ಬೆಂಗಳೂರು
ರಾಜಧಾನಿ ಬೆಂಗಳೂರಿನಲ್ಲಿ ಕಳೆದ ರಾತ್ರಿ ಗುಡುಗು, ಸಿಡಿಲು ಸಹಿತ ಬಂದ ಭಾರೀ ಮಳೆಗೆ ವಿವಿದೆಡೆ 30ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿದ್ದು ಅದೃಷ್ಟವಶಾತ್ ಯಾರಿಗೂ ಯಾವುದೇ ಪ್ರಾಣಪಾಯಗಳು ಸಂಭವಿಸಿಲ್ಲ.
ನಗರದ ಕೆ.ಆರ್. ಮಾರ್ಕೆಟ್, ವಿಜಯನಗರ, ಆರ್.ಆರ್. ನಗರ, ಯಶವಂತಪುರ, ಮಲ್ಲೇಶ್ವರಂ, ಎಂಜಿ ರೋಡ್, ಹೆಬ್ಬಾಳದಲ್ಲಿ ಮಳೆಯಾಗುತ್ತಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಸದಾಶಿವನಗರದಲ್ಲಿ ಮರದ ಕೊಂಬೆಗಳು ಮುರಿದು ಬಿದ್ದು, ಕಾರ್ ಜಖಂ ಆಗಿದೆ. ಸಂಚಾರ ಅಸ್ತವ್ಯಸ್ತಗೊಂಡಿದ್ದು, ನೂರಾರು ವಾಹನಗಳು ರಸ್ತೆಯಲ್ಲಿ ನಿಲ್ಲುವಂತಾಗಿತ್ತು.ವಿಜಯನಗರ ಅತಿ ಹೆಚ್ಚು ಮರಗಳು ನೆಲಕ್ಕುರುಳಿದ್ದು ಕಾರು, ಸ್ಕೂಟರ್ ಮತ್ತಿತರ ವಾಹನಗಳು ಸಂಪೂರ್ಣವಾಗಿ ಜಂಖಗೊಂಡಿವೆ. ವಿಜಯನಗರ ಕ್ಲಬ್ ರಸ್ತೆಯಲ್ಲಿ
ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟರ್ ಗಳ ಮೇಲೆ ಭಾರೀ ಮರವೊಂದು ನೆಲಕ್ಕುರುಳಿ 2 ವಾಹನಗಳು ಸಂಪೂರ್ಣ ಜಗ್ಗಿ ಹೋಗಿವೆ. ಇನ್ನೊಂದೆಡೆ ಪಾರ್ಕ್ ರಸ್ತೆಯಲ್ಲಿ ಮರವೊಂದು ಕಾರುಗಳ ಮೇಲೆ ಬಿದ್ದಿವೆ.
ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಆರಂಭವಾಗಿದ್ದು, ಬೆಂಗಳೂರಿನಲ್ಲಿ ಜೋರು ಗಾಳಿ, ಗುಡುಗು ಸಹಿತ ಮಳೆಯಾಗುತ್ತಿದೆ. ಮಧ್ಯೆ ರಾತ್ರಿವರೆಗೂ ವರುಣನ ಆರ್ಭಟ ಮುಂದುವರಿಯಲಿದೆ. ನಾಳೆಯೂ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿಕ ವಿಕೋಪ ಇಲಾಖೆ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.
ಸದಾಶಿವನಗರದಲ್ಲಿ ಗಾಳಿ ಮಳೆಗೆ ಮರದ ಬಿದ್ದ ರೆಂಬೆ ಕೊಂಬೆಗಳು ಧರೆಗೆ ಉರುಳಿವೆ. ಸದಾಶಿವನಗರ ಸಿಗ್ನಲ್ ಬಳಿ ಮರ ಬಿದ್ದು, ಆರ್ಜೆ ಶೃತಿ ಕಾರು ಜಖಂಗೊಂಡಿದೆ. ಅಷ್ಟೇ ಅಲ್ಲದೆ ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದು, ಆಟೋ ಹಾಗೂ ಕಾರು ಜಖಂ ಆಗಿವೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ.ಬೆಂಗಳೂರಿಗೆ ಹೊಂದಿಕೊಂಡಿರುವ ಆನೇಕಲ್ ನಗರದಲ್ಲೂ ವರ್ಷಧಾರೆಯಾಗಿದೆ. ಆನೇಕಲ್ ಸುತ್ತಮುತ್ತಲಿನ ಕೆಲವು ಕಡೆಗಳಲ್ಲಿ ಆಲಿಕಲ್ಲು ಸಹಿತ ಭರ್ಜರಿ ಮಳೆಯಾಗುತ್ತಿದೆ. ರಸ್ತೆಯಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡುವಂತಾಗಿದೆ.