ಚಿಕ್ಕನಾಯಕನಹಳ್ಳಿ
ಮನೆಗೆ ಹಾಗೂ ಸಮಾಜಕ್ಕೆ ಒಳ್ಳೆಯ ವ್ಯಕ್ತಿಗಳಾಗಿ ಬಾಳಿ ಎಂದು ತಿಪಟೂರು ಡಿವೈಎಸ್‍ಪಿ ವೇಣುಗೋಪಾಲ್ ಸಲಹೆ ನೀಡಿದರು.
ಪಟ್ಟಣದ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ಮುಂಭಾಗ ತಾಲ್ಲೂಕಿನ ರೌಡಿಶೀಟರ್ ಹಾಗೂ ಎಂ.ಓ.ಬಿಗಳ ತಪಾಸಣೆ ಪರೇಡ್‍ನಲ್ಲಿ ಮಾತನಾಡಿದ ಅವರು, ನಿಮ್ಮನ್ನು ಕರೆಸಿರುವುದು ಹಿಂದೆ ತಪ್ಪು ಮಾಡಿರಬಹುದು ಆ ತಪ್ಪು ಮುಂದೆ ಮಾಡಬೇಡಿ ಎಂದು. ಮಾಡಿರುವ ತಪ್ಪನ್ನು ತಿದ್ದಿಕೊಂಡು ಬಾಳಿ, ಕಾನೂನಿನಲ್ಲಿ ತಿದ್ದಿಕೊಳ್ಳುವ ಅವಕಾಶವಿದ್ದು ಸರಿಯಾಗಿ ಬಾಳಿ ಎಂದು ಎಚ್ಚರಿಕೆ ನೀಡಲು ಇಲ್ಲಿಗೆ ಕರೆಸಿದ್ದೇವೆ. ಮುಂದೆ ತಿದ್ದಿಕೊಂಡು ಬಾಳದೆ ಇದ್ದರೆ ಗೂಂಡಾಕಾಯ್ದೆ ಅಡಿಯಲ್ಲಿ ಕೇಸು ದಾಖಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ತಾಲ್ಲೂಕಿನ ಮೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 77ರೌಡಿ ಶೀಟರ್‍ಗಳು, 11ಜನ ಕಮ್ಯುನಲ್ ಗುಂಡಾಗಳು ಹಾಗೂ 142 ಎಂ.ಓ.ಬಿಗಳು ಇದ್ದಾರೆ. ಚಿ.ನಾ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ 32ಜನ, ಹುಳಿಯಾರಿನಲ್ಲಿ 22 ಹಾಗೂ ಹಂದನಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 23ಜನ ರೌಡಿ ಶೀಟರ್‍ಗಳು ಇದ್ದಾರೆ ಎಂದರು.
ಸರ್ಕಲ್ ಇನ್ಸ್‍ಪೆಕ್ಟರ್ ಕೆ.ಸುರೇಶ್ ಮಾತನಾಡಿ, ಕೆಲವರು ಮರಳು ದಂಧೆ, ಇಸ್ಪೀಟು ಹಾಗೂ ಮಟ್ಕಾ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ನಿಲ್ಲಬೇಕು ಎಂದು ಎಚ್ಚರಿಕೆ ನೀಡಿದ ಅವರು, ಕರೆದ ತಕ್ಷಣ ಠಾಣೆಗೆ ಹಾಜರಾಗಬೇಕು. 24ಗಂಟೆಯೂ ನಿಮ್ಮ ಚಟುವಟಿಕೆಗಳನ್ನು ಪೊಲೀಸ್ ಇಲಾಖೆ ಗಮನಿಸುತ್ತಿರುತ್ತದೆ, ಅನುಮಾನ ಬಂದಲ್ಲಿ ಅಂತಹವರನ್ನು ಠಾಣೆಗೆ ಕರೆದು ವಿಚಾರಣೆ ಮಾಡಿ ನಂತರ ಕ್ರಮ ಕೈಗೊಳ್ಳುತ್ತೇವೆ, ನೀವು ಸಮಾಜ ವಿರೋಧಿ ಚಟುವಟಿಕೆಗಳನ್ನು ನಿಲ್ಲಿಸಿ ನೆಮ್ಮದಿಯಾಗಿ ಸಮಾಜದಲ್ಲಿ ಬಾಳುವಂತೆ ತಿಳಿಸಿದರು.ಈ ಸಂದರ್ಭದಲ್ಲಿ ಸಬ್‍ಇನ್ಸ್‍ಪೆಕ್ಟರ್ ಮಂಜುನಾಥ್, ಹುಳಿಯಾರು ಹಾಗೂ ಹಂದನಕೆರೆ ಪೊಲೀಸ್ ಇನ್ಸ್‍ಪೆಕ್ಟರ್‍ಗಳು ಹಾಜರಿದ್ದರು.