ಹರಪನಹಳ್ಳಿ
ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ತಾಲ್ಲೂಕಿನ ಚಿಗಟೇರಿ ಗ್ರಾಮದ ನಿರ್ವಾಹಕ ನಾಗರಾಜ ಅವರು ಬಸ್ ಕನ್ನಡಾಭಿಮಾನ ಬಿಂಬಿಸುವ ರೀತಿಯಲ್ಲಿ ಅಲಂಕರಿಸಿ ಗಮನ ಸೆಳೆಯುತ್ತಾರೆ.
ಕನ್ನಡ ಭಾಷೆ, ಸಾಹಿತ್ಯ, ಹಾಡುಗಳು, ಸಾಹಿತಿ, ಕವಿಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ನಿರ್ವಾಹಕ ನಾಗರಾಜ ಅವರು ಬಸ್ ಸಿಂಗರಿಸಿದ್ದರು. ಮುಂಭಾಗದಲ್ಲಿ ಕೆಂಪು-ಹಳದಿ ಬಣ್ಣದ ಬಲೂನುಗಳು, ಹೂವುಗಳನ್ನು ಕಟ್ಟಿದ್ದರು. ವಿಶ್ವೇಶ್ವರಯ್ಯ, ಅಬ್ದುಲ್ ಕಲಂ, ಗಿರೀಶ್ ಕಾರ್ನಾಡ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರ ಭಾವಚಿತ್ರ ಅಂಟಿಸಿದ್ದರು. ಕರ್ನಾಟಕದ ಹೆಸರಾಂತ ಸ್ಥಳಗಳ ಪರಿಚಿಸುವ ಚಿತ್ರಗಳು ಇದ್ದವು.
ಶಾಸಕ ಜಿ.ಕರುಣಾಕರರೆಡ್ಡಿ `ಕನ್ನಡ ರಥದ ಬಸ್ಸಿಗೆ ಚಾಲನೆ ನೀಡಿದರು. ನೀಲಗುಂದ ಚನ್ನಬಸವ ಶಿವಯೋಗಿಗಳು ಹಾಜರಿದ್ದರು. ಕಂಡಕ್ಟರ್ ನಾಗರಾಜ ಅವರ ನುಡಿಸೇವೆಗೆ ಶಾಸಕರು, ಸ್ವಾಮೀಜಿ, ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದರು. ನಿರ್ವಾಹಕರಿಗೆ ಸ್ಥಳೀಯ ಡಿಪೋ ವ್ಯವಸ್ಥಾಪಕ ವೆಂಕಟೇಶ, ಚಾಲಕ ಕರಿಯಪ್ಪ ಸೇರಿದಂತೆ ಸಾರಿಗೆ ಸಿಬ್ಬಂದಿ ಪ್ರೋತ್ಸಾಹ ನೀಡಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ