ಕುಣಿಗಲ್
ಮನೆಗಳಿಗೆ ಮೀಟರ್ ಅಳವಡಿಸಿಕೊಡಲು ಬೆಸ್ಕಾಂ ಕಚೇರಿಯ ಜೆ.ಇ. ಹೆಚ್.ಟಿ.ಶಂಕರ್ ಎಂಬಾತ ವ್ಯಕ್ತಿಯೊಬ್ಬನಿಂದ 6 ಸಾವಿರ ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹದಳದ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ವರದಿಯಾಗಿದೆ.
ಪಟ್ಟಣದ ಕಾರ್ಯ ಮತ್ತು ಪಾಲನ ವಿಭಾಗ ಬೆಸ್ಕಾಂ ಕಚೇರಿಯಲ್ಲಿ ಕಿರಿಯ ಎಂಜಿನಿಯರ್ ಶಂಕರ್ ಎಂಬಾತ ಸಂಜೆ ಸುಮಾರು 4 ಗಂಟೆಯ ವೇಳೆ ಹೌಸಿಂಗ್‍ಬೋರ್ಡ್‍ವಾಸಿ ವೈರಿಂಗ್ ಅಸಿಸ್ಟೆಂಟ್ ಚಂದ್ರಶೇಖರ್ ಎಂಬಾತ ದೊಡ್ಡೇಗೌನಪಾಳ್ಯದ ರಮೇಶ್ ಮತ್ತು ನಾಗೇಂದ್ರ ಎಂಬುವರ ಮನೆಗಳಿಗೆ ವೈರಿಂಗ್ ಕೆಲಸವನ್ನ ಮಾಡಿಕೊಟ್ಟಿದ್ದು, ಸದರಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಂತೇಮಾವತ್ತೂರು ಶಾಖೆಗೆ ಹೋಗಿ ಮೀಟರ್ ಅಳವಡಿಸುವಂತೆ ಕಿರಿಯ ಎಂಜಿನಿಯರ್ ಹೆಚ್.ಟಿ.ಶಂಕರ್ ಅವರನ್ನ ವಿಚಾರಿಸಲಾಗಿ, ಅವರು ವಿದ್ಯುತ್ ಸಂಪರ್ಕ ನೀಡಲು 1500 ಲಂಚ ಪಡೆದುಕೊಂಡಿದ್ದು, ಒಂದು ವಾರದೊಳಗೆ ಮೀಟರ್ ಅಳವಡಿಸುವುದಾಗಿ ತಿಳಿಸಿದರು. ನಂತರ ಮೀಟರ್ ಅಳವಡಿಸದ ಕಾರಣ ಮತ್ತೆ ಜೆ.ಜಿ.ಶಂಕರ್ ಅವರನ್ನ ವಿಚಾರಿಸಲಾಗಿ ಅವರು ಇನ್ನೂ 6 ಸಾವಿರ ರೂ. ಲಂಚಕೊಡುವಂತೆ ಬೇಡಿಕೆ ಇಟ್ಟ ಪರಿಣಾಮ, ಕುಣಿಗಲ್ ಬೆಸ್ಕಾಂ ಕಚೇರಿಯಲ್ಲಿ ಕಿರಿಯ ಎಂಜಿನಿಯರ್ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿಯ ಬಲೆಗೆ ಸಿಕ್ಕಿ ಬಿದ್ದಿದ್ದಾನೆ.
ಭ್ರಷ್ಟಾಚಾರ ನಿಗ್ರಹದಳದ ಇನ್ಸ್‍ಪೆಕ್ಟರ್ ಹಾಲಪ್ಪ, ನರಸಿಂಹರಾಜು, ಗಿರೀಶ್, ಶಿವಣ್ಣ ಹಾಗೂ ಸಿಬ್ಬಂದಿಗಳು ಡಿವೈಎಸ್‍ಪಿ ರಘು ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
