ಹರಪನಹಳ್ಳಿ :
ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಸಾವಿರಾರು ಮೌಲ್ಯದ ರಾಗಿ ಮತ್ತು ಶೇಂಗಾ ಮೇವಿನ ಬಣವೆ ಭಸ್ಮವಾಗಿರುವ ಘಟನೆ ತಾಲೂಕಿನ ಮಾಚಿಹಳ್ಳಿ ಕೊರಚರಹಟ್ಟಿ ಗ್ರಾಮದಲ್ಲಿ ನಡೆದಿದೆ.ಕಣದಲ್ಲಿ ಶೇಖರಿಸಿದ್ದ ಬಸಮ್ಮ ಅವರಿಗೆ ಸೇರಿದ ಎರಡು ಬಣವೆ ಶೇಂಗಾ ಮೇವು, ಶೇಷಪ್ಪ, ಲೋಕೇಶ್, ರಮೇಶ ಮತ್ತು ಸೋಮಪ್ಪ ಅವರಿಗೆ ಸೇರಿದೆ ಎನ್ನಲಾದ ತಲಾ ಆರು ರಾಗಿ ಬಣವೆಗಳು ಸುಟ್ಟು ಬೂದಿಯಾಗಿವೆ.
ಹರಪನಹಳ್ಳಿ ಅಗ್ನಿಶಾಮಕ ಠಾಣೆ ಸಿಬ್ಬಂದಿಗಳು ಬಿಸಿಲು ಲೆಕ್ಕಿಸದೇ ಹರಡುತ್ತಿದ್ದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಮದ್ಯಾಹ್ನ ಶುರುವಾದ ಕಾರ್ಯಾಚರಣೆ ಸಂಜೆವರೆಗೂ ನಡೆಯಿತು ಎಂದು ತಾ.ಪಂ.ಮಾಜಿ ಸದಸ್ಯ ಎಂ.ಮಲ್ಲೇಶ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
