ಹರಪನಹಳ್ಳಿ:
ಪಟ್ಟಣ ಸಮೀಪದ ದೇವರ ತಿಮಲಾಪುರ ಗ್ರಾಮದ ಎಂ.ಬಲರಾಮ ಎಂಬ ರೈತರಿಗೆ ಸೇರಿದ ಎರಡು ಹುಲ್ಲಿನ ಬಣವೆಗಳು ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾಗಿವೆ.ರಾತ್ರಿ ವೇಳೆ ಈ ಘಟನೆ ನಡೆದಿದ್ದರಿಂದ ಗ್ರಾಮಸ್ಥರು ಬೆಂಕಿ ನಂದಿಸಲು ಹರಸಾಹಸಪಟ್ಟರೂ ಬೆಂಕಿ ನಿಯಂತ್ರಣಕ್ಕೆ ಬರಲಿಲ್ಲ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಘಟನೆಯಲ್ಲಿ ಒಂದು ಎತ್ತಿನಬಂಡಿ, ರಾಗಿ ಹುಲ್ಲು, ಮೆಕ್ಕೆಜೋಳದ ರವದಿ ಸೇರಿದಂತೆ ಕೃಷಿ ಉಪಕರಣಗಳು ಬೆಂಕಿಗೆ ಆಹುತಿ ಆಗಿವೆ.
ಇದು ಕಿಡಿಗೇಡಿಗಳು ಮಾಡಿದ ಕೆಲಸವಾಗಿದೆ. ದನ-ಕರುಗಳಿಗಾಗಿ ಮೇವು ಸಂಗ್ರಹಿಸಿದ್ದೆ. ಬರಗಾಲ ಆವರಿಸಿರುವುದರಿಂದ ಮೇವಿಗಾಗಿ ಪರದಾಡುವಂತಾಗಿದೆ. ಮೂಕ ಜಾನುವಾರುಗಳಿಗೆ ಈಗ ಎಲ್ಲಿಂದ ಮೇವು ತರಲಿ’ ಎಂದು ರೈತ ಎಂ.ಬಲರಾಮ ಅಳಲು ತೊಡಿಕೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
