ಚಿತ್ರದುರ್ಗ:
ನಗರದ ಜೆ.ಸಿ.ಆರ್.ಬಡಾವಣೆಯಲ್ಲಿರುವ ಗಣಪತಿ ಮತ್ತು ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಭವ್ಯ ಗರುಡಗಂಬದ ಪ್ರತಿಷ್ಟಾಪನೆ ನೆರವೇರಿತು.ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಗರುಡಗಂಬದ ಪ್ರತಿಷ್ಟಾಪನೆ ನೆರವೇರಿಸಿದರು ಪವಮಾನ ಹೋಮ ಹಾಗೂ ವಿಶೇಷ ಪೂಜೆಗಳು ಈ ಸಂದರ್ಭದಲ್ಲಿ ನೆರವೇರಿತು.
ಕಬೀರಾನಂದಾಶ್ರಮದ ಶಿವಲಿಂಗಾನಂದಸ್ವಾಮಿ, ಚಳ್ಳಕೆರೆ ಶಾರದಾಶ್ರಮದ ಮಾತಾಜಿ ತ್ಯಾಗಮಯಿ, ಹೋಟೆಲ್ ಉದ್ಯಮಿ ಆನಂದರಾವ್ ಉಳ್ಳೂರು, ಗಣಪತಿ ಮತ್ತು ಆಂಜನೇಯಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷ ಜಿ.ಆರ್.ಕೃಷ್ಣಮೂರ್ತಿ, ಕೆ.ವೆಂಕಣ್ಣಾಚಾರ್, ರಮಾದೇವಿ, ಮುರುಗೇಶ್‍ಗೌಡ್ರು, ನವೀನ್ ಚಾಲುಕ್ಯ ಸೇರಿದಂತೆ ಅಪಾರ ಭಕ್ತರು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
