ಶಾಸಕರಿಂದ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ…!!!

ತುರುವೇಕೆರೆ:

      ಸುಮಾರು ವರ್ಷಗಳಿಂದ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವ ಗೊಲ್ಲರಹಟ್ಟಿಗಳನ್ನು ಗುರುತಿಸಿ 70 ಲಕ್ಷ ವ್ಯಚ್ಚದಲ್ಲಿ ಅಭಿವೃದ್ದಿ ಮಾಡಲಾಗುವುದು ಎಂದು ಶಾಸಕ ಮಸಾಲಜಯರಾಮ್ ತಿಳಿಸಿದರು.

        ತಾಲೂಕಿನ ದೊಡ್ಡೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಗುರುವಾರ ಸುಮಾರು 15 ಲಕ್ಷ ವ್ಯಚ್ಚದ ಸಿ.ಸಿ ರಸ್ತೆ ಕಾಮಾಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಯಾದವ ಸಮುದಾಯ ಈ ಬಾರಿ ನನ್ನ ಮೇಲೆ ಹೆಚ್ಚಿನ ವಿಶ್ವಾಸವಿಟ್ಟು ನನಗೆ ಹೆಚ್ಚಿನ ಮತಗಳನ್ನು ನೀಡಿ ಶಾಸಕನ್ನಾಗಿ ಮಾಡಿದ್ದಿರಾ. ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಗೊಲ್ಲರಹಟ್ಟಿಗಳನ್ನು ಅಭಿವೃದ್ದಿ ಮಾಡುವ ಮೂಲಕ ಉಳಿಸಿಕೊಳ್ಳುವುದಾಗಿ ತಿಳಿಸಿದರು.

       ತಾಲೂಕಿನ ಸಂಪಿಗೆದೊಡ್ಡಹಟ್ಟಿ 15 ಲಕ್ಷ, ದೊಂಬರನಹಳ್ಳಿಗೊಲ್ಲರಹಟ್ಟಿ 10 ಲಕ್ಷ, ದೊಡೇನಹಳ್ಳಿಗೊಲ್ಲರಹಟ್ಟಿಗೆ 15 ಲಕ್ಷ, ದ್ವಾರನಹಳ್ಳಿಗೊಲ್ಲರಹಟ್ಟಿ 10 ಲಕ್ಷ, ಮುದ್ದನಹಳ್ಳಿಗೊಲ್ಲರಹಟ್ಟಿ 5 ಲಕ್ಷ, ನಡುವನಹಳ್ಳಿ ಗೊಲ್ಲರಹಟ್ಟಿ 5 ಲಕ್ಷ, ಅರೆಮಲ್ಲೇನಹಳ್ಳಿ ಗೊಲ್ಲರಹಟ್ಟಿಗೆ 5 ಲಕ್ಷ ಸಾದರಹಳ್ಳಿಗೊಲ್ಲರಹಟ್ಟಿಗೆ 5 ಲಕ್ಷ ಒಟ್ಟು ಸುಮಾರು 70 ಲಕ್ಷ ವ್ಯಚ್ಚದಲ್ಲಿ ಸಿ.ಸಿ.ರಸ್ತೆ, ಚರಂಡಿ ನಿರ್ಮಿಸಲಾಗುವುದು ಹಂತ ಹಂತವಾಗಿ ಇನ್ನು ಹೆಚ್ಚಿನ ಮೂಲ ಭೂತ ಸೌಕರ್ಯ ನೀಡಲಾಗುವುದು ಬರವಸೆ ನೀಡಿದರು.

      ಭೂಮಿ ಪೂಜೆಯಲ್ಲಿ ಎಪಿಎಂಸಿ ಮಾಜಿ ಅದ್ಯಕ್ಷ ಕೊಂಡಜ್ಜಿವಿಶ್ವನಾಥ್, ಮುಖಂಡರಾದ ಕಾಳಂಜಿಹಳ್ಳಿ ಸೋಮಶೇಖರ್, ತಿಮ್ಮೇಗೌಡ, ಯಾದವ ಯುವ ಮುಖಂಡ ಬಸವರಾಜು, ಗ್ರಾಮದ ಮುಖಂಡ ಬಸವರಾಜು ಸೇರಿದಂತೆ ಗ್ರಾಮಸ್ಥರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link