ಮಧುಗಿರಿ:
ಮಳೆ ನೀರನ್ನು ಶೇಖರಿಸಲು ರಾಜ್ಯ ಸರಕಾರ ಹಲವಾರು ಯೋಜನೆಗಳನ್ನು ರೂಪಿಸಿ ಅನೇಕ ಆದೇಶಗಳನ್ನು ಹೊರಡಿಸಿದೆ ಆದರೆ ಕಡ್ಡಾಯವಾಗಿ ಆದೇಶ ಪಾಲಿಸುವವರು ಮಾತ್ರ ಬೇರಳೆಣಿಕೆಯಷ್ಟೂ ಮಾತ್ರ ತಾಲ್ಲೂಕಿನ ಕೆಲವು ಕಡೆ ನೀರೆ ಹರಿಯದಂತಹ ಸ್ಥಳಗಳಲ್ಲಿ ಮಳೆಯ ಕೊಯ್ಲು ಕಾಮಗಾರಿಯನ್ನು ಮಾಡಿರುವುದು ಗೋಚರವಾಗುತ್ತಿದೆ ಆದರೆ ಇಂತಹ ಪದ್ದತಿಯನ್ನು ಮಧುಗಿರಿಯ ಪುರಸಭೆ ಆಳವಡಿಸಿಕೊಂಡು ಸದ್ಯ ಸ್ವಲ್ಪ ಮಟ್ಟಿಗೆ ಯಶಸ್ಸು ಕಂಡಿದೆ.
ಪುರಸಭೆಯ ಹಳೆಯ ಕಟ್ಟಡ, ಮಾಲೀಮರಿಯಪ್ಪ ರಂಗಮಂದಿರದ ಮೇಲ್ಚಾವಣಿ ಹಾಗೂ ಕೆಲ ಕಟ್ಟಡಗಳು ಸೇರಿದಂತೆ ಆವರಣದಲ್ಲಿ ಸುರಿಯುವ ಮಳೆಯ ನೀರು ವ್ಯರ್ಥವಾಗದಂತೆ ತಡೆ ಹಿಡಿದು ಹಾಗೂ ಅಂರ್ತಜಲ ಮಟ್ಟ ಹೆಚ್ಚಿಸುವ ಸಲುವಾಗಿ ಇತ್ತೀಚೆಗೆ ಪುರಸಭೆಯ ಆವರಣದಲ್ಲಿನ ಉದ್ಯಾವನದಲ್ಲಿ ಕೆಲವು ವರ್ಷಗಳಿಂದ ನೀರಿಲ್ಲದೆ ಬತ್ತಿ ಹೋಗಿದ್ದ ಬೋರ್ ವೆಲ್ ಸುತ್ತಾ ಹನ್ನೆರಡು ಅಡಿ ಉದ್ದಗಲ ಮತ್ತು ಆಳದ ಗುಂಡಿಯನ್ನು ತೆಗೆದು ಅಂದಾಜು 95 ಸಾವಿರ ರೂ ವೆಚ್ಚದಲ್ಲಿ ನಿರ್ಮಿಸಿ ಜಲ ಮರು ಪೂರಣದ ಕಾಮಗಾರಿಯನ್ನು ಆರಂಭಿಸಲಾಗಿದೆ.
ಮಂಗಳವಾರ ರಾತ್ರಿ ಪಟ್ಟಣದಲ್ಲಿ ಮಳೆ ಸುರಿದ ಪರಿಣಾಮ ಮೊದಲ ಪ್ರಯತ್ನದಲ್ಲಿಯೇ ವ್ಯರ್ಥವಾಗಿ ಮೋರಿ ಸೇರುತ್ತಿದ್ದ ಮಳೆಯ ನೀರು ಶುದ್ಧಗೊಂಡು ನೇರವಾಗಿ ಬತ್ತಿದ್ದ ಕೊಳವೆ ಬಾವಿಗೆ ಹರಿದಿದೆ. ನಮ್ಮ ತಾಲ್ಲೂಕಿನಲ್ಲಿ ವರ್ಷ ಪೂರ್ತಿಯಾಗಿ ಸುಮಾರು 500 ಮಿ.ಮೀ ನಷ್ಟು ಮಳೆಯಾಗುತ್ತದೆ.
ಒಂದು ಎಕರೆಯ ಜಮೀನಿನಲ್ಲಿ ವ್ಯರ್ಥವಾಗಿ ಮಳೆಯ ನೀರು ಹರಿಯಲು ಬಿಡದೆ ತಡೆಗಟ್ಟಿ ಬತ್ತಿರುವ ಒಂದು ಕೊಳವೆ ಬಾವಿಗೆ ಹರಿಸಿದರೆ 24 ಲಕ್ಷದಷ್ಟು ಲೀ ನೀರುನ್ನು ಉಳಿಸದಂತಾಗುತ್ತದೆ ಹಾಗೂ ಈಗ ನಾವು ಸಾವಿರಾರು ವರ್ಷಗಳ ನೀರನ್ನು ಮೇಲಕ್ಕೆ ತೆಗೆಯುತ್ತಿದ್ದೆವೆ ಈ ರೀತಿಯ ನೀರನ್ನು ಬತ್ತಿರುವ ಕೊಳವೆ ಬಾವಿಗಳಿಗೆ ಹರಿಸಿದರೆ ಮತ್ತೆ ಕೆಲ ವರ್ಷಗಳಲ್ಲಿ ಜಲ ಮರು ಪೂರ್ಣವಾಗುತ್ತವೆ ಎಂಬುದು ಅಧಿಕಾರಿಗಳ ಅಭಿಪ್ರಾಯ.
ಪುರಸಭೆಯ ಮುಖ್ಯಾಧಿಕಾರಿ ಲೋಹಿತ್ ಮಾತನಾಡಿ ಈ ಕಾಮಗಾರಿಯು ಪುರಸಭೆಯ ಮೊದಲ ಪ್ರಯತ್ನ ವಾಗಿದೆ ಹಾಗೂ ಬರಗಾಲದಲ್ಲಿ ಮಳೆಯ ನೀರು ಹಿಂಗಿರುವುದು ಖುಷಿ ತಂದಿದೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಜಲ ಮರುಪೂರ್ಣದ ಉದ್ದೇಶಕ್ಕಾಗಿ 10 ಲಕ್ಷ ರೂಗಳ ಅನುದಾನ ಬೇಡಿಕೆಯಿಡಲಾಗಿದೆ. ಕೆಲ ವಾರ್ಡ್‍ಗಳಲ್ಲಿ ಕಾಮಗಾರಿಯನ್ನು ಅನುಷ್ಟಾನ ಮಾಡಲಾಗುವುದು. ಮಳೆಯ ನೀರನ್ನು ವ್ಯರ್ಥವಾಗಲು ಬಿಡಬಾರದು ಈ ಯೋಜನೆ ಸಾಕಾರ ಕೊಂಡರೆ ನಾವು ಹೇಮಾವತಿ ನೀರಿಗೆ ಅಷ್ಟಾಗಿ ಅವಲಂಬಿತರಾಗಬೇಕಾಗಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
