ಹೊಳಲ್ಕೆರೆ:
ಕರ್ನಾಟಕ ಕೊಳಗೇರಿ ಅಭಿವೃಧ್ದಿ ಮಂಡಳಿ ಮತ್ತು ಪಟ್ಟಣ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಮುಂಜೂರಾಗಿರುವ 327 ಮನೆಗಳ ನಿರ್ಮಾಣದ ಭೂಮಿ ಪೂಜೆಯನ್ನು ಶಾಸಕ ಎಂ.ಚಂದ್ರಪ್ಪ ನೆರವೇರಿಸಿದರು.
ಯಾರಿಗೆ ವಾಸ ಮಾಡಲು ಸೂರಿಲ್ಲ ಅಂತಹವರನ್ನು ಗುರುತಿಸಿ ಅವರಿಗೆ ಮನೆಗಳನ್ನು ನಿರ್ಮಾಣ ಮಾಡುವ ಮಹಾನ್ ಕಾರ್ಯವನ್ನು ಸರ್ಕಾರ ಕೈಗೊಂಡಿದೆ. 2020ರ ವೇಳೆಗೆ ದೇಶದ 130 ಕೋಟಿ ಜನರು ಸ್ವಂತ ಮನೆಯನ್ನು ಹೊಂದಿರಬೇಕೆಂಬ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ನಿರ್ಧರಿಸಿದ್ದಾರೆ. ಈ ದೃಷ್ಟಿಯಿಚಿದ ಹೊಳಲ್ಕೆರೆ ಪಟ್ಟಣದಲ್ಲಿ ಈಗ 3 ಕೊಳಗೇರಿ ಪ್ರದೇಶವನ್ನು ಗುರುತಿಸಲಾಗಿದ್ದು ಈ ಫ;ಆನುಭವಿಗಳಿಗೆ ಸರ್ಕಾರ ತಲಾ ಒಂದು ಮನೆಗೆ 5 ಲಕ್ಷ ರೂಗಳನ್ನು ನೀಡಲಿದೆ. ಈ ಮನೆಯನ್ನು ಸಂಬಂಧಪಟ್ಟ ಅಧಿಕಾರಿಗಳು ನಿರ್ಮಾಣ ಮಾಡಿಕೊಡುವರು.
ಆಯ್ಕೆಯಾಗಿರುವ ಫಲಾನುಭವಿಗಳು 50 ಸಾವಿರ ರೂ. ಬ್ಯಾಂಕ್ ಡಿಡಿಯನ್ನು ಸಂಬಂಧ ಪಟ್ಟ ಅಧಿಕಾರಿಗಳಿಗೆ ನೀಡಿದ ತಕ್ಷಣ ಮೂರು ಮುಕ್ಕಾಲು ಚದುರ ಆರ್.ಸಿಸಿ ಮನೆಯನ್ನು ನಿರ್ಮಿಸಿಕೊಡುತ್ತಾರೆ. ಫಲಾನುಭವಿಗಳು ಈ ಹಣವನ್ನು ತಕ್ಷಣ ನೀಡಬೇಕೆಂದು ಶಾಸಕರು ತಿಳಿಸಿ ಎಸ್ಸಿ, ಎಸ್ಟಿ ಮತ್ತು ಇತರೆ ವರ್ಗಕ್ಕೆ ಕೇಂದ್ರ ಸರ್ಕಾರ 1.5 ಲಕ್ಷ ರೂ.ಗಳು ರಾಜ್ಯ ಸರ್ಕಾರ ಎಸಿ,ಎಸ್ಟಿ 2 ಲಕ್ಷ ರೂ. ಇತರೆ ವರ್ಗಗಳಿಗೆ 1.20 ಲಕ್ಷ ಹಣವನ್ನು ನೀಡುವುದು.
ಉಳಿದ ಹಣವನ್ನು ಬ್ಯಾಂಕ್ ಗಳಿಂದ ಮತ್ತು ಕಾರ್ಮಿಕ ಇಲಾಖೆಯಿಂದ ಪಡೆಯಬಹುದು ಒಟ್ಟು 327 ಮನೆಗಳಿಗೆ ಸರ್ಕಾರ 14.56 ಕೋಟಿ ಹಣವನ್ನು ಮುಂಜೂರು ಮಾಡಿದೆ ಎಂದು ಶಾಸಕರು ತಿಳಿಸಿದರು.ಹೊಳಲ್ಕೆರೆ ಪಟ್ಟಣವನ್ನು ಮಾದರಿ ಪಟ್ಟಣವನ್ನಾಗಿ ಮಾಡಲು ಪ್ರಯತ್ನಿಸುತ್ತೇನೆ. ಇದು ನನ್ನ ಜವಾಬ್ದಾರಿ, ಕುಡಿಯುವ ನೀರಿಗಾಗಿ 5 ಲಕ್ಷ ಲೀ. ಸಾಮಥ್ರ್ಯದ ಟ್ಯಾಂಕ್ ಕರೆಕಲ್ಲು ದಿಬ್ಬದಲ್ಲಿ ನಿರ್ಮಿಸಲಾಗುವುದು. ಈ ಟ್ಯಾಂಕಿನಿಂದ ಇಡೀ ಟೌನ್‍ಗೆ ಸರಬರಾಜು ಮಾಡಲು ಸಾಧ್ಯವಾಗುವುದು ಎಂದು ತಿಳಿಸಿದ ಶಾಸಕರು ಈ ಕ್ಷೇತ್ರದ ಮತದಾರರು 40 ಸಾವಿರಗಿಂತ ಹೆಚ್ಚು ಅಧಿಕ ಮತಗಳಿಂದ ನನ್ನನ್ನು ಆಯ್ಕೆ ಮಾಡಿದ್ದಾರೆ ಅವರ ಋಣವನ್ನು ಖಂಡಿತ ತೀರಿಸುತ್ತೇನೆ ಎಂದು ಶಾಸಕರು ತಮ್ಮ ಇಂಗಿತವನ್ನು ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಇನ್ನು ಕೆಲವು ಕೊಳಗೇರಿಗಳನ್ನು ಪರಿಶೀಲಿಸಿ ಯಾವುದೇ ವರ್ಗಕ್ಕೆ ಸೇರಿರಲಿ ಅಂತಹ ಕುಟುಂಬಗಳನ್ನು ಪರಿಶೀಲನೆ ಮಾಡಿ ಮುಂದಿನ ಅವಧಿಗೆ ಮುಂಜೂರಾಗಿರುವ 200 ಮನೆಗಳನ್ನು ಕಟ್ಟಿಸಿಕೊಡಲಾಗುವುದು. ಜೊತೆಗೆ ಹನುಮಂತ ದೇವರ ಕಣಿವೆಯಲ್ಲಿ ಈಗಾಗಲೆ 25 ಎಕರೆ ಜಮೀನನ್ನು ಪಡೆದಿದ್ದು ಅಲ್ಲಿ ಯಾರಿಗೆ ಮನೆ ಇಲ್ಲ ಅಂತಹವರಿಗೆ ಮನೆಗಳನ್ನು ನಿರ್ಮಿಸಿಕೊಡುವ ಜವಾಬ್ದಾರಿ ತಮ್ಮದಾಗಿದೆ ಎಂದು ತಿಳಿಸಿ ಆ ಸ್ಥಳದಲ್ಲಿ ಕುಡಿಯುವ ನೀರು, ಶಾಲೆ ಆಸ್ಪತ್ರೆ ಮುಂತಾದ ಮೂಲ ಸೌಕರ್ಯಗಳನ್ನು ಸಹ ಒದಗಿಸಿಲಾಗುವುದು. ಸರ್ಕಾರ ನೀಡುವ ಸವಲತ್ತುಗಳನ್ನು ಸಕಾಲದಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕೆಂದು ಶಾಸಕರು ಸಲಹೆ ನೀಡಿದರು.
ಅಧ್ಯಕ್ಷತೆಯನ್ನು ಪ.ಪಂ ಅಧ್ಯಕ್ಷೆ ಸವಿತಾ ಬಸವರಾಜ ವಹಿಸಿ ಮಾತನಾಡಿ ಯಾರಿಗೆ ಮನೆಗಳನ್ನು ನೀಡಲಾಗಿದೆ ಅಂತಹವರಿಗೆ ಪುನ: ಮುಂಜೂರು ಮಾಡಲಾಗಿದೆ ಎಂಬ ಆರೋಪವಿದೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ನ್ಯಾಯವಾಗಿ ಯಾರಿಗೆ ಮನೆ ಲಭ್ಯವಾಗಿಲ್ಲ ಅಂತಹ ಫಲಾನುಭವಿಗಳನ್ನು ಗುರುತಿಸಬೇಕೆಂದು ಸೂಚಿಸಿದರು.
ಮುಖ್ಯ ಅತಿಥಿಗಳಾಗಿ ಪ.ಪಂ. ಸದಸ್ಯರಾದ ಪಿ.ಹೆಚ್.ಮುರುಗೇಶ್ ಮತ್ತು ಕೆ.ಸಿ.ರಮೇಶ್ ಮಾತನಾಡಿದರು. ಪ.ಪಂ. ಸದಸ್ಯರಾದ ಅಲ್ಲಾ ಬಕಷ್, ಸಯ್ಯದ್ ಸಜೀಲ್, ಆರ್.ರಾಜಪ್ಪ, ಸಯ್ಯಿದ್ ಮತ್ತು ಪ.ಪಂ. ಮುಖ್ಯಾಧಿಕಾರಿ ಡಿ.ಉಮೇಶ್, ಸಹಾಯಕ ಇಂಜಿನಿಯರ್ ಎಸ್.ಡಿ.ಪಾಟೀಲ್ ಮತ್ತು ವಿರೇಶ್ ಮುಂತಾದವರು ಉಪಸ್ಥಿತರಿದ್ದರು.