ತುಮಕೂರು:
ಡಾ.ಬಿ.ಆರ್.ಅಂಬೇಡ್ಕರ್ ರವರು ಶೋಷಿತರಿಗಲ್ಲದೆ ಎಲ್ಲಾ ವರ್ಗದವರಿಗೂ 2000 ವರ್ಷಗಳ ಗುಲಾಮಗಿರಿಯನ್ನು ಪ್ರತಿಪಾಧಿಸುತ್ತಿದ್ದ, ಮನುಸ್ಮೃತಿಯನ್ನು 1927ರಲ್ಲಿ ಸುಟ್ಟಿ, 1950ರಲ್ಲಿ ಸಂವಿಧಾನ ರಚಿಸುವ ಮೂಲಕ ಸ್ವತಂತ್ರ್ಯ, ಸಮಾನತೆ ಮತ್ತು ಭಾತೃತ್ವಗಳ ಸಿದ್ದಾಂತದ ಮೂಲಕ ಪ್ರತಿಯೊಬ್ಬರಲ್ಲೂ ಆತ್ಮಾಭಿಮಾನವನ್ನು ನೀಡಿ ಘನತೆಯಿಂದ ಬದುಕುವ ಅವಕಾಶ ಕಲ್ಪಿಸಿದ್ದಾರೆ ಎಂದು 6ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ಗೌರವನ್ವಿತ ಬಿ.ಎಲ್.ಜಿನರಳ್ಕಾರ್ ರವರು ತಿಳಿಸಿದರು.
ಡಾ.ಅಂಬೇಡ್ಕರ್‍ರವರು 128ನೇ ಮತ್ತು ಡಾ .ಬಾಬು ಜಗಜೀವನ್ ರಾಂ ರವರ 112ನೇ ಜಯಂತಿಯನ್ನು ದಲಿತ ಸಂಘರ್ಷ ಸಮಿತಿ, ಜಿಲ್ಲಾ ಪೌರ ಕಾರ್ಮಿಕ ಸಂಘ ಹಾಗೂ ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಸಂಯುಕ್ತವಾಗಿ ಎಂ.ಜಿ.ರಸ್ತೆಯಲ್ಲಿರುವ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಹಿಂದೆ ದೇಶದ ಮರೆಮಾಚಿದ ನಿಜವಾದ ಇತಿಹಾಸವನ್ನು ಹೊರತಂದು ಮೂಲನಿವಾಸಿಗಳ ನಾಗ ಜನಾಂಗದ ಇತಿಹಾಸವನ್ನು ತಿಳಿಸಿದರು.
ಅಂದು ತಳ ಸಮುದಾಯದವರಿಗೆ ಸಾರ್ವಜನಿಕ ಬಾವಿ, ಕೆರೆ, ಮತ್ತು ದೇವಸ್ಥಾನಗಳ ಪ್ರವೇಶ ನಿಷೇಧವಿದ್ದರ ಬಗ್ಗೆ ಪ್ರತಿಭಟಿಸಿದರು,ಇತಿಹಾಸ ಮರೆತವರು ಇತಿಹಾಸ ಸೃಷ್ಠಿಸಲಾರರು, ಆದ್ದರಿಂದ ಮೂಲ ನಿವಾಸಿಗಳು ನೈಜ ಇತಿಹಾಸ ತಿಳಿಯುವುದರ ಮೂಲಕ ಆಳುವ ವರ್ಗ ಆಗಬೇಕು, ನಾವೂ ಮೌರ್ಯ ಕುಲಕ್ಕೆ ಸೇರಿದವರು, ಮಧ್ಯೆ ಏಷ್ಯಾದಿಂದ ಬಂದತಂಹವರು ಜಾತಿ, ವರ್ಣಗಳನ್ನು ಹುಟ್ಟು ಹಾಕಿ.
ಅಶೋಕನ ಸಾಮ್ರಾಜ್ಯ ಅಂದು ಅನೇಕ ರಾಷ್ಟ್ರಗಳನ್ನು ಒಳಗೊಂಡು ವಿಸ್ತಾರವಗಿತ್ತು, 2000 ವರ್ಷಗಳ ಗುಲಾಮಗಿರಿಯ ಕೇಂದ್ರ ಮನುಸ್ಮೃತಿಯಲ್ಲಿತ್ತು, ಅಂದು ಗುರುಕುಲದಲ್ಲಿ ಕೆಳಜಾತಿಯವರೂ ವೇದಗಳನ್ನು ಮತ್ತು ಅಕ್ಷರ ಅಭ್ಯಾಸಗಳನ್ನು ಅಧ್ಯಾನ ಮಾಡುವಂತೆಯಿರಲಿಲ್ಲ. ಕೆಳಜಾತಿಯವರಿಗೆ ಶಿಕ್ಷಣ ನೀಡಲು ಮೆಕಾಲೆ ಮತ್ತು ಲಾರ್ಡ್ ಬೆಂಟಿಂಗ್‍ರು ಜಾರಿಗೊಳಿಸಿದ ಸಾರ್ವತ್ರಿಕ ಶಿಕ್ಷಣದಿಂದ ಸಾಧ್ಯವಾಯಿತ್ತು.
ಅಂಬೇಡ್ಕರ್ ರವರನ್ನು ನಾವು ಕೇವಲ ಮೀಸಲಾತಿ, ಮತದಾನ ಹಕ್ಕುಗಳಿಗೆ ನೋಡಿದರೆ ಅವರ ಚಿಂತನೆಗಳನ್ನು ನಾವೇ ಸೀಮಿತಗೊಳಿಸಿದಂತೆ ಆಗುತ್ತದೆ. ಮಾಕ್ರ್ಸ್‍ವಾದ, ಗಾಂಧಿವಾದಗಳು ಇಂದು ವಿಫಲಗೊಳ್ಳುತ್ತಿರುವ ಕಾಲದಲ್ಲಿ ಅಂಬೇಡ್ಕರ್ ವಾದವೊಂದೆ ಸಮಕಾಲೀನ ವ್ಯವಸ್ಥೆಗೆ ಪೂರಕವಾಗಿದ್ದು, ಆದ್ದರಿಂದ ವಿಶ್ವದ ಬಹುತೇಕ ರಾಷ್ಟ್ರಗಳು ಅಂಬೇಡ್ಕವಾದವನ್ನು ಒಪ್ಪಿಕೊಳ್ಳುತ್ತಿರುವುದರಿಂದ ಅವರು ವಿಶ್ವಮಾನವರಾಗುತ್ತಿದ್ದಾರೆ, ಭಾರತದ ಇತಿಹಾಸ ಬದಲಾಯಿಸಿದ ಮಹಾನ್ ಚೇತನ್ ಅಂಬೇಡ್ಕರ್ ಆಗಿದ್ದಾರೆ ಎಂದು ತಿಳಿಸಿದರು.
ನಂತರ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿಯ ಸದಸ್ಯರಾದ ನರಸಿಂಹಯ್ಯ ರವರು ಮಾತನಾಡಿ ದಲಿತ ಸಂಘಟನೆಗಳು ಹೆಚ್ಚು ವಿಘಟನೆ ಹೊಂದುತ್ತಿದ್ದು, ಇದರಿಂದ ನಮ್ಮ ಬಲ ಕುಗ್ಗಿದಂತೆ ಆಗುತ್ತಿದೆ ಆದ್ದರಿಂದ ನಾವೆಲ್ಲ ಒಗ್ಗಟ್ಟಾಗಿ ಅಂಬೇಡ್ಕರ್ ಆಶಯಗಳನ್ನು ಹಿಡೆಸರಬೇಕೆಂದು ತಿಳಿಸಿದರು.
ಸ್ಲಂ ಜನಾಂದೋಲನಾ ಕರ್ನಾಟಕದ ಸಂಚಾಕರಾದ ಎ.ನರಸಿಂಹಮೂರ್ತಿ ಮಾತನಾಡಿ ಅಂಬೇಡ್ಕರ್ ಮನುವಾದಿಗಳಿಗೆ ಸಂವಿಧಾನ ರಚಿಸುವ ಮೂಲಕ ಪ್ರತಿಕ್ರಾಂತಿ ಮಾಡಿದ್ದರು, ಅಂತಹ ಕ್ರಾಂತಿಯನ್ನು ಪುನಃ ಅತ್ತಿಕ್ಕಿ ಮನು ಸಿದ್ದಾಂತವನ್ನು ಜಾರಿಗೊಳಿಸಲು ಮೋದಿ ಮುಂದಾಗಿದ್ದಾರೆ, ಇಂತಹ ಮನುವಾದಿ ಸರ್ಕಾರಗಳನ್ನು ಕಿತ್ತಿ ಹಾಕಲು ಅಂಬೇಡ್ಕರ್ ರವರು ನಮಗೆ ನೀಡಿರುವ ಮತದಾನದ ಹಕ್ಕುನ್ನು ಜಾಗೃತಿಯಿಂದ ಚಲಾಯಿಸಬೇಕೆಂದು ಕರೆ ನೀಡಿದರು.
ಸಿ.ಐ.ಟಿ.ಯುನ ಜಿಲ್ಲಾಧ್ಯಕ್ಷರಾದ ಸೈಯದ್ ಮುಜೀಬ್ ಮಾತನಾಡಿ ಇಂದು ಯಾಜಮಾನಿಕೆಯು ಶೋಷಿತರಲ್ಲು ಕಂಡು ಬರುತ್ತೀರುವುದು ವಿಷಾದನೀಯ. ಪಾಳೇಗಾರ ಮನಸ್ಸುಗಳಿಂದ ಹೊರಬಂದು ನಾವು ಬಹಿರಂಗವಾಗಿ ಮಾನವ ಹಕ್ಕಿನ ವಿರೋಧ ಮಾಡುವರನ್ನು ಖಂಡಿಸಬೇಕೆಂದರು.
ಮನುವಾದಿ ಆಡಳಿತ ಮತ್ತೊಮ್ಮೆ ಅಧಿಕಾರ ಹಿಡಿಯದಂತೆ ಪ್ರತಿಜ್ಞೆ ಮಾಡಿ- ಪ್ರೋ.ಕೆ.ದೊರೈರಾಜ್ ನಂತರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರಾದ ಪ್ರೋ.ಕೆ.ದೊರೈರಾಜ್ ಮಾತನಾಡಿ ಅಂಬೇಡ್ಕರ್ ಅಂದರೆ ಈ ದೇಶದ ಬದಲಾವಣೆಯ ಸಂಕೇತ. ಅದೊಂದು ಶಕ್ತಿ. ಆದರೆ ಅಂಬೇಡ್ಕರ್ ಪೋಟೋವನ್ನು ಮುಂದಿಟ್ಟುಕೊಂಡು ಡೋಲು ಬಾರಿಸಿಕೊಂಡು ಮೆರವಣಿಗೆ ಹೋಗುವುದರಿಂದ ಯಾವುದೇ ಪ್ರಯೋಜನವಿಲ್ಲ. ಬದಲಿಗೆ ಅಂಬೇಡ್ಕರ್ ಜೀವನ ಸಾಧನೆ ಮತ್ತು ತಾತ್ವಿಕತೆಯನ್ನು ಜನರಿಗೆ ತಿಳಿಸಬೇಕು. ಕಾಟಾಚಾರಕ್ಕೆ ಅಂಬೇಡ್ಕರ್ ಜಯಂತಿ ಮಾಡಬಾರದು.
ಅಂಬೇಡ್ಕರ್ ಗುಲಾಮತನದ ವಿಮೋಚನೆಗೆ ಎಲ್ಲಾ ಮನುಷ್ಯರು ಘನತೆಯಿಂದ ಬದುಕಲು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಲು ಮನುಸ್ಮೃತಿಯನ್ನು ಸುಟ್ಟರು. ಅಕ್ಷರ ಕಲಿಯದಂತೆ, ಆಸ್ತಿ ಮಾಡದಂತೆ ಕೇವಲ ಮೇಲ್ವರ್ಗದ ಸೇವೆ ಮಾಡಿಕೊಂಡಿರಬೇಕೆಂಬ ಮನಸ್ಥಿತಿಯನ್ನು ಪ್ರತಿಭಟಿಸಿದ ಅಂಬೇಡ್ಕರ್ ಅವರ ವಿಚಾರಗಳನ್ನು ತಲೆಯಲ್ಲಿ ಹೃದಯದಲ್ಲಿಟ್ಟುಕೊಳ್ಳಬೇಕು. ಅಕ್ಷರವನ್ನು, ಹಕ್ಕುಗಳನ್ನು ಕಿತ್ತುಕೊಂಡ, ಸೇವೆಯನ್ನು ಮಾಡಿಸಿಕೊಂಡು ಅವಮಾನ ಮಾಡಿದ ಮನುವಾದಿ ಆಡಳಿತ ಮತ್ತೊಮ್ಮೆ ಅಧಿಕಾರ ಹಿಡಿಯದಂತೆ ತಡೆಯುವ ಪ್ರತಿಜ್ಞೆ ಮಾಡಬೇಕಾಗಿದೆ.
ದಲಿತರು ಅಂಬೇಡ್ಕರ್ ಹಾಕಿಕೊಟ್ಟ ಹಾದಿಯಲ್ಲಿ ನಡೆಯಬೇಕಾಗಿದೆ. ದುಡಿಯುವ ಜನ, ಮಾನವೀಯ ಸಮಾಜವನ್ನು ಕಟ್ಟುವ ಜನ ಐಕ್ಯತೆಯಿಂದ ಮುನ್ನಡೆಯಬೇಕು. ಮನುಸ್ಮೃತಿ ಮತ್ತೊಮ್ಮೆ ಆಳ್ವಿಕೆ ಮಾಡುವುದನ್ನು ತಪ್ಪಿಸಬೇಕು. ಅಂಬೇಡ್ಕರ್ ನೀಡಿದ ಓಟಿನ ಅಸ್ತ್ರದಿಂದ ಮನುವಾದಿಗಳಿಗೆ ಬುದ್ದಿ ಕಲಿಸಬೇಕು. ಈ ಎಚ್ಚರ ಎಲ್ಲರಿಗೂ ಇರಬೇಕು ಎಂದು ಕರೆ ನೀಡಿದರು.
ಈ ಕಾರ್ಯಕ್ರಮ ಕುರಿತು ಪಾರ್ವತಮ್ಮ ಮಾತನಾಡಿದರು, ವೇದಿಕೆಯಲ್ಲಿ ಸಮಾಜ ಕಲ್ಯಾ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ಜಿ.ಪಿ.ದೇವರಾಜ್, ಪರಿಶಿಷ್ಟ ಪಂಗಡಗಳ ಜಿಲ್ಲಾಧಿಕಾರಿ ರಾಜ್ ಕುಮಾರ್ ವಿಶೇಷ ಭೂಸ್ವಾಧಿನ ಅಧಿಕಾರಿ ಶೇಖರ್, ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮದ ರಂಗೇಗೌಡ, ಡಿ.ಎಸ್.ಎಸ್‍ನ ಸಂಚಾಲಕ ಕೇಬಲ್ ರಘು,ಈ ನಿವೃತ್ತ ಪೌರ ಕಾರ್ಮಿಕರಾದ ಕೋರ್ಟ್ ಹನುಮಂತಯ್ಯ, ಹುಚ್ಚಯ್ಯ, ವೆಂಕಟರಾಮಯ್ಯ, ಸಿದ್ದಪ್ಪ ಮತ್ತು ಹನುಮಯ್ಯ ರವರನ್ನು ಅಭಿನಂದಿಸಿ ಗೌರವಿಸಲಾಯಿತ್ತು.
ಕಾರ್ಯಕ್ರಮದ ನಿರೂಪಣೆಯನ್ನು ಸುಬ್ರಮಣ್ಯ, ಸ್ವಾಗತವನ್ನು ಶೆಟ್ಟಾಳಯ್ಯ, ವಂದನಾಪರ್ಣೇಯನ್ನು ಅರುಣ್ ನೇರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪೌರ ಕಾರ್ಮಿಕ ಸಂಘದ ಸುರೇಂದ್ರ, ಕೆಂಪರಾಜು, ಕೊಳಗೇರಿ ಸಮಿತಿಯ ಶಂಕರ, ಚಕ್ರಪಾಣಿ, ಅಟೇಕರ್, ಕಣ್ಣನ್, ಗಂಗಮ್ಮ ಮುಂತಾದವರು ಹಾಜರಿದ್ದರು.