ಹುಸಿತನ, ಕಳ್ಳತನದಿಂದ ಜೀವನ ಕುಸಿತ

ಚಿತ್ರದುರ್ಗ :

    ಅಪರಾಧ ಆಧಾರಿತವಾದ ಜೀವನ ಮಾಡಬಾರದು. ಹುಸಿತನ ಕಳ್ಳತನದ ಮೇಲೆ ಯಾರು ಬದುಕು ಕಟ್ಟಿಕೊಳ್ಳುತ್ತಾರೋ ಅವರ ಜೀವನ ಕುಸಿಯುತ್ತದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

    ನಗರದ ಬಸವಕೇಂದ್ರ ಶ್ರೀಮುರುಘಾಮಠ ಮತ್ತು ಎಸ್.ಜೆ.ಎಂ. ಶಾಂತಿ ಮತ್ತು ಪ್ರಗತಿ ಫೌಂಡೇಶನ್ (ರಿ) ಚಿತ್ರದುರ್ಗ ಇವರ ಸಹಯೋಗದಲ್ಲಿ ನಡೆದ ಇಪ್ಪತ್ತೆಂಟನೇ ವರ್ಷದ ಹತ್ತನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಶ್ರೀಗಳು ಮಾತನಾಡಿದರು
ಮಳೆ ಬೆಳೆ ಕೈಕೊಟ್ಟಾಗ ಜೀವನ ಸಾಗಿಸಲು ಕಷ್ಟವಾಗುತ್ತದೆ. ಇದರೊಟ್ಟಿಗೆ ದುಶ್ಚಟ ದುರಭ್ಯಾಸಗಳಿಗ ಕಡೆ ಹೋಗದೆ ಉತ್ತಮ ಮಾರ್ಗದಲ್ಲಿ ನಡೆಯುವ ಹವ್ಯಾಸವನ್ನು ಅಳವಡಿಸಿಕೊಳ್ಳಬೇಕು. ದುಶ್ಚಟಗಳಿಗೆ ದಾಸರಾಗಿ ಆರೋಗ್ಯವನ್ನು ಹಾಳು ಮಾಡಿಕೊಳ್ಳದೆ ಆರೋಗ್ಯಕರ ಜೀವನ ಕಟ್ಟಿಕೊಳ್ಳುವಂತೆ ಕರೆ ನೀಡಿದರು.

    ಮುಖ್ಯಅತಿಥಿ ಸಾಲಿಗ್ರಾಮ ಗಣೇಶ ಶೆಣೈ ಮಾತನಾಡಿ, ಹನ್ನೆರಡನೇ ಶತಮಾನದ ಬಸವಣ್ಣನವರ ಪ್ರಗತಿಪರ ತತ್ತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಸಮಾಜಮುಖಿ ಕಾರ್ಯಗಳನ್ನು ಶ್ರೀಗಳು ಮಾಡುತ್ತಾ ಬಂದಿದ್ದಾರೆ. ಈ ಮಠ ಕೇವಲ ಒಂದು ಜಾತಿಗೆ ಸೀಮಿತವಾಗದೆ ಸಾಮೂಹಿಕವಾಗಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಮಾಜದಲ್ಲಿ ಅನೇಕ ಪರಿವರ್ತನೆಗಳನ್ನು ತಂದಿದೆ. ದುರಾಸೆ ದುರಭ್ಯಾಸ, ದುಶ್ಚಟಗಳಿಗೆ ಒಳಗಾಗದೆ ಸತಿ ಪತಿ ಸಮಾನ ಮನಸ್ಸಿನಿಂದ ಜೀವನ ಸಾಗಿಸಿದರೆ ಜೀವನ ಸಾರ್ಥಕವಾಗುತ್ತದೆ.

     ನಾವು ಇನ್ನೊಬ್ಬರಿಗೆ ಬುದ್ಧಿ ಹೇಳಬೇಕಾದ ನೈತಿಕತೆ ಹೊಂದಬೇಕಾದರೆ ಮೊದಲು ಆಡುವ ಮಾತಿನಂತೆ ನಡೆದುಕೊಳ್ಳುವ ಪರಿಕಲ್ಪನೆಯನ್ನು ಅಳವಡಿಸಿಕೊಳ್ಳಬೇಕು ಎಂದರು.

       ಕಾರ್ಯಕ್ರಮ ದಾಸೋಹಿಗಳಾದ ವಿ.ಜಿ.ಎಸ್. ರಾಜಣ್ಣ ವೇದಿಕೆಯಲ್ಲಿದ್ದರು. ಈ ಸಂದರ್ಭದಲ್ಲಿ 2 ಅಂತರ್ಜಾತಿ ಜೋಡಿ ಲಿಂಗಾಯತ (ವರ) -ನಾಯಕ (ವಧು), ವಿಶ್ವಕರ್ಮ (ವರ) – ಲಿಂಗಾಯತ (ವಧು) ಸೇರಿದಂತೆ 15 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.ಪ್ರಾರಂಭದಲ್ಲಿ ಜಮುರಾ ಕಲಾವಿದರು ಪ್ರಾರ್ಥಿಸಿದರು. ಸಿ.ಎಂ. ಚಂದ್ರಪ್ಪ ಸ್ವಾಗತಿಸಿದರು.  ಸಿ.ವಿ.ಸಾಲಿಮಠ್ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap