ದಾವಣಗೆರೆ
ಮಾ.27 ರಂದು ಬೆಂಗಳೂರು ಬೆಸ್ಕಾಂ ಜಾಗೃತದಳದ ಕಾರ್ಯನಿರ್ವಾಹಕ ಅಭಿಯಂತರರಾದ ಸುರೇಶ್ ಇವರು ದಾವಣಗೆರೆ ಬೆಸ್ಕಾಂ ಜಾಗೃತದಳ ಪೊಲೀಸ್ ಠಾಣೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ ವಿದ್ಯುತ್ ಕಳ್ಳತನ ಶಿಕ್ಷಾರ್ಹ ಮತ್ತು ದಂಡನೀಯ ಅಪರಾಧವಾಗಿದ್ದು, ವಿದ್ಯುತ್ ಕಳ್ಳತನ/ದುರುಪಯೋಗ ಬಗ್ಗೆ ಮಾಹಿತಿ ಕಂಡು ಬಂದಲ್ಲಿ ದಾವಣಗೆರೆಯ ಬೆಸ್ಕಾಂ ಜಾಗೃತದಳ ದೂ.ಸಂ: 08192-257599, 9448094812, 9448094832 ಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದು ತಿಳಿಸಿ ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದರು.
2019-ಜನವರಿ ಆರಂಭದಲ್ಲಿ ಒಟ್ಟು 218 ವಿದ್ಯುತ್ ಕಳ್ಳತನ ಪ್ರಕರಣಗಳು ಬಾಕಿ ಇದ್ದು, ಮಾರ್ಚ್ 2019ರ ಅಂತ್ಯಕ್ಕೆ 211 ಪ್ರಕರಣಗಳು ಇತ್ಯರ್ಥಗೊಳಿಸಿ ರೂ.80.10 ಲಕ್ಷಗಳಷ್ಟು ದಂಡದ ಮೊತ್ತವನ್ನು ವಸೂಲು ಮಾಡಲಾಗಿರುತ್ತದೆ. ಈ ಸಂದರ್ಭದಲ್ಲಿ ಬೆಸ್ಕಾಂ ಜಾಗೃತದಳ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಕೆ.ವಿಜಯ್, ಎ.ಇ.ಇ.(ವಿ)ನ ಕೆ.ಲೋಹಿತ್ ಕುಮಾರ್, ಪಿ.ಎಸ್.ಐ ಭವ್ಯ ಹಾಗೂ ಸಿಬ್ಬಂದಿಯವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ