ಚಳ್ಳಕೆರೆ
ರಾಷ್ಟ್ರೀಯ ಹಬ್ಬಗಳ ತಾಲ್ಲೂಕು ಸಮಿತಿ ಆಶ್ರಯದಲ್ಲಿ ಭಗೀರಥ ಮಹರ್ಷಿಗಳ ಜಯಂತಿಯನ್ನು ಇಲ್ಲಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ಆಚರಿಸಲಾಯಿತು. ಸಮಿತಿ ಅಧ್ಯಕ್ಷ, ತಹಶೀಲ್ದಾರ್ ತುಷಾರ್ ಬಿ.ಹೊಸೂರ್ ಭಗೀರಥ ಮಹರ್ಷಿಗಳ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
12ನೇ ಶತಮಾಮದಲ್ಲಿ ಸಮಾಜದಲ್ಲಿ ಧಾರ್ಮಿಕ ಪ್ರಗತಿಯ ಶಕೆ ಪ್ರಾರಂಭವಾಗಿದ್ದು, ಎಲ್ಲಾ ಸಮುದಾಯಗಳು ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿಯನ್ನು ಹೊಂದಲು ಪ್ರಾರಂಭಿಸಿದರು. ಜನರಲ್ಲಿ ತುಂಬಿದ್ದ ಅಜ್ಞಾನವನ್ನು ಹೋಗಲಾಡಿಸಲು ಜ್ಞಾನದ ಬೆಳಕನ್ನು ನೀಡಿದ ಅನೇಕ ದಾರ್ಶನಿಕರಲ್ಲಿ ಭಗೀರಥ ಮಹರ್ಷಿಗಳು ಸಹ ಒಬ್ಬರಾಗಿದ್ದಾರೆ. ಸರ್ಕಾರ ಇಂತಹ ಮಹಾನೀಯರ ಕಾರ್ಯಕ್ರಮಗಳು ಆಚರಿಸುವ ಮೂಲಕ ಇವರ ಸೇವೆಯನ್ನು ಸ್ಮರಿಸುವ ಅವಕಾಶವನ್ನು ಮಾಡಿಕೊಟ್ಟಿದೆ. ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಕೇವಲ ಕಚೇರಿ ಒಳಾಂಗಣದಲ್ಲಿ ನಡೆಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪ ಖಜಾನೆ ಅಧಿಕಾರಿ ತಿಪ್ಪೇರುದ್ರಪ್ಪ, ಆಹಾರ ಇಲಾಖೆ ಇನ್ಸ್‍ಪೆಕ್ಟರ್ ರಂಗಸ್ವಾಮಿ, ಚುನಾವಣಾ ಶಾಖೆಯ ನಾಗರಾಜ, ಸುಮಾ, ಡಿ.ಶ್ರೀನಿವಾಸ್, ವರುಣ್, ಕಂದಾಯಾಧಿಕಾರಿ ಶರಣಬಸಪ್ಪ, ಗ್ರಾಮ ಲೆಕ್ಕಾಧಿಕಾರಿ ರಾಜೇಶ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಾಲತಿ, ತಾಲ್ಲೂಕು ಕಚೇರಿ ಮಹಿಳಾ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








