ಬೆಂಗಳೂರು
ಹೃದಯಾಂತರದಲ್ಲಿ ಅಡಗಿರುವ ಭಾವನೆಗಳನ್ನು ಪುಸ್ತಕ ರೂಪದಲ್ಲಿ ತರಬೇಕು ಜನರ ಕಷ್ಟ, ಭಾವನೆಗಳ ತುಮುಲಗಳು, ಜೀವನದ ಜಂಜಾಟಗಳು ಕೃತಿಗಳಲ್ಲಿ ಬಂದಾಗ ಅದು ಸಮಾಜ ಪರಿವರ್ತನೆಗೆ ನಾಂದಿಯಾಗಲಿದೆ ಎಂದು ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಹಾಗೂ ಸಾಹಿತಿ ಡಾ.ಸುಧಾಮೂರ್ತಿ ಅವರು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್‍ನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಆಯೋಜಿಸಿದ್ದ 2019ರ ಅನುಪಮಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ಅಂತಃಕರಣದ ಭಾವನೆಗಳು ಕೃತಿ ರೂಪದಲ್ಲಿ ಬಂದರೆ ಅದು ಜನ ಮಾನಸದಲ್ಲಿ ಸದಾ ಕಾಲ ಅಚ್ಚಳಿಯದೇ ಉಳಿಯಲಿದೆ ಎಂದರು.
ಇಲ್ಲಿಯವರೆಗೆ ಸುಮಾರು 30ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡದಲ್ಲಿ ಬರೆದಿದ್ದು ಅವುಗಳು ಹಿಂದಿ, ಇಂಗ್ಲಿಷ್, ನೇಪಾಳಿ, ಪಾರ್ಸಿ, ಸೇರಿದಂತೆ ಇನ್ನಿತರ ಭಾಷೆಗಳಿಗೆ ಭಾಷಾಂತರಗೊಂಡಿದ್ದು, ಸುಮಾರು 26 ಲಕ್ಷ ಪುಸ್ತಕಗಳು ಭಾರತದಾದ್ಯಂತ ಮಾರಾಟ ವಾಗಿವೆ.
ಇದಕ್ಕೆ ನನ್ನಲಿರುವ ಕನ್ನಡ ಪ್ರೇಮವೇ ಕಾರಣ ಎಂದು ಹೇಳಿದರು.ಡಾ.ಅನುಪಮಾ ಅವರ ಕಾದಂಬರಿಗಳು ಹೃದಯಕ್ಕೆ ಹತ್ತಿರವಾದವು. ಅವರ ಕೃತಿಗಳನ್ನು ಓದಿ, ಬೆಳೆದ ನಾನು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು. ನನ್ನ ಪುಸ್ತಕಗಳು ಮಾರಾಟಕ್ಕೆ ಅನುಕೂಲವಾಗುವಂತಹ ಪುಸ್ತಕಗಳಲ್ಲ, ಜನರ ಭಾವನೆಗಳಿಗೆ ಹತ್ತಿರವಾದ ಪುಸ್ತಕಗಳನ್ನು ಬರೆದಿದ್ದೇನೆ.
ಕನ್ನಡದಲ್ಲಿ ಹಲವಾರು ಪ್ರಸಿದ್ಧ ಲೇಖಕಿಯರು ಬರೆದ ಪುಸ್ತಕಗಳನ್ನು ಪ್ರಕಟ ಮಾಡುವ ಜನರಿಲ್ಲದೇ ಕಪಾಟಿನಲ್ಲಿಯೇ ಇಡುವಂತಹ ದುಸ್ಥಿತಿ ಓದಗಿ ಬಂದಿರುವುದು ದುರ್ದೈವ.
ಇಂಗ್ಲಿಷ್ ಕೃತಿಗಳನ್ನು ರಚಿಸಿದರೇ ಅವು ಬೇಗ ಬೇರೆ ಬೇರೆ ಭಾಷೆಗಳಿಗೆ ತರ್ಜುಮೆ ಆಗಿ ಪ್ರಕಟಗೊಳ್ಳುತ್ತವೆ. ಹಾಗಾಗಿ ಕನ್ನಡ ಭಾಷೆಯ, ಸಾಹಿತ್ಯ ಉಳಿಯಬೇಕಾದರೇ ಪುಸ್ತಕಗಳನ್ನು ಪ್ರಕಟಗೊಳಿಸುವ ಸಹೃದಯವಂತರು ಮುಂದೆ ಬರಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕ.ಸಾ.ಪ. ಅಧ್ಯಕ್ಷ ಡಾ.ಮನು ಬಳಿಗಾರ್, ಮಾತನಾಡಿ ಡಾ.ಸುಧಾ ಮೂರ್ತಿ ಅವರು ಕರ್ನಾಟಕದ ಹೆಮ್ಮೆಯ ಪುತ್ರಿ, ಇನ್ಫೋಸಿಸ್ ಫೌಂಡೇಷನ್ ಮೂಲಕ ಸಮಾಜ ಸೇವೆಯಲ್ಲಿ ತೊಡಗಿರುವ ಅವರು ವಿಧವೆಯರು, ದೇವದಾಸಿಯರು, ಯೋಧರು, ಬಡವರ ಕಲ್ಯಾಣಕ್ಕಾಗಿ ಕೋಟ್ಯಂತರ ರೂಪಾಯಿಗಳನ್ನು ನೀಡಿ ಮಾತೃ ಹೃದಯವಂತರಾಗಿ ಜನಮಾನಸದಲ್ಲಿ ಉಳಿದಿದ್ದಾರೆ. ಅವರ ಸೃಜನಶೀಲತೆ, ಸರಳ ಜೀವನ, ಆದರ್ಶ, ಯುವ ಪೀಳಿಗೆಗೆ ಮಾದರಿಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಡಾ.ಟಿ.ಸಿ.ಪೂರ್ಣಿಮಾ, ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲಾ ಸಂಪನ್ನ ಕುಮಾರ್, ಹಾಜರಿದ್ದರ