ಜಲ್ಲಾ ಮಟ್ಟದ ಭಜನಾ ಮೇಳ..!!

ಎಂ ಎನ್ ಕೋಟೆ :

        ಬಸವ ಕಲ್ಯಾಣದಿಂದ ಇಲ್ಲಿಗೆ ಬಸವ ಜ್ಯೋತಿಯನ್ನು ಹೊತ್ತು ತಂದ್ದು ಮಲ್ಲಿಕಾರ್ಜುನ ಶಿವಯೋಗಿಗಳ ಪುಣ್ಯ ಕಾರ್ಯವನ್ನು ನೆರವಹಿಸುತ್ತಿದ್ದೇವೆ ಎಂದು ಬಸವೇಶ್ವರ ಪರಶುಕಟ್ಟೆ ಮಠದ ಶ್ರೀ ರಾಜಗುರೂಜಿ ನಿರಂಜನ ಚರಮೂರ್ತಿ ಮಹಾಸ್ವಾಮಿಗಳು ತಿಳಿಸಿದರು.

      ಗುಬ್ಬಿ ತಾಲ್ಲೂಕಿನ ಗವಿಮಠ ಬೆಟ್ಟದಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಭಜನಾ ಮೇಳ ಬಸವ ಜಯಂತಿ , ಮಲ್ಲಿಕಾರ್ಜುನ ಸ್ವಾಮಿ ಶಿವಯೋಗಿಗಳ ಸಂಸ್ಕರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಬೆಟ್ಟಹಳ್ಳಿ ಇತಿಹಾಸ ಪ್ರಸಿದ್ದವಾಗಿದ್ದು ಚಂದ್ರಶೇಖರ ಮಹಾಸ್ವಾಮಿಗಳು ಬಸವ ಕಲ್ಯಾಣದ ಕಾರ್ಯಕ್ರಮಗಳನ್ನು ಶ್ರೀಮಠದಲ್ಲಿ ಮುಂದುವರಿಸುತ್ತ ಬಂದಿದ್ದಾರೆ. ಶ್ರೀಗಳು ನಿರಂತರವಾಗಿ ಮಾಡುತ್ತಿರುವ ಬಸವ ಚಿಂತನೆ , ಧಾರ್ಮಿಕ ಚಿಂತನೆ , ಹಾಘೂ ಸಾಮಾಜಿಕ ಸಮಾನತೆಯನ್ನು ಕಾಪಡುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಇವರು ಬಸವಣ್ಣನವರ ಯೋಗ ತತ್ವ ಸಿದ್ದಾಂತಗಳನ್ನು ವಿಶ್ವಕ್ಕೆ ಸಾರುವಲ್ಲಿ ಶ್ರೀಗಳು ಯಶಸ್ವಿಯಾಗುತ್ತಿದ್ದಾರೆ.

       ಬಸವಣ್ಣ ಸಾಮಾನ್ಯ ಪುರುಷರಲ್ಲ ವಿಶ್ವ ಜ್ಯೋತಿ ವಿಶ್ವ ಬಿಂದು ವಿಶ್ವ ರೂವಾರಿ ಎಂದು ಶ್ರೀಗಳು ಹಾಡಿ ಒಗಳಿದ್ದಾರೆ. ಇದೇ ಸಂಧರ್ಭದಲ್ಲಿ ಸಿದ್ದಗಂಗಾ ಶ್ರೀಗಳನ್ನು ಸ್ಮರಿಸಿಕೊಂಡ ಅವರು ವಿಶ್ವಕ್ಕೆ ತ್ರಿವಿಧ ದಾಸೋಹ ಏನೇಬುಂದನ್ನ ತಿಳಿಸಿಕೊಟ್ಟ ಮಹಾನ್ ಪುರುಷರು ಅವರ ಮಾರ್ಗದರ್ಶನ ವಿಶ್ವಕ್ಕೆ ಮಾದರಿ ಎಂದು ತಿಳಿಸಿದರು. ನಿರಂತರವಾಗಿ ಶ್ರೀಗಳು ಮಠದಲ್ಲಿ ಭಜನಾ ಸಂಘಗಳನ್ನು ಕರೆಸಿ ಮಲ್ಲಿಕಾರ್ಜುನ ಸ್ವಾಮಿ ಶಿವಯೋಗಿಗಳ ಅಣತೆಯಂತೆ ಸಂಗೀತ ಉಳಿಸಿ ಬೆಳೆಸುವ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದ್ದಾರೆ. ಮೂಲೆ ಗುಂಪೂಗಿರುವ ಭಜನಾ ತಂಡಗಳನ್ನು ಜಗತ್ತಿಗೆ ಬಿತ್ತರಿಸುವಂತಹ ಭಜನೆಯಲ್ಲಿ ಇರುವ ಭಕ್ತಿಸಾರವನ್ನು ಜಗತ್ತಿಗೆ ತಿಳಿಸುತ್ತ ಬಂದಿದ್ದಾರೆಂದು ತಿಳಿಸಿದರು.

         ಸಾನಿಧ್ಯ ವಹಿಸಿದ್ದ ಬೆಟ್ಟದಹಳ್ಳಿ ಗವಿಮಠಧ್ಯಕ್ಷರಾದ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳು ಮಾತನಾಡಿ ಭಜನಾ ಮೇಳ ಆತ್ಮನಂದನವನ್ನು ಉಂಟು ಮಾಡುತ್ತದೆ. ಎಲ್ಲ ಕಡೆ ಭಾವ ಭಕ್ತಿಗಳನ್ನು ತುಂಬುತ್ತದೆ. ಆತ್ಮ ಉದ್ದಾರಕ್ಕಾಗಿ ತತ್ವ ಪದಗಳು ಸಹಕಾರಿಯಾಗಿವೆ.

        ಮಲ್ಲಿಕಾರ್ಜುನ ಶಿವಯೋಗಿಗಳು ನಾಡು ಕಂಡ ಆತ್ಯಂತ ಧೈವ ಪುರುಷ ಶ್ರಿಗಳು ಶಿವೈಕ್ಯರಾದಗ ಮೂರು ದಿನಗಳ ಕಾಲ ಭಜನಾ ಕಾರ್ಯಕ್ರಮವನ್ನ ಮಾಡಲಾಯಿತ್ತು. ಅಖಂಡ ಭಜನೆ ಮಾಡಿ ನಂತರ ಬಸವ ಜಯಂತಿಯಂದು ಶಿವೈಕ್ಯರಾದರು ಎಂದು ಭಾವ ತುಂಬಿ ಹೇಳಿದರು. ಶಿವಯೋಗಿಗಳು ಉತ್ತರದಿಂದ ದಕ್ಷಿಣಾ ಭಾಗಕ್ಕೆ ಬಂದು ಚರಣ ತತ್ವ , ಭಜನೆ ಮುಂತಾದವುಗಳನ್ನ ಇಲ್ಲಿ ಬಿತ್ತರಿಸಿ ಬೆಟ್ಟದಹಳ್ಳಿ ಮಠದಲ್ಲಿ ಐಕ್ಯರಾಗಿರುವುದು ನಮ್ಮೆಲ್ಲರ ಸುದೈವ ಎಂದು ತಿಳಿಸಿದರು.

       ಈ ಸಂಧರ್ಭದಲ್ಲಿ ಜಿಲ್ಲೆಯ ನಾನಾ ತಾಲ್ಲೂಕಗಳಿಂದ ವಿವಿಧ ಭಜನಾ ಮಂಡಳಿಗಳು ಭಾಗವಹಿಸಿ ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಸುಮಾರು 32 ಭಜನಾ ತಂಡಗಳು ಭಾಗವಹಿಸಿದ್ದವು.

        ಬೆಟ್ಟದಹಳ್ಳಿ ಮಲ್ಲಿಕಾರ್ಜುನಸ್ವಾಮಿ ವಿದ್ಯಾಸಂಸ್ಥೆಯ ಖಜಾಂಚಿ ಬಿ ಎಂ ನಂಜುಂಡಯ್ಯ ನವರು ಕರ್ನಾಟಕ ರತ್ನ , ನಾಟಕ ರತ್ನ ಹಿರಿಯ ಕಲಾವಿದರು ಸಾಮಾಜವನ್ನ ತಿದ್ದಿದಂತಹ ಮಹಾನ್ ಪುರುಷ ಮಾಸ್ವರ್ ವೀರಣ್ಣಯ್ಯನವರನ್ನು ಸ್ಮರಿಸಿಕೊಂಡು ಅವರ ಹೆಸರಿನಲ್ಲಿ ಎಲ್ಲರೂ ಒಂದು ನಿಮಿಷಗಳ ಕಾಲ ಮೌನ ಆಚರಿಸಿಲು ಸಲಹೆ ನೀಡಿದರು. ಅದರಂತೆ ಎಲ್ಲರೂ ಮೌನ ಆಚರಿಸಿದರು.

         ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನಸ್ವಾಮಿ ವಿದ್ಯಾಸಂಸ್ತೆಯ ಕಾರ್ಯದರ್ಶಿ ನಿರಂಜನಮೂರ್ತಿ , ಖಜಾಂಚಿ ಬಿ ಎಂ ನಂಜುಂಡಪ್ಪ , ಪ್ರಚಾರ್ಯ ಬಿ ಯು ಚಂದ್ರಶೇಖರ್ , ನಿವೃತ್ತ ಪ್ರಾಧ್ಯಾಪಕ ಕೋ.ರಂ. ಬಸವರಾಜು . ಉಪನ್ಯಾಸಕರಾದ ಕೆ. ಎಸ್ ಸಿದ್ದಬೈರಯ್ಯ , ಬಸವರಾಜು , ಕುಮಾರಸ್ವಾಮಿ , ರಾಮೇಗೌಡ ಹಾಗೂ ಜೈದೇವಪ್ಪ ಹಾಗೂ ಹಿರಿಯ ಕಲಾವಿದರೂ ಮುಖಂಡರು ಭಾಗವಹಿಸಿದ್ದರು.

 

Recent Articles

spot_img

Related Stories

Share via
Copy link