ಬೆಂಗಳೂರು
ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಅಕ್ಕನನ್ನು ನಿಂದಿಸಿದ ಭಾವನ ಕೈ ಬೆರಳುಗಳನ್ನು ಕತ್ತರಿಸಿ ಹಲ್ಲೆ ನಡೆಸಿದ ಬಾಮೈದನನ್ನು ದೇವರಜೀವನ (ಡಿಜೆ) ಹಳ್ಳಿಯ ಪೊಲೀಸರು ಬಂಧಿಸಿದ್ದಾರೆ.
ಹಲ್ಲೆಯಿಂದ ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಿಜೆಹಳ್ಳಿಯ ಶಫೀ ಪ್ರಾಣಾಪಾಯದಿಂದ ಪಾರಾಗಿದ್ದಾನೆ, ಕೃತ್ಯ ವೆಸಗಿದ ಬಾಮೈದ ಆಮ್ಜದ್‍ನನ್ನು ಬಂಧಿಸಿ ಕೃತ್ಯದಲ್ಲಿ ಪಾಲ್ಗೊಂಡ ಸಂಬಂಧಿಕರ ವಿಚಾರಣೆ ನಡೆಸಲಾಗಿದೆ.
ಮರಗೆಲಸ ಮಾಡುತ್ತಿದ್ದ ಶಫೀಯು ಆಮ್ಜದ್‍ನ ಅಕ್ಕ ನೀಲೂಫರ್ ಎಂಬಾಕೆಯನ್ನು ವಿವಾಹವಾಗಿ ಡಿಜೆಹಳ್ಳಿಯಲ್ಲಿ ಮನೆ ಮಾಡಿಕೊಂಡು ವಾಸಿಸುತ್ತಿದ್ದನು, ಕಳೆದೊಂದು ವಾರದಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಶಫೀ ಕೆಲಸಕ್ಕೆ ತೆರಳದೇ ಮನೆಯಲ್ಲಿದ್ದನು. ಈ ವೇಳೆ ಆರೋಗ್ಯ ವಿಚಾರಿಸದೇ ಸರಿಯಾಗಿ ನೋಡಿಕೊಂಡಿಲ್ಲ ಎಂದು ಪತ್ನಿ ನೀಲೂಫರ್ ಜೊತೆ ಶಫೀ ಜಗಳ ತೆಗೆದಿದ್ದಾನೆ.
ಜಗಳದ ವಿಚಾರ ತಿಳಿದ ಅಕ್ಕ ನೀಲೂಫರ್ ಮನೆಗೆ ಕಳೆದ 28ರ ಸಂಜೆ ಬಂದ ತಮ್ಮ ಆಮ್ಜದ್ ಭಾವ ಶಫೀ ಜೊತೆ ಅಕ್ಕನ ಮೆಲೆ ಜಗಳ ಮಾಡಿದ್ದನ್ನು ಪ್ರಶ್ನಿಸಿ ಜಗಳ ಮಾಡಿದ್ದಾನೆ,ಜಗಳ ವಿಕೋಪಕ್ಕೆ ತಿರುಗಿದಾಗ ಅಮ್ಜದ್ ಆಕ್ರೋಶಗೊಂಡು ಶಫೀ ಎಂಬವರ ಬಲಗೈ ಬೆರಳುಗಳನ್ನ ಕತ್ತರಿಸಿ ಹಲ್ಲೆ ಮಾಡಿದ್ದಾನೆ.
ಆಮ್ಜದ್ ಜೊತೆ ಬಂದಿದ್ದ ಮಾವಂದಿರು ಕೊಡ ಹಲ್ಲೆ ನಡೆಸಿದ್ದು ಅವರ ಮೇಲೆ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ ಅಮ್ಜದ್, ಮಜರ್, ನೀಲೂಫರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಡಿಜೆಹಳ್ಳಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.