಶೋಷಿತರದಮನಿತರ ಬೆಳಕಾಗಿ ದಾರಿ ತೋರಿಸಿದ ದಾರ್ಶನಿಕ ಗುರುಗಳುಎಂದುಕುಂಚಿಟಿಗ ಮಠದಡಾ.ಶಾಂತವೀರ ಸ್ವಾಮೀಜಿ ತಿಳಿಸಿದರು.

     ಪಟ್ಟಣದ ಕುಂಚಟಿಗ ಮಠದಲ್ಲಿ ಆಯೋಜಿಸಿದ್ದ ವಿಶ್ವ ಬಸವ ಜಯಂತಿಆಚರಣೆ ಸಮಾರಂಭದಲ್ಲಿ ಆಶ್ರ್ರೀವಚನ ನೀಡಿದರು.
ನಂತರ ಮಾತನಾಡಿದಅವರು ಬಸವಣ್ಣನವರುಅಂತರ್ಜಾತಿಯಅಂತರ್‍ಧರ್ಮಿಯರಕಲ್ಯಾಣ ಮಹೋತ್ಸವ ಮಾಡುವುದರ ಮೂಲಕ ಮಹಿಳಾ ಸ್ವತಂತ್ರಕಾಯಕ ಪ್ರಧಾನ ಸಮಾಜ ವರ್ಗಕ್ಕೆ ಹೋರಾಡಿದವರು.ನಡೆ ನುಡಿಒಂದಾದ ಸಾಕಾರ ಮೂರ್ತಿ, ವಿಭೂತಿ ಪುರುಷ,12 ನೇ ಶತಮಾನದಲ್ಲಿ ನಡೆಯುವ ವಿದ್ಯಾಮಾನಗಳನ್ನು ಎಳೆ ಎಳೆಯಾಗಿ ತಿಳಿಸಿದ ಕಾಲಜ್ಞಾನಿ.ಕಳ್ಳನನ್ನು ಸಾಕ್ಷತ್‍ಕೂಡಲಸಂಗಮ ದೇವರುಎಂದು ಸಂಭೋದಿಸಿ ಪರಿವರ್ತಿಸಿದವರು ಬಸವಣ್ಣನವರುಎಂದರು.

      ಅನುಭವ ಮಂಟಪವು ಶರಣ ಸಂಸ್ಕøತಿಯುಕಾಯಕಸಂಸ್ಕøತಿಯ ಪ್ರತೀಕ.ಜಾತಿಯನ್ನು ಹೋಗಲಾಡಿಸಲುಕಾಯಕದಜ್ಯೋತಿಯನ್ನು ಹಚ್ಚಿ ದೀನದಲಿತರ ಹೃದಯದಲ್ಲಿಅನುಭವದ ಸಾಹಿತ್ಯವನ್ನು ಭಿತ್ತಿ ಬೆಳೆದವರು ಬಸವಣ್ಣನವರು.12 ನೇ ಶತಮಾನದಲ್ಲಿ ಮಹಿಳೆಯರಗೆ ನೂರಕ್ಕೆ ನೂರರಷ್ಟು ಸ್ವತಂತ್ರ ನೀಡಿದ ಮೊದಲಿಗರು.ಅನುಭವ ಮಂಟಪವುಅನುಭವದಆಧಾರದ ಮೇಲೆ ಸಮಾಜವನ್ನುಕಟ್ಟುವ ಕೆಲವನ್ನು ಮಾಡಿದವರು ಶರಣರು.

       ಸರ್ವರುತಮ್ಮತಮ್ಮ ದೋಷಗಳನ್ನು ತಿದ್ದಿಕೊಂಡು ಮಾನವ ಮಹದೇವನಾಗಿ ಶ್ರೇಷ್ಠರಾಗಬಹುದೆಂಬ ಸಾರಿದವರು ಜಗಜ್ಯೋತಿ ಬಸವಣ್ಣನವರು. ದಮನಿತರದನಿಯಾಗಿದರಿದ್ರವನ್ನುಓಡಿಸುವಕಾಯಕ ಮಂತ್ರದಂಡ ನೀಡಿದಕಾರುಣ್ಯ ಪುರುಷ. ಸ್ರ್ತಿ ಪುರುಷ ಸಮಾನತೆಗೆ ಮನೆಯನ್ನುತೊರೆದ ಮಹಾತ್ಮ ಸಮಾಜದಕಟ್ಟಿದ ಸಮಾಜ ಸುಧಾರಕ ದೀನ ದಲಿತರನ್ನುದಯಾಮೂರ್ತಿಕೌಶಲ್ಯಕ್ಕಿಂತಕರುಣೆದೊಡ್ಡದೆಂದು ಹೇಳಿದವರು ಬಸವಣ್ಣನವರುಎಂದು ಹೇಳಿದರು.

       ಇದೇ ವೇಳೆ ತಾಲ್ಲೂಕು ಬಿಸಿಎಂ ವಿಸ್ತಿರ್ಣಾಧಿಕಾರಿ ಶಶಿಕುಮಾರ್, ಸ್ವಾಮಿ ವಿವೇಕಾನಂದ ಮಹಿಳಾ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ಹನುಮಂತಪ್ಪ, ಉಪನ್ಯಾಸಕ ನಾಗೇಂದ್ರಪ್ಪ, ಚನ್ನರಾಯಪ್ಪ, ಮಾಹಂತೇಶ್, ಕಿಶೋರ್, ವಸಂತ್‍ಕುಮಾರ್, ಹಾಗೂ ಭಕ್ತಾಧಿಗಳು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap