ಭೂಮಿ ಮತ್ತು ವಸತಿ ಹಕ್ಕು ಹೋರಾಟಗಾರರ ಸಮಿತಿಯ ಸಭೆ

ಮಧುಗಿರಿ:

         ಭೂಮಿ ಮತ್ತು ವಸತಿಗೆ ಸಂಭಂಧಿಸಿದಂತೆ ತಾಲ್ಲೂಕಿನ ವಿಷಯಗಳು ತುಂಬಾ ಜಟಿಲವಾಗಿವೆ ಆದಷ್ಟು ಬೇಗಾ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಂಡು ನಾಗರೀಕರಿಗೆ ಅನೂಕೂಲ ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

         ಪಟ್ಟಣದ ಉಪವಿಭಾಗಾಧಿಕಾರಿಗಳ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಭೂಮಿ ಮತ್ತು ವಸತಿ ಹಕ್ಕು ಹೋರಾಟಗಾರರ ಸಮಿತಿಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಈಗಾಗಲೇ ಈ ಸಮಸ್ಯೆಗಳು ನನ್ನ ಗಮನಕ್ಕೆ ಬಂದಿವೆ ಆಗದೆ ಬಾಕಿ ಇರುವ ಕೆಲಸ ಕಾರ್ಯಗಳನ್ನು ಪ್ರಮಾಣಿಕವಾಗಿ ಅಧಿಕಾರಿಗಳು ಕಾರ್ಯರೂಪಕ್ಕೆ ತರಬೇಕು.

         ಕೆಲ ಪ್ರಕರಣಗಳಲ್ಲಿ ದಾಖಲೆಗಳು ಸರಿಯಿದ್ದರೂ ಸಹ ಅಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸದ ಬಗ್ಗೆ ಬೇಸರ ವ್ಯಕ್ತ ಪಡಿಸಿ ಇನ್ನೂ ಆರು ತಿಂಗಳ ಬಳಗೆ ಕ್ರಮ ಕೈಗೊಳ್ಳುವಂತೆ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ರವರಿಗೆ ಸೂಚಿಸಿದರು.

        ಸರಕಾರದಿಂದ ಆದೇಶಗಳು ಜಾರಿಯಾಗಿದ್ದರು ಸಹ ತಾಲ್ಲೂಕಿನ ಸ್ಥಳೀಯ ಆಡಳಿತ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ನಾಗರೀಕರ ಹಾಗೂ ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ನಮ್ಮ ಸಮಸ್ಯೆಗಳನ್ನು ಬಗೆಹರಿಸಿ ಎಂದರೆ ಬಗೆ ಹರಿಸುತ್ತಿಲ್ಲ ಆದ್ದರಿಂದ ಇವರ ಈ ನಡೆತೆಯಿಂದಾಗಿ ಬೆಸತ್ತು ನಮ್ಮ ಸಂಘಟನೆಯ ವತಿಯಿಂದ ಎರಡು ದಿನಗಳ ಅಹೋ ರಾತ್ರಿ ಧರಣಿ ಹಮ್ಮಿಕೊಳ್ಳ ಬೇಕಾದ ವಾತವರಣ ಸೃಷ್ಟಿಯಾಗಿತ್ತು ಎಂದು ಭೂಮಿ ಮತ್ತು ವಸತಿ ಹೋರಾಟಗಾರರ ಸಮಿತಿಯ ಪಧಾಧಿಕಾರಿಗಳು ಜಿಲ್ಲಾಧಿಕಾರಿಗಳು ಮುಂದೆಯೇ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು.

        ಈ ಸಂಧರ್ಭದಲ್ಲಿ ಉಪವಿಭಾಗಾಧಿಕಾರಿ ವೀಣಾ, ತಹಶೀಲ್ದಾರ್ ನಂದೀಶ್, ಸಿಪಿಐ ದಯಾನಂದ ಸೇಗುಣಸಿ, ಭೂಮಿ ಮತ್ತು ವಸತಿ ಹಕ್ಕು ಹೋರಾಟಗಾರ ರಾಜ್ಯ ಸಮಿತಿ ಸದಸ್ಯ ಮರಿಯಪ್ಪ, ಜಿಲ್ಲಾ ಸಮಿತಿಯ ಹಂದ್ರಾಳು ನಾಗಭೂಷಣ್, ಅನಿಲ್ ಕುಮಾರ್ ದಾಳವಟ್ಟ, ಕೋರ ರಾಜು, ರೈತ ಸಂಘದ ಶಂಕರಪ್ಪ, ದಲಿತ ಸಂಘಟನೆಯ ದೊಡ್ಡೇರಿ ಕಣಿಮಯ್ಯ, ಮತ್ತಿತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link