ಹಿರಿಯೂರು :
ಭಾರತ ದೇಶ ಮಹಿಳಾ ಪ್ರಧಾನ ರಾಷ್ಟ್ರವಾಗಿದ್ದು, ಇಲ್ಲಿ ಅಕ್ಕಮಹಾದೇವಿ, ಇಂದಿರಾಗಾಂಧಿ, ಪ್ರತಿಭಾ ಪಾಟೀಲ್, ಕಲ್ಪನಾ ಚಾವ್ಲ ಮೊದಲಾದವರನ್ನು ಪೋಷಿಸಿ ಬೆಳಸಿದ ರಾಷ್ಟ್ರವಾಗಿದೆ ಎಂಬುದಾಗಿ ಶ್ರೀಗಿರೀಶ ವಿದ್ಯಾಸಂಸ್ಥೆ ಉಪಾಧ್ಯಕ್ಷೆ ಶ್ರೀಮತಿ ಎಂ.ಎನ್.ಸೌಭಾಗ್ಯವತಿದೇವರು ಹೇಳಿದರು.
ನಗರದ ಶ್ರೀಗಿರೀಶ ಮಹಾವಿದ್ಯಾಲಯದ ಆವರಣದಲ್ಲಿ ಏರ್ಪಡಿಸಲಾಗಿದ್ದ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಮಹಿಳೆಯರು ಉತ್ತಮ ಸಾಧನೆ ಮಾಡಬೇಕು. ಗಿರೀಶ ಮಹಿಳೆಯರ ವಿದ್ಯಾಸಂಸ್ಥೆಯಲ್ಲಿ ನಾನು ಉಪಾಧ್ಯಕ್ಷಳಾಗಿರುವುದು ನಿಜಕ್ಕೂ ನನಗೆ ಹೆಮ್ಮೆ ತಂದಿದೆ. ಆ ಗುರುದೆಸೆಯಿಂದ ಅನೇಕ ಸಂಘ ಸಂಸ್ಥೆಗಳಲ್ಲಿ ಉನ್ನತ ಹುದ್ದೆಯನ್ನು ನಿಭಾಯಿಸಿದ್ದೇನೆ ಎಂದರು.
ಶ್ರೀ ಗಿರೀಶ ವಿವಿಸಂಘದ ಅಧ್ಯಕ್ಷರಾದ ಬಿ.ಎನ್.ತಿಪ್ಪೇಸ್ವಾಮಿ ಮಾತನಾಡಿ, ಶಿಕ್ಷಕರು ಈ ದೇಶದ ನಿರ್ಮಾಣಕಾರರು ಈ ದೇಶದ ಮಾದರಿ ಶಿಲ್ಪಿಗಳು, ಈ ದೇಶವನ್ನು ಉನ್ನತ ಸ್ಥಾನಕ್ಕೆ ಏರಿಸಬೇಕಾದರೆ ಶಿಕ್ಷಣ ಕ್ಷೇತ್ರ ಉತ್ತಮವಾಗಿ ರೂಪುಗೊಳ್ಳಬೇಕು ಎಂಬುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ 4ನೇ ರ್ಯಾಂಕ್ ವಿಜೇತ ಜಿ.ರಶ್ಮಿಯವರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಶಿಕ್ಷಣ ನಿಕಾಯ ದಾವಣಗೆರೆ ವಿವಿ ನಿಲಯ ದಾವಣಗೆರೆ ಮುಖ್ಯಸ್ಥರಾದ ಡಾ||ಬಿ.ಸಿ.ಅನಂತರಾಮು ಮಾತನಾಡಿ, ಶಿಕ್ಷಕರನ್ನು ಚುನಾವಣೆ, ಜನಗಣತಿ, ಸಮೀಕ್ಷೆ, ಜಾಗೃತಿ, ಪ್ರಚಾರಾಂದೋಲನ ಕಾರ್ಯಕ್ರಮಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ಇದು ವಿಪರ್ಯಾಸದ ಸಂಗತಿಯಾಗಿದೆ ಎಂದರಲ್ಲದೆ ಬಿ.ಇಡಿ ಪದವಿಯ ಬಗ್ಗೆ ಇಷ್ಟಪಟ್ಟು ಅಭ್ಯಾಸ ಮಾಡಬೇಕು. ಈ ಪದವಿ ಜೀವನದಲ್ಲಿ ಶಿಸ್ತು ಮತ್ತು ನಿಯಮವನ್ನು ದಯಪಾಲಿಸುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ನಿರ್ದೇಶಕರುಗಳಾದ ವಿ.ತಿಪ್ಪೇಸ್ವಾಮಿ, ಬಸವರಾಜ್, ಆರ್.ಟಿ.ಬಸವರಾಜ್, ಶ್ರೀ ಗಿರೀಶ್ ವಿವಿ ಸಂಘ, ಪ್ರಾಂಶುಪಾಲರಾದ ಶ್ರೀಮತಿ ಸುಧಾ ಉಪನ್ಯಾಸಕರಾದ ಮಂಜುನಾಥ್, ನಿಜಲಿಂಗಪ್ಪ, ರಘು, ಶಾಂತಮೂರ್ತಿ, ವೀಣಾ, ಲೋಕೇಶ್, ನಾಗರಾಜ್, ನಯಿಮುದ್ದೀನ್, ಪ್ರಕಾಶ್, ರಾಜೇಂದ್ರ, ವಿಜಯ, ಮಲ್ಲಿಕ್‍ಸಾಬ್, ಗಜೇಂದ್ರ ಇತರರು ಉಪಸ್ಥಿತರಿದ್ದರು. ಆರಂಭದಲ್ಲಿ ಸುಷ್ಮಾ ಪ್ರಾರ್ಥಿಸಿದರು. ಬಿ.ಬ್ರಜಿತ ಸ್ವಾಗತಿಸಿ, ಕೊನೆಯಲ್ಲಿ ಸಾಗರ್ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
