ಸಹನೆ ನಿಮ್ಮದಾದರೆ, ಸಕಲವು ನಿಮ್ಮದೆ : ಬಿ.ವಿ.ಶ್ರೀನಿವಾಸ್

ತಿಪಟೂರು

      ವಕೀಲರು ಸಹನೆ ಮತ್ತು ಶಾಂತಿಯಿಂದಿರಬೇಕು, ಸಹನೆಯು ನಿಮ್ಮದಾದರೆ ಸಕಲವು ನಿಮ್ಮದಾಗುತ್ತದೆ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್‍ನ ಉಪಾಧ್ಯಕ್ಷರಾದ ಬಿ.ವಿ.ಶ್ರೀನಿವಾಸ್ ತಿಳಿಸಿದರು.

      ನಗರದ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘ ಹಾಗೂ ವಕೀಲರ ಪರಿಷತ್ ಬೆಂಗಳೂರು, ಇವರ ಸಹಯೋಗದಲ್ಲಿ ಆಯೋಜಿಸಿದ್ದ ಕಾನೂನು ಕಾರ್ಯಾಗಾರದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಿರಿಯ ವಕೀಲರುಗಳು ತಮಗೆ ಎಲ್ಲಾ ತಿಳಿದಿದ್ದು ನಾವೀಗ ಎಲ್ಲವನ್ನು ಕಲಿತಿದ್ದೇವೆಂದು ಕೆಲವರು ವರ್ತಿಸುತ್ತಿದ್ದಾರೆ. ನಾವು ಎಷ್ಟೇ ಹಿರಿಯರಾದರು ನಾವು ಕಲಿತಿರುವುದು ಅತ್ಯಲ್ಪವಾದುದು. ಕಲಿಯಬೇಕಾದುದು ಬಹಳಷ್ಟಿದೆ, ಕಲಿತಿದ್ದೇವೆಂದು ಬೀಗದೆ ಕಲಿಯುವ ಗುಣವನ್ನು ಬೆಳೆಸಿಕೊಳ್ಳಬೇಕು ಮತ್ತು ನಾವು ಎಷ್ಟು ಸಹನೆಯಿಂದ ಪ್ರತಿವಾದಿಯ ವಾದವನ್ನು ಆಲಿಸಿ ಅದಕ್ಕೆ ತಕ್ಕ ಉತ್ತರವನ್ನು ಸಹನೆಯಿಂದಲೆ ನೀಡಿದರೆ ಎಂತಹ ಕಠಿಣವಾದ ದಾವೆಗಳನ್ನು ಗೆಲ್ಲಬಹುದೆಂದು ತಿಳಿಸಿದರು.

       ಕರ್ನಾಟಕ ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಎನ್.ಕುಮಾರ್ ಕಿರಿಯ ವಕೀಲರುಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಕಲಿಕೆಯು ನಿರಂತರವಾದುದು. ಇದು ವಕೀಲ ವೃತ್ತಿಯಲ್ಲಷ್ಟೇ ಅಲ್ಲ ಇದು ಎಲ್ಲಾ ಕ್ಷೇತ್ರಗಳಲ್ಲೂ ಇದು ಪ್ರಸ್ತುತ. ಇಂದು ವಿದ್ಯಾಭ್ಯಾಸದ ಪದವಿಗೆ ಮಾತ್ರ ಸೀಮಿತವಾಗಿದ್ದು, ತಾವುಗಳಿಸಿರುವ ಪದವಿಯ ಕನಿಷ್ಠ ಜ್ಞಾನವನ್ನು ಪಡೆದಿಲ್ಲ.

        ಪದವಿಗಳು ಹೆಸರಿಗಷ್ಟೇ ಸೀಮಿತವಾಗಿವೆ ಎಂದ ಅವರು, ನೀವು ತಾಲ್ಲೂಕಿನಲ್ಲಿರುವ ವಕೀಲರಾಗಿದ್ದು ಬೆಂಗಳೂರಿನವರು ಬುದ್ದಿವಂತರೆಂದು ತಿಳಿದಿದ್ದಾರೆ. ಆದರೆ ಅದು ತಪ್ಪು, ನಿಮ್ಮಲ್ಲಿಯೂ ಅವರಿಗಿಂತಲೂ ಪ್ರತಿಭಾನ್ವಿತರಾಗಿದ್ದೀರಾ, ನೀವು ಕೀಳರಿಮೆಯನ್ನು ಬಿಟ್ಟು ಪ್ರಪಂಚಕ್ಕೆ ತೆರೆದುಕೊಂಡಾಗ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.

       ಹಿಂದೂ ವಾರಸುದಾರಿಕೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದ ಅವರು, ಸಾರ್ವಜನಿಕರ ಮತ್ತು ವಕೀಲರುಗಳು ಗೊಂದಲಗಳು ಮತ್ತು ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ಸೂಚಿಸಿ ಮುಂದಿನ ಕಾನೂನು ಕ್ರಮಗಳ ಬಗ್ಗೆ ತಿಳಿಸಿದರು.

      ಕಾರ್ಯಕ್ರಮದಲ್ಲಿ ಪ್ರ.ಸಿ.ನ್ಯಾಯಾಧೀಶರಾದ ಶಾರದ ಕೊಪ್ಪದ, ಹೆ.ಸಿ.ನ್ಯಾಯಾಧೀಶರಾದ ದಾಸರಿಕ್ರಾಂತಿ ಕಿರಣ್, ಕಾರ್ಯಕ್ರಮದಲ್ಲಿ ತಿಪಟೂರು ವಕೀಲರ ಸಂಘದ ಅಧ್ಯಕ್ಷ ಹೆಚ್.ಲಕ್ಷ್ಮಣ್, ಕಾರ್ಯದರ್ಶಿ ಎಂ.ಸಿ.ನಟರಾಜು, ಉ.ಅಧ್ಯಕ್ಷ ಡಿ ವಸಂತಕುಮಾರ್, ಎಲ್ಲಾ ವಕೀಲರುಗಳು ಭಾಗವಹಿಸಿ ನಂತರ ನ್ಯಾಯಮೂರ್ತಿಗಳನ್ನೊಳಗೊಂಡತೆ ನೂರಾರು ವಕೀಲರುಗಳು, ಸಾರ್ವಜನಿಕರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap