ದಾವಣಗೆರೆ:
ಸ್ವಾಭಿಮಾನಕ್ಕಾಗಿ ಪೇಶ್ವೆಯ 2ನೇ ಬಾಜಿರಾಯನ ವಿರುದ್ಧ ಮಹಾರಾಷ್ಟ್ರದ ಕೋರೆಗಾಂವ್‍ನ ಭೀಮಾ ನದಿಯ ತೀರದಲ್ಲಿ, ಬ್ರಿಟೀಷ್ ಸೇನೆಯಲ್ಲಿದ್ದ ಮಹರ್ ಸೈನಿಕರು ಯುದ್ಧ ನಡೆಸಿ ವಿಜಯ ಸಾಧಿಸಿದ ದಿನವನ್ನು ವಿವಿಧ ಸಂಘಟನೆಗಳು ಪ್ರತ್ಯೇಕವಾಗಿ ನಗರದಲ್ಲಿ ಮಂಗಳವಾರ ಭೀಮಾಕೋರೆಗಾಂವ್ ಯೋಧರ ವಿಜಯೋತ್ಸವ ಆಚರಿಸಿದವು.
ಬಿ.ಎಸ್.ಪಿ:
ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಬಹುಜನ ಸಮಾಜ ಪಾರ್ಟಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಕೋರೆಗಾಂವ್ ಯುದ್ಧದಲ್ಲಿ ಭಾಗವಹಿಸಿದ್ದ ಸೈನಿಕರನ್ನು ನೆನೆದು, ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಎಸ್‍ಪಿಯ ಜಿಲ್ಲಾಧ್ಯಕ್ಷ ಹೆಚ್.ಮಲ್ಲೇಶ, ಮಹಾರಾಷ್ಟ್ರದ ಪೇಶ್ವೆಗಳ ಆಡಳಿತಾವಧಿಯಲ್ಲಿ ಮನುಧರ್ಮಶಾಸ್ತ್ರ ಆಧಾರಿತ ಚಾತುರ್ವರ್ಣ ವ್ಯವಸ್ಥೆಯನ್ನು ಪೋಷಿಸುತ್ತಿದ್ದ ರಾಜ 2ನೇ ಬಾಜಿರಾಯ ಅಸ್ಪøಷ್ಯರನ್ನು ಅಮಾನವೀಯವಾಗಿ ಹಾಗೂ ನಿಕೃಷ್ಠವಾಗಿ ನಡೆಸಿಕೊಳ್ಳುತ್ತಿದ್ದನು. ಆದ್ದರಿಂದ ಅಸ್ಪಷ್ಯರಿಗೂ ಗೌರವಯುತ ಬದುಕು ಕಟ್ಟಿಕೊಡಬೇಕೆಂಬ ಉದ್ದೇಶದಿಂದ ಬಾಜಿರಾಯನ ವಿರುದ್ಧ ಬ್ರಿಟೀಷರು ಸಾರಿದ ಯುದ್ಧವನ್ನು ಬ್ರಿಟೀಷ್ ಸೇನೆಯಲ್ಲಿದ್ದ ಬಾಂಬೆ ನೇಟಿವ್ ಇನ್‍ಫಂಟ್ರಿಯಾ 2ನೇ ಬೆಟಾಲಿಯನ್‍ನಲ್ಲಿದ್ದ ಮೊದಲ ರೆಜಿಮೆಂಟ್ ಸೇನೆಯಲ್ಲಿದ್ದ ಅಸ್ಪಷ್ಯ ಸಮುದಾಯಕ್ಕೆ ಸೇರಿದ್ದ ಸೈನಿಕರು ಬಾಜಿರಾಯನ ವಿರುದ್ಧ ವಿಜಯ ಸಾಧಿಸಿದ್ದರು ಎಂದು ಸ್ಮರಿಸಿದರು.
1818ರ ಜನವರಿ 1ರಂದು ಮಹಾರಾಷ್ಟ್ರದ ಭೀಮಾ ನದಿ ತೀರದ ಕೋರೆಗಾಂವ್‍ನಲ್ಲಿ ನಡೆದ ಯುದ್ಧದಲ್ಲಿ ಪೇಶ್ವೆಯ 30 ಸಾವಿರ ಸೈನಿಕರ ಜತೆ ಸೆಣೆಸಾಡಿದ 500 ಜನ ಮಹರ್, ಚಮ್ಮಾರ್, ಮಾಂಗ್ ಸೇರಿದಂತೆ ವಿವಿಧ ಸಮುದಾಯಗಳ ಅಸ್ಪಶ್ಯ ಸೈನಿಕರು ಪೇಶ್ವೆಗಳ ವಿರುದ್ಧ ಜಯಗಳಿಸಿದ ಕಾರಣಕ್ಕೆ ವಿಜಯೋತ್ಸವ ಹಾಗೂ ಈ ಯುದ್ಧದಲ್ಲಿ 21 ಜನ ಅಸ್ಪಷ್ಯ ಸೈನಿಕರು ಮಡಿದ ಕಾರಣಕ್ಕೆ ಹುತಾತ್ಮರ ಸ್ಮರಣೆಯನ್ನು ಪ್ರತಿವರ್ಷ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ವಿಜಯೋತ್ಸವದಲ್ಲಿ ಬಿಎಸ್ಪಿ ಜಿಲ್ಲಾಧ್ಯಕ್ಷ ಹೆಚ್.ಮಲ್ಲೇಶ್, ಮಂಜುನಾಥ್ ಪೆರಿಯಾರ್, ಪರಶುರಾಮ್ ಕೋಟೆಮಲ್ಲೂರು, ಮೋಹನದಾಸ್, ಹೆಚ್.ಪ್ರವೀಣ, ಮಂಜಪ್ಪ ಕೋಡಿಯಾಲ, ಹನುಮಂತಪ್ಪ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ