ಹರಪನಹಳ್ಳಿ:
ತಾಲೂಕಿನ ಮೈದೂರು ಗ್ರಾಮ ಪಂಚಾಯಿತಿಯ ಭಾವಿಹಳ್ಳಿ ಗ್ರಾಮದ ಮುಖಂಡರು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ತೊರೆದು ಶಾಸಕ ಜಿ.ಕರುಣಾಕರರೆಡ್ಡಿ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಪಟ್ಟಣದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಸೇರ್ಪಡೆಯಾದರು.ಬಾವಿಹಳ್ಳಿ ಗ್ರಾಮದ ಎನ್.ಲಿಂಗೇಶ್, ನಿರ್ವಾಣಿ ಕೊಟ್ರೇಶಪ್ಪ, ಉಡುಪಿ ಹಾಲೇಶಪ್ಪ, ಹಾಗೂ ಇತರರು ಸೇರ್ಪಡೆಗೊಂಡ ಮುಖಂಡರು.ಇದೇ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಸತ್ತೂರು ಹಾಲೇಶ್, ಕಾರ್ಯದರ್ಶಿ ಬಾವಿಹಳ್ಳಿ ಉದಯಕುಮಾರ್, ಜಿಲ್ಲಾ ಉಪಾಧ್ಯಕ್ಷ ಎಂ.ಪಿ.ನಾಯ್ಕ್, ಸೇರಿದಂತೆ ಇತರ ಮುಖಂಡರು ಹಾಜರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ