ನೀರಿನ ಬಗ್ಗೆ ಜಾಗೃತಿ ಮೂಡಿಸಿ : ಅಶ್ವಥ್ ನಾರಾಯಣ

ಬೆಂಗಳೂರು

   ನಗರದ ಹಲವಡೆ ವ್ಯರ್ಥವಾಗಿ ಪೋಲಾಗುವುದು ಸೋರಿಕೆ ಉಂಟಾಗುವುದನ್ನು ತಡೆಗಟ್ಟಿದರೆ, ಮತ್ತಷ್ಟು ಪ್ರದೇಶಕ್ಕೆ ನೀರು ಸರಬರಾಜು ಮಾಡಬಹುದಾಗಿದೆ ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ತಿಳಿಸಿದರು.ಕಾವೇರಿ ನದಿ ನೀರು ಹಂಚಿಕೆಯ ಪೈಪ್ ಲೈನ್, ಕುಡಿಯುವ ನೀರಿನ ಸಣ್ಣಪುಟ್ಟ ಪೈಪ್ ಲೈನ್ ಗಳಲ್ಲಿ ಸೋರಿಕೆಯಾಗುತ್ತಿದ್ದರುವುದು ಹಲವೆಡೆ ಗೊತ್ತಾಗದಂತೆ ಪೋಲಾಗುವುದನ್ನು ಈಗಾಗಲೇ ತಡೆಗಟ್ಟಲು ಕಾರ್ಯ ಚಾಲ್ತಿಯಲ್ಲಿದೆ. ಇದರಿಂದ, ಲಕ್ಷಾಂತರ ಲೀಟರ್ ನೀರು ಉಳಿಕೆಯಾಗುತ್ತಿದೆ ಎಂದು ಹೇಳಿದರು.

     ನಗರದಲ್ಲಿಂದು ಅರಮನೆ ಮೈದಾನದ ಗಾಯತ್ರಿ ವಿಹಾರ ಸಭಾಂಗಣದಲ್ಲಿ ಇಂಡಿಯನ್ ಪ್ಲಂಬಿಂಗ್ ಅಸೋಸಿಯೇಷನ್ ಹಮ್ಮಿಕೊಂಡಿರುವ, ಪ್ಲಂಬಿಂಗ್(ಕೊಳಾಯಿ)ವ್ಯವಸ್ಥೆ ಕುರಿತ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನೂರಕ್ಕೆ ನೂರು ಭಾಗ ಸೋರಿಕೆ ನೀರನ್ನು ತಟೆಗಟ್ಟಲು ಕ್ರಮವಹಿಸಲಾಗಿದೆ ಎಂದರು.ಸೋರಿಕೆ ತಡೆಗಟ್ಟಿದರೆ ಶೇ ೩೦-೩೨ರಷ್ಟು ಉಳಿತಾಯವಾಗಲಿದೆ. ಇದನ್ನು ನೀರಿನ ಸಮಸ್ಯೆವುಳ್ಳವರಿಗೆ ಪೂರೈಸಬಹುದಾಗಿದೆ. ಈ ಬಗ್ಗೆ ಜಲಮಂಡಳಿ ಗಂಭೀರವಾಗಿ ಆಲೋಚಿಸಬೇಕು ಎಂದು ಹೇಳಿದರು.

     ಅಸೋಸಿಯೇಷನ್ ಅಧ್ಯಕ್ಷ ಗುರ್ಮಿತ್ ಸಿಂಗ್ ಅರೋರಾ ಮಾತನಾಡಿ, ನೀರು ಅತ್ಯಂತ ಅಮೂಲ್ಯ.ಹಾಗಾಗಿ, ಪ್ರಸ್ತುತ ಸಾಲಿನಲ್ಲಿ ದೇಶದೆಲ್ಲೆಡೆ ಬರೋಬ್ಬರಿ ೧೩೦ ಕೋಟಿ ಲೀಟರ್ ನೀರು ಉಳಿಸುವ ಗುರಿಯನ್ನು ಪ್ಲಂಬಿಂಗ್ ಸಂಘವು ಇಟ್ಟುಕೊಂಡಿದೆ ಎಂದು ತಿಳಿಸಿದರು.

      26ನೇ ಈ ಸಮ್ಮೇಳನ ಮತ್ತು ಪ್ರದರ್ಶನದಲ್ಲಿ ೭೦೦ ಪ್ರತಿನಿಧಿಗಳು, ೧೦ ಸಾವಿರಕ್ಕೂ ಅಧಿಕ ವ್ಯಾಪಾರ ಸಂದರ್ಶಕರು ಮತ್ತು ಕೊಳಾಯಿ ಸಲಹೆಗಾರರು, ಕೊಳಾಯಿ ಗುತ್ತಿಗೆದಾರರು, ವಾಸ್ತುಶಿಲ್ಪಿಗಳು, ಒಳಾಂಗಣ ವಿನ್ಯಾಸಕರು, ರಿಯಲ್ ಎಸ್ಟೇಟ್ ಡೆವಲಪರ್‌ಗಳು ಸೇರಿದಂತೆ ಇತರ ವೃತ್ತಿಪರರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ಬಿಡಬ್ಲ್ಯೂಎಸ್‌ಎಸ್ ಬಿ ಅಧ್ಯಕ್ಷ ತುಷಾರ್ ಗಿರಿ ನಾಥ್ ಸೇರಿದಂತೆ ಪ್ರಮುಖರಿದ್ದರು.

ನೀರಿನ ಜಾಗೃತಿ ಪ್ರದರ್ಶನ

      ಪ್ರದರ್ಶನದಲ್ಲಿ ನೀರು ಉಳಿಸುವ ಸಂಬಂಧಿಸಿದಂತೆ ಪಂಪ್‌ಗಳು ಮತ್ತು ಕವಾಟಗಳು, ಕೊಳವೆಗಳು, ಅಗ್ನಿಶಾಮಕ ವ್ಯವಸ್ಥೆಗಳು, ಒಳಚರಂಡಿ ದ್ರಾವಣಗಳು, ನೀರಿನ ಸಂಸ್ಕರಣಾ ವ್ಯವಸ್ಥೆಗಳು, ನೈರ್ಮಲ್ಯ ನೆಲೆವಸ್ತುಗಳು, ಈಜುಕೊಳಗಳು, ಬಿಸಿನೀರಿನ ವ್ಯವಸ್ಥೆಗಳು, ನೀರಿನ ಸಂಗ್ರಹ ವ್ಯವಸ್ಥೆಗಳು, ಸೀಲಾಂಟ್‌ಗಳು ಮತ್ತು ಅಂಟಿಕೊಳ್ಳುವ ವಸ್ತುಗಳು, ಸ್ನಾನಗೃಹದ ನೆಲೆವಸ್ತುಗಳು, ಪೈಪ್ ಫಿಟ್ಟಿಂಗ್, ಸಿಂಕ್, ನೈರ್ಮಲ್ಯ ಸಾಮಾನು, ಒಳಚರಂಡಿ ಸಂಸ್ಕರಣಾ ಘಟಕಗಳು, ಸೌರ ತಾಪನ ವ್ಯವಸ್ಥೆ, ಸ್ನಾನದತೊಟ್ಟಿಗಳು ಪ್ರದರ್ಶನದಲ್ಲಿಡಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap