ಹಿರಿಯೂರು:
2019ರಲಿ ಚಾಲನೆ ನೀಡಿದ ಭದ್ರ ಯೋಜನೆಗೆ ಈಗ ಹಿರಿಯೂರು ಜನತೆಗೆ ಮುಕ್ತಿ ಸಿಕ್ಕಂತಾಗಿದೆ.ಬರದ ನಾಡದ ಚಿತ್ರದುರ್ಗ. ಚಿಕ್ಕಮಂಗಳೂರು. ದಾವಣಗೆರೆ ಹಾಗೂ ತುಮಕೂರು. ಜಿಲ್ಲೆಯ ಐದು ಲಕ್ಷಕ್ಕೂ ಹೆಚ್ಚು ಎಕರೆ ಭೂಮಿಗೆ ಬದ್ರ ನೀರುಣಿಸಲು ಯೋಜನೆ ಇದೆ ಜಲಾಶಯದಿಂದ ಪ್ರತಿವರ್ಷ ಜೂನ್ ತಿಂಗಳಿಂದ ಅಕ್ಟೋಬರ್ ವರೆಗೆ 17.4 ಟಿಎಂಸಿ ಅಡಿ ನೀರನ್ನು ಮೇಲೆತ್ತಿ ಭದ್ರಾ ಜಲಾಶಯಕ್ಕೆ ಆರಿಸಲಾಗುತ್ತದೆ ಭದ್ರಾ ಜಲಾಶಯದ 12 ಟಿಎಂಸಿ ಅಡಿ ನೀರು ಸೇರಿಸಿ ಭದ್ರಾಮೇಲ್ದಂಡೆ ಹಂಚಿಕೆ ಮಾಡುವ ವ್ಯವಸ್ಥೆ ಮಾಡಲಾಗಿದೆ ಭದ್ರಾ ಜಲಾಶಯದಿಂದ 11 ಕಿಲೋ ಮೀಟರ್ ದೂರದಲ್ಲಿರುವ ಶಾಂತಿಪುರ ಹಾಗೂ 46 ಕಿಲೋಮೀಟರ್ ದೂರದಲ್ಲಿದೆ.
ಬೆಟ್ಟದ ತಾವರೆಕೆರೆ ಹತ್ತಿರ ಪಂಪ್ ಹೌಸ್ ನಿರ್ಮಿಸಲಾಗಿದೆ 2 ನೀರನ್ನು 45 ಮೀಟರ್ ಮೇಲೆತ್ತಿ ನಾಲಗೆ ಹರಿಸಲಾಗುತ್ತದೆ ಪ್ರತಿ ಪಂಪ್ ಹೌಸ್ ನಲ್ಲಿ 4 ಮೋಟರ್ ಅಳವಡಿಸಲಾಗಿದೆ ಪ್ರತಿ ಮೋಟರ್ 150 ಕ್ಯೂಸೆಕ್ ನೀರು ಮೇಲೆತ್ತುವ ಸಾಮರ್ಥ್ಯವನ್ನು ಹೊಂದಿದೆ ಇದರಲ್ಲಿ ಒಂದು ಮೋಟಾರ್ ನಿಂದ ನೀರನ್ನು ಮಾತ್ರ 2020ರ ಮಾರ್ಚ್ ವರೆಗೆ ನಾಲಗೆ ಹರಿಸಲಾಗುತ್ತದೆ. ಅಜ್ಜಂಪುರ ಸಮೀಪ ಸುಮಾರು ಏಳು ಕಿಲೋಮೀಟರ್ ಉದ್ದದ ಸುರಂಗ ಕಾರ್ಯ ನಿರ್ಮಾಣ ವಿಳಂಬ ಆಗಿದ್ದರಿಂದ ನೀರು ಹರಿಸುವಯೋಜನೆ ವಿಳಂಬವಾಯಿತು
ಉದ್ದೇಶಿತ ಯೋಜನೆಯ ಅರ್ಧಭಾಗದಷ್ಟು ಕೆಲಸ ಪೂರ್ಣಗೊಂಡಿಲ್ಲ ಅಜ್ಜಂಪುರ ಸಮೀಪದ ರೈಲು ಹಳಿಗಳ ಕೆಳಗೆ ಸುರಂಗಮಾರ್ಗದಲ್ಲಿ ನಾಲೆ ನಿರ್ಮಾಣ ಮಾಡುವ ಕೆಲಸ ಇನ್ನೂ ಬಾಕಿ ಇದೆ ತಾತ್ಕಾಲಿಕವಾಗಿ ಎರಡು ಮೀಟರ್ ವ್ಯಾಸದ ಕೊಳವೆಗಳನ್ನು ಅಳವಡಿಸಿ ನೀರನ್ನು ತಂದು ಕುಕ್ಕ ಸಮುದ್ರದ ಕರೆಯ ಮೂಲಕ ವೇದಾವತಿ ನದಿಗೆ ಹರಿಸಿ ವಾಣಿವಿಲಾಸ ಜಲಾಶಯಕ್ಕೆ ಹರಿಸಲಾಗುವುದು.ನಂತರ ಬಂದ ನೀರನ್ನು ಕುಡಿಯುವ ನೀರಿಗಾಗಿ ಬಳಕೆ ಮಾಡುವುದರಿಂದ ಚಿತ್ರದುರ್ಗ ಜಿಲ್ಲೆಯ ತಾಲ್ಲೂಕು ಗಳಿಗೆ ನೀರಿನ ಸಮಸ್ಯೆ ನೀಗಿದಂತಾಗುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ