ಮಧುಗಿರಿ
ಹಳೇಹಟ್ಟಿ ಗ್ರಾಮದಲ್ಲಿ ಬೆಳಗಿನ ಜಾವ ದಾಳಿ ಮಾಡಿರುವ ಕರಡಿ. ಮಧುಗಿರಿ ತಾಲೂಕು ಹಳೇಹಟ್ಟಿ ಗ್ರಾಮದ ಹೊರಗೆ ನಡೆದಿರುವ ಘಟನೆಯಲ್ಲಿ ಶಿವಲಿಂಗಯ್ಯ (೫೩) ಎಂಬುವವರ ಮೇಲೆ ದಾಳಿ ಮಾಡಿರುವ ಕರಡಿ ಕಾಲಿಗೆ ಬಲವಾದ ಗಾಯವಾಗಿದ್ದು ,aವರು ಬೆಳಗಿನ ಜಾವ ಜಮೀನಿನಿಂದ ಅಂಗಡಿಗೆ ಬರುವ ವೇಳೆ ದಾಳಿ ಮಾಡಿದ ಕರಡಿ ನಾಯಿಗಳು ಬೊಗುಳಿದ ಶಬ್ದ ಕೇಳಿ ಗ್ರಾಮದ ಕೆಲವರು ಬಂದು ಶಿವಲಿಂಗಯ್ಯನನ್ನು ಕರಡಿಯಿಂದ ರಕ್ಷಣೆ ಮಾಡಿದರು.
ಶಿವಲಿಂಗಯ್ಯ ಅವರು ಇಂದು ನಾಯಿಗಳಿಂದ ನನ್ನ ಪ್ರಾಣ ಉಳಿಯಿತು ಎಂದಿದ್ದಾರೆ ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆನೀಡಲಾಗುತ್ತಿದೆ ಮತ್ತು ಇನ್ನೂ ಗ್ರಾಮದ ಆಸುಪಾಸಲ್ಲೇ ಕರಡಿ ಇರುವಿಕೆ ತಿಳಿದ ಗ್ರಾಮಸ್ಥರು ಆತಂಕಗೊಂಡಿದ್ದಾರೆ ಅದಕ್ಕಾಗಿ ಕರಡಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರ ಒತ್ತಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ