ತಿಪಟೂರು:
ತಾಲ್ಲೂಕಿನ ಕಾಡಶೆಟ್ಟಿಹಳ್ಳಿಯಲ್ಲಿ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದರಿಂದ ನಿಂಗಪ್ಪ ಎಂಬುವರು ತೋಟದ ಶೆಡ್ನಲ್ಲಿ ಹಾಕಿದ್ದ 50 ಸಾವಿರ ಕೊಬ್ಬರಿ ಭಸ್ಮವಾಗಿವೆ.
ಬುಧವಾರ ಮಧ್ಯಾಹ್ನ 3ರ ವೇಳೆ ಘಟನೆ ನಡೆದಿದೆ. ಸುಮಾರು 15 ಲಕ್ಷ ರೂ. ಹೆಚ್ಚು ನಷ್ಚ ಅಂದಾಜಿಸಲಾಗಿದೆ. ನಿಂಗಪ್ಪ ಎಂಬವರು ತೋಟದಲ್ಲಿ ಶೆಡ್ ಮಾಡಿ ಒಟ್ಟು ಕುಟುಂಬದ 50 ಸಾವಿರ ಕೊಬ್ಬರಿ ದಾಸ್ತಾನು ಮಾಡಿದ್ದರು. ಸದ್ಯದಲ್ಲೇ ಕೊಬ್ಬರಿ ಸುಳಿಸಬೇಕಿತ್ತು. ಆದರೆ ಬೆಂಕಿಯಿಂದ ಎಲ್ಲವೂ ಭಸ್ಮವಾಗಿವೆ. ವಿಷಯ ತಿಳಿದು ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿಯಿಂದ ಎರಡು ಅಗ್ನಿ ಶಾಮಕ ವಾಹನಗಳಲ್ಲಿ ಸಿಬ್ಬಂದಿ ಆಗಮಿಸಿ ಪ್ರಯತ್ನಸಿದರೂ ಹೆಚ್ಚಿನ ನಷ್ಟ ತಪ್ಪಿಸಲು ಸಾಧ್ಯವಾಗಲಿಲ್ಲ. ಒಣಗಿದ ಕೊಬ್ಬರಿಯಾದ್ದರಿಂದ ಏಕಾಏಕಿ ಜ್ವಾಲೆ ವಿಸ್ತರಿಸಿ ನಿಯಂತ್ರಣ ಕಷ್ಟವಾಯಿತು. ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
`ಕೊಬ್ಬರಿ ದಾಸ್ತಾನು ಮಾಡಿದ್ದ ಶೆಡ್ ಬಳಿ ಯಾವುದೇ ವಿದ್ಯುತ್ ಲೈನ್ ಹಾದು ಹೋಗಿರಲಿಲ್ಲ. ಬೇರೆಡೆಯಿಂದ ಬೆಂಕಿ ತಗುಲದಂತೆ ಸುತ್ತಲೂ ಸ್ವಚ್ಛತೆಯನ್ನೂ ಕಾಪಾಡಲಾಗಿತ್ತು. ಆದರೂ ಬೆಂಕಿ ತಗುಲಿರುವುದು ದುಷ್ಕರ್ಮಿಗಳ ಕೃತ್ಯ ಎಂಬ ಶಂಖೆ ಮೂಡಿಸಿದೆ. ಈಚೆಗೆ ನಮ್ಮ ಕುಟುಂಬ ಮತ್ತು ಕೆಲವರ ಮಧ್ಯೆ ಮನಸ್ತಾಪ ನಡೆದಿತ್ತು. ವೈಷಮ್ಯದ ಹಿನ್ನೆಲೆಯಲ್ಲಿಯೇ ಯಾರೋ ಶೆಡ್ಗೆ ಬೆಂಕಿ ಇಟ್ಟಿದ್ದಾರೆ. ಆರ್ಥಿಕವಾಗಿ ಅದನ್ನೇ ನಂಬಿದ್ದ ಇಡೀ ಕುಟುಂಬ ಕಂಗಾಲಾಗಿದೆ’ ಎಂದು ನೊಂದ ನಿಂಗಪ್ಪ ಅವರ ಪುತ್ರ ಸುರೇಶ್ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
