ತುಮಕೂರು:
ಕೋರೋನ ವೈರಸ್ ಬಗ್ಗೆ ಯಾವುದೇ ಯಾವುದೇ ಭಯ ಬೇಡ, ಆದರೆ ಅಲಸ್ಯ ಮಾಡದೇ ಎಚ್ಚರಿಕೆಯಿಂದ ಎದರಿಸೋಣ, ವಿದೇಶಗಳಲ್ಲಿ ಕೋವಿಡ್ 19 ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಿದ್ದು, ಭಾರತದಲ್ಲಿ ಅಲ್ಪ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಇದ್ದು, ಇದರ ಬಗ್ಗೆ ಜಾಗೃತಗೊಂಡು ಮುನ್ನಚ್ಚರಿಕೆ ವಹಿಸಿದರೆ, ಈ ವೈರಸನ್ನು ತಡೆಯಬಹುದು ಎಂದು ತುಮಕೂರು ನಗರ ಶಾಸಕ ಜಿ,ಬಿ, ಜ್ಯೋತಿಗಣೇಶ್ ತಿಳಿಸಿದರು.
ಅವರು ತುಮಕೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ವೈದ್ಯರೊಂದಿಗೆ ಸಭೆ ನಡೆಸಿ, ಕೋರೋನ ವೈರಸ್ ಬಗ್ಗೆ ಜಿಲ್ಲೆಯಲ್ಲಿ ತೆಗೆದುಕೊಂಡಿರುವ ಮುಂಜಾಗ್ರತ ಕ್ರಮಗಳ ಬಗ್ಗೆ ಮಾಹಿತಿ ಪಡೆದು ಮಾತನಾಡುತ್ತಾ, ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಗಳಲ್ಲಿ 100 ರಿಂದ 150 ಹಾಸಿಗೆ ವ್ಯವಸ್ಥೆಯನ್ನು ಕೋರೊನ ಸೋಂಕಿತರಿಗೆ ಎಂದು ಮೀಸಲಿಡಲಾಗಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ವ್ಯಾಪಕವಾಗಿ ಆರೋಗ್ಯ ಜಾಗೃತಿಯನ್ನು ಮೂಡಿಸಲಾಗುತ್ತಿದೆ ಎಂದರು, ಸಾರ್ವಜನಿಕರು ಸ್ವಯಂ ಜಾಗೃತರಾಗಿ ಖಾಯಿಲೆ ಇರುವವರ ಬಳಿ ತೆರಳದೆ ಅಂತರ ಕಾಯ್ದುಕೊಳ್ಳಬೇಕು, ಜನರು ಗುಂಪು ಗುಂಪಾಗಿ ಸೇರುವುದನ್ನು ನಿಯಂತ್ರಣ ಮಾಡಬೇಕು, ಹಲವಾರು ಬಾರಿ ಕೈಗಳನ್ನು ತೊಳೆದುಕೊಂಡು ಶುಚಿಯಾಗಿಟ್ಟುಕೊಳ್ಳಬೇಕು, ಪದೇ ಪದೇ ಕಣ್ಣು, ಮೂಗು, ಬಾಯಿಯನ್ನು ಕೈಗಳಿಂದ ಮುಟ್ಟಿಕೊಳ್ಳಬೇಡಿ ಎಂದು ತಿಳಿಸಿದರು.
ತುಮಕೂರು ಜಿಲ್ಲಾ ಆಸ್ಪತ್ರೆಯ ಸಹಾಯವಾಣಿ ದೂರವಾಣಿ ಸಂಖ್ಯೆ , 0816-2278387 ಹಾಗೂ 0816-2251414 ಈ ಸಂಖ್ಯೆಗಳಿಗೆ ಸಾರ್ವಜನಿಕರು ಸಂಪರ್ಕಿಸಬಹುದಾಗಿದೆ. ಈ ಸಭೆಯಲ್ಲಿ ತುಮಕೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಗಳಾದ ಡಾ. ಚಂದ್ರಿಕಾ, ಜಿಲ್ಲಾ ಸರ್ಜನ್ ಡಾ. ವೀರಭದ್ರಯ್ಯ ಹಾಗೂ ಹಿರಿಯ ವೈದ್ಯಧಿಕಾರಿಗಳು ಪಾಲ್ಗೋಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ