ಭದ್ರಾ ಮೇಲ್ದಂಡೆ ಯೋಜನೆ ಸಭೆ

ಚಿತ್ರದುರ್ಗ

         ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗೆ ಜಮೀನು ಬಿಟ್ಟುಕೊಟ್ಟಿರುವ ರೈತರಿಗೆ ಯಾವ ಕಾರಣಕ್ಕೂ ಅನ್ಯಾಯವಾಗ ಕೂಡದು. ಮಾರುಕಟ್ಟೆಯ ದರದಲ್ಲಿಯೇ ಪರಿಹಾರ ಕೊಡಬೇಕು ಎಂದು ಶಾಸಕ ಎಂ.ಚಂದ್ರಪ್ಪ ಸರ್ಕಾರವನ್ನು ಆಗ್ರಹಿಸಿದರು.

         ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ಕಾಲುವೆಯ ನಿರ್ಮಾಣಕ್ಕೆ ಹೊಳಲ್ಕೆರೆ ತಾಲ್ಲೂಕಿನ ಉಪ್ಪರಿಗೇನಹಳ್ಳಿಯ ಸರ್ಕಾರಿ ಪದವಿ ಪೂರ್ವಕಾಲೇಜಿನ ಆವರಣದಲ್ಲಿ ಯೋಜನೆಯ ಪುನರ್ ವಸತಿ ಹಾಗೂ ಪುನರ್ ನಿರ್ಮಾಣ ಕುರಿತು ರೈತದೊಂದಿಗೆ ನಡೆದ ಸಭೆಯಲ್ಲಿ

ಶಾಸಕರು ಮಾತನಾಡಿದರು

         ಭದ್ರಾ ಮೇಲ್ದಂಡೆ ಯೋಜನೆಯಿಂದ ಜಿಲ್ಲೆಯ ರೈತರಿಗೆ ಅನುಕೂಲವಾಗಿದೆ, ಆದರೆ ಕಾಲುವೆ ನಿರ್ಮಾಣಕ್ಕೆ ಬೇಕಾದ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವುದು ಅನಿವಾರ್ಯವಾಗಿದ್ದು ರೈತರಿಗೆ ಮಾರುಕಟ್ಟೆದರದಂತೆ ಪರಿಹಾರವನ್ನು ನೀಡಬೇಕು. ಚಿಕ್ಕಹಿಡುವಳಿದಾರರಿದ್ದು ಇರುವ ಅಲ್ಪಜಮೀನು ಕಳೆದುಕೊಂಡಲ್ಲಿ ನಿರಾಶ್ರಿತರಾಗುವರು. ಈ ದೃಷ್ಟಿಯಿಂದ ಎಲ್ಲಾ ಮಾನದಂಡಗಳಲ್ಲಿ ರೈತರಿಗೆ ಪರಿಹಾರವನ್ನು ಒದಗಿಸುವುದು ಅಧಿಕಾರಿಗಳ ಕರ್ತವ್ಯವಾಗಿದೆ. ಯಾವಕಾರಣದಿಂದಲೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದರು.

            ಭದ್ರಾ ಮೇಲ್ದಂಡೆಯೋಜನೆ ಸ್ವಾಧೀನ ಮಾಡಿಕೊಂಡಿರುವರೈತರಜಮೀನಗೆಕೊಡುತ್ತಿರುವ ಪರಿಹಾರ ಧನ ತುಂಬಾ ಕಡಿಮೆಯಾಗಿದೆ . ಮಾರುಕಟ್ಟೆ ಬೆಲೆಗಿಂತ ಸಾಕಷ್ಟು ಕಡಿಮೆ ಪರಿಹಾರಇದಾಗಿದ್ದು ಮಾರುಕಟ್ಟೆಯನ್ನಾಧರಿಸಿ ಪರಿಹಾರ ನೀಡಬೇಕು.ಈಗ ನೀಡುತ್ತಿರುವ ಪರಿಹಾರಎಕರೆಗೆ 3 ಲಕ್ಷಕ್ಕಿಂತ ಹೆಚ್ಚು ಬರುವುದಿಲ್ಲ. ಇರುವಒಂದೆರಡುಎಕರೆಯನ್ನು ಕಳೆದುಕೊಂಡು ಕುಟುಂಬ ನಿರ್ವಹಣೆ ಮಾಡುವುದು ಯಾವ ರೀತಿ ಎಂದ ರೈತರು ಪರಿಹಾರಧನ ಹೆಚ್ಚಿಸಬೇಕೆಂದು ಮನವಿ ಮಾಡಿದರು.

         ಭೂ ಸ್ವಾಧೀನ ಮಾಡಿಕೊಳ್ಳುವಾಗ ಕಡಿಮೆಜಮೀನು ಗುಂಟೆಗಳಲ್ಲಿ ಉಳಿದಲ್ಲಿ ಅದನ್ನು ಸಹ ಸ್ವಾಧೀನ ಮಾಡಿಕೊಂಡು ಪರಿಹಾರ ನೀಡಲುರೈತರು ಮನವಿ ಮಾಡಿದರು .ಸಂಪೂರ್ಣ ಜಮೀನು ಸ್ವಾಧೀನವಾದ ಮೇಲೆ ಒಂದೆರಡು ಗುಂಟೆಗಳನ್ನು ಏನು ಬೆಳೆಯಲು ಸಾಧ್ಯವಾಗುತ್ತದೆ ಎಂಬ ಪ್ರಶ್ನೆ ರೈತರದ್ದಾಗಿದೆ . ಭೂ ಸ್ವಾಧೀನದಿಂದ ಕುಟುಂಬದ ಜಮೀನು ಸಂಪೂರ್ಣವಾಗಿ ಇಲ್ಲವಾದಲ್ಲಿ ಅಂತಹವರಿಗೆ ಯೋಜನಾ ನಿರಾಶ್ರಿತರ ಪ್ರಮಾಣಪತ್ರ ನೀಡಬೇಕೆಂದು ಮನವಿ ಮಾಡಿದರು.

           ಹೆಚ್ಚುವರಿ ಜಿಲ್ಲಾಧಿಕಾರಿ ಸಂಗಪ್ಪ ಭದ್ರಾ ಮೇಲ್ಮಂಡೆ ಯೋಜನೆಯ 67.41 ಕಿ.ಮೀ.ನಿಂದ73 ಕಿ.ಮೀ ವ್ಯಾಪ್ತಿಯಲ್ಲಿ ಬರುವಬೂದಿಪುರ 24.34, ಮಲಿಗೇರನಹಳ್ಳಿ 18.11, ಗೂಳಿಹೊಸಹಳ್ಳಿ 48.15 ಹಾಗೂ ಶಂಕರನಹಳ್ಳಿಯಲ್ಲಿ 7.6 ಎಕರೆ ಸೇರಿ 98.2 ಎಕರೆ ಜಮೀನು ಭೂ ಸ್ವಾಧೀನ ಮಾಡಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ರೈತರು ಸಲ್ಲಿಸಿರುವ ಮನವಿಗಳನ್ನು ಆಧರಿಸಿ, ಪರಿಹಾರ ಧನ ಹೆಚ್ಚಿಸುವಂತೆ ಸರ್ಕಾರಕ್ಕೆ ಮಾಹಿತಿ ಕಳಿಸಲಾಗುವುದು ಎಂದರು.

           ಭೂ ಸ್ವಾಧೀನ ಅಧಿಕಾರಿ ಶ್ರೀಧರ್, ಭದ್ರಾ ಮೇಲ್ದಂಡೆ ಯೋಜನೆ ಕಾರ್ಯಪಾಲಕ ಇಂಜಿನಿಯರ್ ಶಿವಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ ಹಾಗೂ ಗ್ರಾಮದ ಮುಖಂಡರು, ನಾಲ್ಕು ಗ್ರಾಮದ ರೈತರು ಭಾಗವಹಿಸಿದ್ದರು.

ಪರಿಹಾರ ಮೊತ್ತ ಹೆಚ್ಚಿಸಿ

          ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ ಅನುಷ್ಠಾನಕ್ಕೆ ಸ್ವಾಧೀನಪಡಿಸಿಕೊಂಡಿರುವ ಕೃಷಿ ಭೂಮಿಗೆ ಪರಿಹಾರಧನ ಹೆಚ್ಚಿಸಿ ನಮಗೆ ನಿರಾಶ್ರಿತರ ಪ್ರಮಾಣ ಪತ್ರಕೊಡಿ ಎಂದು ಹೊಸದುರ್ಗ ತಾಲ್ಲೂಕಿನ ನಾಕಿಕೆರೆ ಗ್ರಾಮದಲ್ಲಿ ಗುರುವಾರ ನಡೆದ ಭದ್ರಾ ಮೇಲ್ದಂಡೆ ಯೋಜನೆಯ ಪುನರ್ ವಸತಿ ಹಾಗೂ ಪುನರ್ ನಿರ್ಮಾಣಕುರಿತು ಸಭೆಯಲ್ಲಿರೈತರು ಮನವಿ ಮಾಡಿದರು.

         ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಗೂಳಿಹಟ್ಟಿ ಡಿ.ಶೇಖರ್‍ರೈತರ ಬೇಡಿಕೆಗಳಿಗೆ ಸ್ಪಂದಿಸುವಂತೆ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಬೇಕು.ಭದ್ರಾ ಮೇಲ್ದಂಡೆ ಯೋಜನೆಯಡಿ ತಾಲ್ಲೂಕಿನ ರೈತರ ನೀರಾವರಿಗೆ ಹೆಚ್ಚು ಅನುಕೂಲ ಕಲ್ಪಿಸಿಕೊಡಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

          ಹೆಚ್ಚುವರಿ ಜಿಲ್ಲಾಧಿಕಾರಿ ಸಂಗಪ್ಪ ಭದ್ರಾ ಮೇಲ್ಮಂಡೆ ಯೋಜನೆಯ 65.2 ಕಿ.ಮೀ.ನಿಂದ 67.49 ಕಿ.ಮೀ ವ್ಯಾಪ್ತಿಯಲ್ಲಿ ಬರುವ ನಾಕಿಕೆರೆಯಲ್ಲಿ 49.1 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ. ರೈತರು ಸಲ್ಲಿಸಿರುವ ಮನವಿಗಳನ್ನು ಆಧರಿಸಿ, ಪರಿಹಾರಧನ ಹೆಚ್ಚಿಸುವಂತೆ ಸರ್ಕಾರಕ್ಕೆ ಮಾಹಿತಿ ಕಳಿಸಲಾಗುವುದು ಎಂದರು.

          ದೊಡ್ಡಕಿಟ್ಟದಹಳ್ಳಿ 49.09, ಕೆಂಚಿಹಳ್ಳಿ 41.31 ಹಾಗೂ ನಾಕಿಕೆರೆ 46.15 ಎಕರೆಜಮೀನು ಕಾಲುವೆ ನಿರ್ಮಾಣಕ್ಕೆ ಸ್ವಾಧೀನ ಮಾಡಿಕೊಳ್ಳಲಾಗುತ್ತದೆ.ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪ್ರೇಮಾರವೀಂದ್ರ, ಭದ್ರಾ ಮೇಲ್ದಂಡೆ ಭೂಸ್ವಾಧೀನ ಅಧಿಕಾರಿ ಶ್ರೀಧರ್ , ಎಂಜನಿಯರ್ ಶಿವಕುಮಾರ್, ತಹಶೀಲ್ದಾರ್ ವಿಜಯಕುಮಾರ್, ಕೃಷ್ಣಮೂರ್ತಿಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link