ಅಯೋಗ್ಯ ನನ್ನ ಬಗ್ಗೆ ಕೆಟ್ಟದಾಗಿ ಮಾತಾಡಿದರೆ ಹುಷಾರ್ : ವಿಶ್ವನಾಥ್

ಮೈಸೂರು

    ಅಯೋಗ್ಯ ನನ್ನ ಬಗ್ಗೆ ಕೆಟ್ಟದಾಗಿ ಮಾತಾಡಿದರೆ ಹುಷಾರ್. ನೀನು ಯಾರ ಮನೆಯಲ್ಲಿ ತಟ್ಟೆ ಲೋಟ ತೊಳೆಯುತ್ತಿದ್ದೆ ಎಂಬುದು ಎಲ್ಲವು ಕೂಡ ನನಗೆ ಗೊತ್ತಿದೆ. ಹೇಳುತ್ತಾ ಹೋದರೆ ಮಾತನಾಡುವುದು ತುಂಬಾ ಇದೆ, ಆದರೆ ಅದೆಲ್ಲವೂ ಬೇಡ. ಮಾತಾಡುವ ಬಗ್ಗೆ ಎಚ್ಚರಿಕೆಯಿಂದ ಮಾತಾಡಬೇಕು ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಬಗ್ಗೆ ಅನರ್ಹ ಶಾಸಕ ಎಚ್ ವಿಶ್ವನಾಥ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

   ಮೈಸೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಗ್ಯ ನಾದ ನೀನು ನನ್ನ ಯೋಗ್ಯತೆ ಬಗ್ಗೆ ಮಾತನಾಡುತ್ತೀಯಾ.? ಅಶ್ಲೀಲ ಚಿತ್ರ ಮಾಡಲು ಹೋಗಿ ಸಿಕ್ಕಿಹಾಕಿಕೊಂಡವನಲ್ಲ.ಬಾಯಿಗೆ ಬಂದಂತೆ ಮಾತನಾಡಿ ಹೋಗುವುದಲ್ಲ.ತಮ್ಮದು 5 ತಲೆಮಾರಿನ ಭೂ ಹಿಡುವಳಿಯನ್ನು ಮಾಡಿಕೊಂಡ ಬಂದ ಕುಟುಂಬ ನಮ್ಮದು.ಕುರುಬ ಸಮುದಾಯದ ವಿದ್ಯಾರ್ಥಿಗಳಿಗಾಗಿ ಭೂಮಿ ಬಿಟ್ಟುಕೊಟ್ಟ ಕೊಟ್ಟ ಕುಟುಂಬ ನಮ್ಮದು ಎಂದು ಸಾ ರಾ ಮಹೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

   15 ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕ ಘೋಷಣೆ ಮಾಡಿದ ಚುನಾವಣಾ ಆಯೋಗದ ನಿರ್ಧಾರವನ್ನು ಸ್ವಾಗತಿಸುತ್ತೇನೆ. ನಮ್ಮ ಪ್ರಕರಣ ಸುಪ್ರೀಂ ಕೋರ್ಟ್ ‌ನಲ್ಲಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನಾವಲ್ಲಾ ಶಾಸಕರು ಅಂದು ಸರಿಯಾದ ಮಾದರಿಯಲ್ಲಿ ಸ್ಪೀಕರ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದೇವೆ. ರಾಜೀನಾಮೆ ಸೇರಿದಂತೆ ರಾಜ್ಯ ರಾಜಕೀಯದ ಬೆಳವಣಿಗೆ ಬಗ್ಗೆ ಸುಪ್ರೀಂ ಕೋರ್ಟ್ ಪೀಠಕ್ಕೆ ಮಾಹಿತಿ ಇದೆ ಎಂದರು.

   ಸುಪ್ರೀಂಕೋರ್ಟ್ ನಮ್ಮ ಅರ್ಹತೆಯನ್ನು ಎತ್ತಿಹಿಡಿಯಬೇಕು. ಇಲ್ಲವೇ ಸ್ಪೀಕರ್ ಕೊಟ್ಟ ತೀರ್ಪನ್ನು ರದ್ದು ಮಾಡಬೇಕು. ಇಲ್ಲವೇ ಉಪ ಚುನಾವಣೆಗೆ ತಡೆಯಾಜ್ಞೆ ನೀಡಬೇಕು.ನಾಳೆ ಈ ಬಗ್ಗೆ ಸುಪ್ರೀಂಕೋರ್ಟ್ ಒಂದು ನಿರ್ಧಾರ ಪ್ರಕಟಿಸಲಿದೆ. ಸ್ಪೀಕರ್ ರಮೇಶ್ ಕುಮಾರ್ ತೆಗೆದುಕೊಂಡ ನಿರ್ಧಾರ ಸರಿ ಇಲ್ಲ,ಹೀಗಾಗಿ ನಮ್ಮ ರಕ್ಷಣೆಗೆ ನ್ಯಾಯಾಲಯ ಬರಬೇಕಿದೆ ಎಂದು ಅವರು ಹೇಳಿದರು.

     ಉಪಚುನಾವಣೆ ಘೊಷಣೆಯಾಗಿರುವುದರಿಂದ ಯಾರು ಆತಂಕಪಡುವ ಅಗತ್ಯ ಇಲ್ಲ.ಮಾನ್ಯ ಸುಪ್ರೀಂಕೋರ್ಟ್ ನಮಗೆ ನ್ಯಾಯ ನೀಡುವ ಭರವಸೆ ಇದೆ. ಹಾಗಾಗಿ ಉಪಚುನಾವಣೆ ಬಗ್ಗೆ ಯಾರು ಆತಂಕ ಪಡಬೇಡಿ ಎಂದು ವಿಶ್ವನಾಥ್ ಕಾರ್ಯಕರ್ತರಿಗೆ ಭರವಸೆ ತುಂಬಿದರು.ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಅಧಿಕಾರಕ್ಕಾಗಿ ಅಲ್ಲ.ರಾಜ್ಯದಲ್ಲಿ ನಡೆಯುತ್ತಿದ್ದ ರಾಕ್ಷಸ ರಾಜಕಾರಣದಿಂದ ಬೇಸತ್ತು ರಾಜೀನಾಮೆ ನೀಡಿದ್ದೇವೆ. ಕೀಳುಮಟ್ಟದ ರಾಜಕೀಯ,ಅಹಸ್ಯ ರಾಜಕಾರಣದ ವಿರುದ್ಧ ಬಂಡಾಯವೆದ್ದು ನಾವು ರಾಜೀನಾಮೆ ನೀಡಿದ್ದೇವೆ. ದುಡ್ಡಿಗಾಗಿ ಮಾರಿಕೊಂಡರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳುತ್ತಾರೆ. ಎಂಟಿಬಿ ನಾಗರಾಜ್ ಪಕ್ಷದಲ್ಲಿ ಹೇಗಿದ್ದರೂ ಎಂಬುದು ಅವರಿಗೂ ತಿಳಿದಿದೆ. ಹಣಕ್ಕಾಗಿ ಮಾರಿ ಕೊಂಡರು ಎಂಬ ಸಿದ್ದರಾಮಯ್ಯ ಹೇಳಿಕೆ ಸರಿಯಲ್ಲ ಎಂದು ಅವರು ಆರೋಪಿಸಿದರು.

    ಎಚ್ ವಿಶ್ವನಾಥ್ ಅವರು ಒಂದು ಕುಟುಂಬಗ್ಗೆ ವಿಷ ಇಟ್ಟರು ಎಂದು ಯಾರೋ ಆರೋಪ ಮಾಡಿದ್ದಾರೆ. ಆದರೆ ಯಾರು ಒಂದು ಕುಟುಂಬಕ್ಕೆ ವಿಷ ಹಾಕಿದರು,ಆ ಕುಟುಂಬವನ್ನು ಇಂದು ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿದ್ದಾರೆ.ಅದೆಲ್ಲವು ಕೂಡ ರಾಜ್ಯದ ಜನತೆಗೆ ತಿಳಿದಿದೆ.ತಮ್ಮನ್ನು ಮಾರಿಕೊಂಡವನು ಎಂದು ಹೇಳಿದ್ದೀರಾ.? ಹಾಗಿದ್ದರೆ ನನ್ನನ್ನ ಕ್ರಯಕ್ಕೆ ತೆಗೆದುಕೊಂಡವನು ಯಾರಾದರೂ ಇರಲೇಬೇಕಲ್ಲವಾ.? ಅವರನ್ನ ಪ್ರೆಸ್ ಕ್ಲಬ್ಬಿಗೆ ಕರೆದುಕೊಂಡು ಬನ್ನಿ. ಎಲ್ಲರು ಕುಳಿತು ಮಾರಿಕೊಂಡ ಬಗ್ಗೆ ಮಾತಾಡುವೆ ಎಂದು ಸಾ.ರಾ.ಮಹೇಶ್ ವಿರುದ್ಧ ಎಚ್.ವಿಶ್ವನಾಥ್ ಸವಾಲು ಹಾಕಿದ್ದಾರೆ.

     ಜಿಟಿ.ದೇವೇಗೌಡ ಒಬ್ಬ ಉತ್ತಮ ನಾಯಕ.ಅವರ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ.ಹಾಲಿ ಮುಖ್ಯಮಂತ್ರಿಯನ್ನ ಜಿಟಿ ದೇವೇಗೌಡರು ಸೋಲಿಸಿದ್ದಾರೆ. ಅದು ಕ್ಷೇತ್ರದ ಜನರು ತೆಗೆದುಕೊಂಡ ನಿರ್ಧಾರವಾಗಿದೆ.ಅವರ ಅರ್ಹತೆ ಮತ್ತು ಯೋಗ್ಯತೆಗೆ ತಕ್ಕಂತೆ ಅವರನ್ನ ನಾವು ನಡೆಸಿಕೊಳ್ಳಬೇಕು. ಅವರಿಗೆ ಉನ್ನತ ಶಿಕ್ಷಣ ಖಾತೆಯನ್ನು ಜಿಟಿಡಿಗೆ ನೀಡಬಾರದಿತ್ತು.ಆ ಖಾತೆಯನ್ನು ಅವರಿಗೆ ನೀಡಬೇಡಿ ಎಂದು ನಾನು ಸಹ ತಿಳಿಸಿದ್ದೆ. ಸದನದಲ್ಲಿ ಆ ಬಗ್ಗೆ ಮಾತನಾಡಿದ ಜಿಟಿಡಿಗೆ ನೈತಿಕ ಬೆಂಬಲವನ್ನು ಸಹ ನೀಡಿದ್ದೇನೆ. ಅವರನ್ನ ಲಘುವಾಗಿ ಕಾಣುವುದು ಸರಿಯಲ್ಲ ಎಂದು ಹೇಳುವ ಮೂಲಕ ಜೆಡಿ ದೇವೇಗೌಡರನ್ನು ಅನರ್ಹ ಶಾಸಕ ವಿಶ್ವನಾಥ್ ಸಮರ್ಥಿಸಿಕೊಂಡರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap