ಏಪ್ರಿಲ್ 20 ರಂದು ಬಿಬಿಎಂಪಿ ಬಜೆಟ್ ಮಂಡನೆ : ಅಶೋಕ್

ಬೆಂಗಳೂರು

      ಈ ಬಾರಿಯ ಬಿಬಿಎಂಪಿ ಬಜೆಟ್ ಏಪ್ರಿಲ್ 20 ರಂದು ಮಧ್ಯಾಹ್ನ 12 ಗಂಟೆಗೆ ಮಂಡನೆಯಾಗಲಿದ್ದು ಸಾಮಾಜಿಕ ಅಂತರ ಪಾಲನೆ ಮಾಡಲಾಗುತ್ತದೆ, ಸದಸ್ಯರಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ನೀಡುವ ಕೆಲಸ ಮಾಡಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

    ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,ಬಿಬಿಎಂಪಿ ಬಜೆಟ್ ಅನುಮೋದನೆ ಬಹಳ ಮುಖ್ಯವಾದ ವಿಷಯ, ಕೊರೊನಾ ಕಾರಣದಿಂದ ಮುಂದೂಡಿಕೆ ಮಾಡಿದ್ದೆವು, ಲಾಕ್ ಡೌನ್ ಮತ್ತೆ ಮುಂದುವರೆದ ಕಾರಣ ಈಗ ಅನಿವಾರ್ಯವಾಗಿ ಮಂಡನೆ ಮಾಡಲೇಬೇಕು, ಹಣಕಾಸು ವ್ಯಯಕ್ಕೆ ಅನಿವಾರ್ಯ ಹಾಗಾಗಿ ಸಿಎಂ,ಮೇಯರ್, ಸ್ಥಾಯಿ ಸಮಿತಿ ಅಧ್ಯಕ್ಷರ ಜೊತೆ ಚರ್ಚೆ ನಡೆಸಿದ್ದು, ಬಜೆಟ್ ಅನ್ನು ಏಪ್ರಿಲ್ 20 ರಂದು 12 ಗಂಟೆಗೆ ಕೌನ್ಸಿಲ್ ಸಭೆಯಲ್ಲಿ ಮಂಡನೆಗೆ ಒಪ್ಪಿಗೆ ನೀಡಲಾಗಿದೆ ಎಂದರು.

    ಲಿಮಿಟೆಡ್ ಸದಸ್ಯರು ಮಾತ್ರ ಭಾಗಿಯಾಗಲಿದ್ದಾರೆ ಮೇಯರ್,ಉಪ ಮೇಯರ್, ಸ್ಥಾಯಿ ಸಮಿತಿ ಸದಸ್ಯರು, ಪ್ರತಿಪಕ್ಷ ನಾಯಕ, ಆಡಳಿತ ಪಕ್ಷದ ನಾಯಕ, ಕೆಲ ಮಂತ್ರಿ, ಆಯುಕ್ತರು ಮಾತ್ರ ಭಾಗಿಯಾಗಲಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತದೆ, ವೀಡಿಯೋ ಕಾನ್ಫರೆನ್ಸ್ ಮೂಲಕ ಸದಸ್ಯರಿಗೆ ಮಾಹಿತಿ ಕೊಡಲಾಗುತ್ತದೆ. ಈ ತರ ಬಜೆಟ್ ಮಂಡಿಸಲು ಕಾನೂನಾತ್ಮಕ ಅನುಮೋದನೆ ಪಡೆಯಲು ಮಾತುಕತೆ ನಡೆಸಿ ಅಂತಿಮವಾಗಿ ನಿರ್ಧಾರ ಕೈಗೊಂಡಿದೆ ಎಂದರು.

   ಒಳ್ಳೆಯ ಬಜೆಟ್  ಮಂಡಿಸಲಿದ್ದಾರೆ ಎನ್ನುವ ವಿಶ್ವಾಸವಿದೆ ಬಜೆಟ್ ಗಾತ್ರದ ಬಗ್ಗೆ ಅವರು ತೀರ್ಮಾನ ಮಾಡಲಿದ್ದಾರೆ,ಕಳದ ಬಾರಿ 16 ಸಾವಿರ ಕೋಟಿ ಇತ್ತು ಆದಷ್ಟು ಬೇಡ ಕಡಿಮೆ ಮಾಡಿ ಎಂದು‌ ಸಲಹೆ ನೀಡಿದ್ದೇವೆ ಎಂದರು.

    ಪ್ರತಿ ವಾರ್ಡ್ ಗೆ ಕೋವಿಡ್ -19 ಗಾಗಿ 25 ಲಕ್ಷ ಮೀಸಲು ಇಡಲಾಗಿದೆ,ಒಟ್ಟು 50 ಕೋಟಿ ಆಗಲಿದೆ, ಅದಕ್ಕೆ ಈಗಾಗಲೇ ಒಪ್ಪಿಗೆ ನೀಡಲಾಗಿದೆ ಔಷಧಿ,ಕೂಲಿ ಕಾರ್ಮಿಕರಿಗಾಗಿ ಮೀಸಲಿರಿಸಲಾಗಿದೆ ಉಳಿದದ್ದು ಬಜೆಡ್ ನಲ್ಲಿ ಬರಲಿದೆ ಎಂದರು.

     ಅಕ್ರಮ ಸಕ್ರಮ ಸುಖಾಂತ್ಯ ಕಾಣುವ ತೀರ್ಮಾನ ಮಾಡಿದ್ದೇವೆ, ಅಕ್ರಮ ಸಕ್ರಮ 2007 ರ ಕಾಯ್ದೆ 2014 ರಲ್ಲಿ ಮತ್ತಷ್ಟು ಸುಧಾರಣೆಯಾಯಿತು, ನಂತರ ಹೈಕೋರ್ಟ್ ಗೆ ಹೋಗಿ, ಸುಪ್ರೀಂ ಕೋರ್ಟ್ ಗೆ ಹೋಗಿ‌ ತಡೆ ತರಲಾಗಿತ್ತು ಈಗ ಬಡವರ ನಿವೇಶನ ಸಕ್ರಮಕ್ಕೆ ನಿರ್ಧರಿಸಿದ್ದೇವ ನಾವೇ ದರ ನಿಗದಿ ಮಾಡಲಿದ್ದೇವೆ, ಬಿಲ್ಡರ್ ಗಳಿಗೆ,ಡೆವಲಪರ್ ಗಳಿಗೆ ಇದರಿಂದ ಉಪಯೋಗ, ಅನುಕೂಲ ಆಗಬಾರದು, ಬಡವರು ಮಧ್ಯಮ ವರ್ಗದವರಿಗೆ ಮಾತ್ರ ಅನುಕೂಲವಾಗಲು ಈ ಕಾಯ್ದೆ ಬಂದಿದೆ. ಅದನ್ನು ನ್ಯಾಯಾಲಯದಲ್ಲೂ ರಿಲೀಫ್ ಪಡೆಯಲು ನಿರ್ಧರಿಸಲಾಗಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap