ಭಕ್ತಸಾಗರ ನಡುವೆ ಅಕ್ಕ-ತಂಗಿಯರ ಬೇಟಿ

ಚಿತ್ರದುರ್ಗ

      ಐತಿಹಾಸಿಕ ನಗರಿ ದೋಡ್ಡಪೇಟೆಯಲ್ಲಿ ಮಂಗಳವಾರ ರಾತ್ರಿ ಭಕ್ತ ಸಾಗರದ ನಡುವೆ ಬರಗೇರಮ್ಮ ಮತ್ತು ತಿಪ್ಪಿನಘಟ್ಟಮ್ಮ ಅಕ್ಕತಂಗಿ ಭೇಟಿಯಾಯಿತು.

       ನಗರದ ದೊಡ್ಡಪೇಟೆ ರಾಜಬೀದಿಯಲ್ಲಿ ಬರಗೇರಮ್ಮ ಮತ್ತು ತಿಪ್ಪಿನಘಟ್ಟಮ್ಮ ಭೇಟಿಯಾಗುತ್ತಿದ್ದಂತೆ ಭಕ್ತರಿಂದ ಜೈಕಾರ ಮೊಳಗಿತು. ಭಕ್ತಿ ಭಾವದಿಂದ ಕೈ ಮುಗಿದು ದೇವರಿಗೆ ಭಕ್ತಿ ಸಮರ್ಪಿಸಿದರು. ಕೆಲವರು ಪುಷ್ಪ ಅರ್ಪಿಸಿ ಭಕ್ತಿ ಸಮರ್ಪಿಸಿದರು. ಸಂಜೆಯಿಂದಲೇ ರಾಜಬೀದಿಯ ಇಕ್ಕಲೆಗಳಲ್ಲಿ ಸಾವಿರಾರು ಜನರು ಕಾದು ನಿಂತಿದ್ದರು. ಸಂಜೆ 9 ಗಂಟೆಯ ಸುಮಾರಿಗೆ ಬರಗೇರಮ್ಮ ಹಾಗೂ ತಿಪ್ಪಿನಘಟ್ಟಮ್ಮ ದೇವಿಯನ್ನು ಹೂವಿನಿಂದ ಅಲಂಕಾರಗೊಳಿಸಿ ಮೆರವಣಿಗೆ ಮೂಲಕ ಕರೆತರಲಾಯಿತು.

        ನಗರದ ಪಶ್ಚಿಮ ಭಾಗದ ಹೊಳಲ್ಕೆರೆ ರಸ್ತೆಯ ತಾಣದಲ್ಲಿ ನೆಲೆಸಿರುವ ಬರಗೇರಮ್ಮ ಹಾಗೂ ಪೂರ್ವ ಭಾಗದಲ್ಲಿನ ಜೋಗಿಮಟ್ಟಿ ರಸ್ತೆಯ ಉದ್ಯಾನದಲ್ಲಿ ನೆಲೆಸಿರುವ ತಿಪ್ಪಿನಘಟ್ಟಮ್ಮ ದೇವಿಯ ಭೇಟಿ ಉತ್ಸವವನ್ನು ಸಾವಿರಾರು ಭಕ್ತಾದಿಗಳು ರಸ್ತೆಯ ಇಕ್ಕೆಲಗಳಲ್ಲಿ ನಿಂತು ವೀಕ್ಷಿಸಿ ಕಣ್ತುಂಬಿಕೊಂಡರು. ವಿಶೇಷವಾಗಿ ಪುಷ್ಪಗಳಿಂದ ಆಕರ್ಷಕವಾಗಿ ದೇವತೆಗಳನ್ನು ಅಲಂಕರಿಸಿದ್ದು ಮನಮೋಹಕವಾಗಿತ್ತು. ವಿವಿಧ ವಾದ್ಯಗಳು ಭೇಟಿ ಉತ್ಸವಕ್ಕೆ ಹೆಚ್ಚಿನ ಮೆರುಗು ನೀಡ್ದಿದವು.

       ಹೊಳಲ್ಕೆರೆ ರಸ್ತೆಯಲ್ಲಿರುವ ಬರಗೇರಮ್ಮ ದೇವಸ್ಥಾನದಿಂದ ಬರಗೇರಮ್ಮ ದೇವಿ ಹಾಗೂ ಕರುವಿನಕಟ್ಟೆ ವೃತ್ತದ ತಿಪ್ಪಿನಘಟ್ಟಮ್ಮ ದೇವಸ್ಥಾನದಿಂದ ಹೊರಟ ತಿಪ್ಪಿನಘಟ್ಟಮ್ಮ ದೇವಿ ದೊಡ್ಡಪೇಟೆ ಬೀದಿ ಪ್ರವೇಶಿಸುತ್ತಿದ್ದಂತೆ ಹೆಜ್ಜೆ ನಿಧನವಾಗ ತೊಡಗಿದವು. ಮುಂದಕ್ಕೆ ಹೋಗುವುದು ಹಿಂದಕ್ಕೆ ಬರುವುದು. ಇದನ್ನು ನೋಡುತ್ತಿದ್ದ ಭಕ್ತರಿಗೆ ಅಕ್ಕತಂಗಿ ಭೇಟಿ ಯಾವಾಗ ಆಗುತ್ತದೆ ಎಂಬ ಕುತೂಹಲ ಕೆರಳಿಸಿತು. ಬರಗೇರಮ್ಮ ಮೊದಲು ಬರಲಿ ಎಂದು ತಿಪ್ಪಿನಘಟ್ಟಮ್ಮ , ತಿಪ್ಪಿನಘಟ್ಟಮ್ಮ ಮೊದಲು ಬರಲಿ ಎಂದು ಬರಗೇರಮ್ಮ ಇಬ್ಬರು ಬೀಗುತ್ತಾ ಹಿಂದಕ್ಕೆ ಮುಂದಕ್ಕೆ ಹೆಜ್ಜೆ ಹಾಕುತ್ತಿದ್ದು ನೋಡಲು ಕಣ್ಗಳೇ ಸಾಲುವುದಿಲ್ಲ. ಕೊನೆಗೂ ಭಕ್ತರ ಕುತೂಹಲಕ್ಕೆ ತೆರೆ ಬಿದ್ದಿತ್ತು. ಅಕ್ಕ ತಂಗಿ ಭೇಟಿಯಾಗುತ್ತಿದ್ದಂತೆ ಜನರು ಚಪ್ಪಾಳೆ ಮೂಲಕ ಹರ್ಷದ್ಗೋಗಾರ ವ್ಯಕ್ತಪಡಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap