ಗುಬ್ಬಿ
ರಾಜ್ಯ ಸರ್ಕಾರ ಹಲವು ಅಭಿವೃಧ್ದಿ ಯೋಜನೆಗಳ ಜೊತೆಗೆ ನೀರಾವರಿ ಯೋಜನೆಗಳಿಗೆ ವಿಶೇಷ ಆಧ್ಯತೆ ನೀಡಲಾಗಿದ್ದು ರೈತರ ಸಮಗ್ರ ಅಭಿವೃಧ್ದಿಗೆ ಮಹತ್ವದ ಯೋಜನೆಗಳನ್ನು ರೂಪಿಸುವಲ್ಲಿ ಯಶಸ್ವಿಯಾಗಿದೆ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು.
ತಾಲೂಕಿನ ಕಡಬ ಹೋಬಳಿಯ ಕಲ್ಲೂರು ಗ್ರಾಮದಲ್ಲಿ ವಾಸುದೇವರ ಅಣೆಕಟ್ಟೆಯಿಂದ ಕಲ್ಲೂರು ಕೆರೆಗೆ ನೀರು ಹರಿಸುವ ಮಹತ್ವದ ಯೋಜನೆಗೆ 10 ಕೋಟಿ ರೂ ಕಾವiಗಾರಿಯ ಭೂಮಿ ಪೂಜೆ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ಅಣೆಕಟ್ಟೆಯಿಂದ ಕಲ್ಲೂರು ಕೆರೆಗೆ ನೀರು ಹರಿಸಿದ್ದಲ್ಲಿ ಸುಮಾರು 40 ಗ್ರಾಮಗಳ ಸಾವಿರಾರು ರೈತರಿಗೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಹೇಮಾವತಿ ನೀರು ಜಿಲ್ಲೆಗೆ ಹರಿಯುವ ವೇಳೆಗೆ ಅಣಕಟ್ಟೆಯ ಕಾಮಗಾರಿ ಪೂರ್ಣಗೊಳಿಸುವತ್ತ ಮತ್ತು ಕಾಮಗಾರಿ ಕಳಪೆಯಾಗದಂತೆ ಉತ್ತಮ ಗುಣಮಟ್ಟದ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಮುಗಿಸುವತ್ತ ಸಂಬಂಧಿಸಿದ ಗುತ್ತಿಗೆದಾರರು ಮತ್ತು ಇಂಜಿನಿಯರ್‍ಗಳು ಹೆಚ್ಚಿನ ಗಮನಹರಿಸುವಂತೆ ತಿಳಿಸಿದ ಅವರು ಯಾವುದೇ ಸರಕಾರಗಳು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ಬಹುತೇಕ ಉತ್ತರ ಭಾರತಕ್ಕೆ ಸೀಮಿತವಾಗಿರುತ್ತದೆ ಇಂತಹ ಸಮಯದಲ್ಲಿ ನಮ್ಮ ಸಂಸದರು ಚಟುವಟಿಕೆಯಿಂದ ಜಿಲ್ಲೆಯ ಸಮಗ್ರ ಅಭಿವೃಧ್ದಿಗೆ ಪೂರಕವಾದ ಅಭಿವೃಧ್ದಿ ಯೋಜನೆಗಳನ್ನು ಜಾರಿಗೊಳಿಸುವತ್ತ ಮುಂದಾಗಬೇಕೆಂದು ತಿಳಿಸಿದರು.
ಸಂಸದ ಎಸ್.ಪಿ.ಮುದ್ದಹನುಮೆಗೌಡ ಮಾತನಾಡಿ ಕಲ್ಲೂರು ಕೆರೆ ಈ ಭಾಗದ ಜನರಿಗೆ ಜೀವನಾಡಿಯಾಗಿದೆ ಮುಂದಿನ ದಿನದಲ್ಲಿ ನೀರು ಸೂಕ್ಷ್ಮ ವಿಚಾರವಾಗುವ ಸಂಭವ ಕಾಣುತ್ತಿದೆ. ಸಮರ್ಪಕವಾಗಿ ಮಳೆಬಾರದೆ ಅಂತರ್ಜಲ ಕಡಿಮೆಯಾಗುತ್ತಿದೆ. ಹಾಗಾಗಿ ಕರೆಗಳನ್ನು ತುಂಬಿಸಿದರೆ ಮಾತ್ರ ಅಂತರ್ಜಲ ಹೆಚ್ಚಿಸಬಹುದಾಗಿದೆ ಎಂದು ಚಿಂತನೆ ನಡೆಸಿರುವ ಸರ್ಕಾರ ಕೆರೆಗಳಿಗೆ ಹೇಮಾವತಿ ನೀರನ್ನು ಹರಿಸುವಂತಹ ಮಹತ್ವದ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದು ತಿಳಿಸಿದರು.
ಶಾಸಕ ಮಸಾಲೆ ಜಂiÀiರಾಂ ಮಾತನಾಡಿ ಜಿಲ್ಲೆಗೆ ನಿಯಮಾನುಸಾರ ಹೇಮಾವತಿ ನೀರು ಬಾರದಿರುವುದರಿಂದ ಜಿಲ್ಲೆಯ ಕೆರೆಗಳಿಗೆ ನೀರನ್ನು ಹರಿಸಿಕೊಳ್ಳಲು ಸಾದ್ಯವಾಗುತ್ತಿಲ್ಲ ಮುಂದಿನ ದಿನಗಳಲ್ಲಿ ಜಿಲ್ಲೆಗೆ ನಿಯಮಾನುಸಾರ ಬಿಡಬೇಕಾದ ನೀರನ್ನು ಹರಿಸುವ ಮೂಲಕ ಜಿಲ್ಲೆಯತ ಎಲ್ಲಾ ಕೆರೆಗಳಿಗೂ ನೀರು ತುಂಬಿಸುವ ಮೂಲಕ ಅಂತರ್ಜಲ ಹೆಚ್ಚಳಕ್ಕೆ ಸರ್ಕಾರ ಮುಂದಾಗಬೇಕಿದೆ ಎಂದ ಅವರು ಸಮರ್ಪಕವಾಗಿ ಮಳೆಯಾಗದೆ ಅಂತರ್ಜಲ ಕುಸಿತಗೊಂಡಿದ್ದು ರೈತರು ತೀವೃತರ ಸಂಕಷ್ಟದಲ್ಲಿರುವಾಗ ನಮ್ಮ ನಾಲೆಗಳಲ್ಲಿ ಸರಿಯಾಗಿ ನೀರು ಹರಿಯುತ್ತಿಲ್ಲ ಇದರಿಂದ ನಮಗೆ ಬರಬೇಕಾದ ನೀರು ಹರಿಯುತ್ತಿಲ್ಲ ಜಿಲ್ಲೆಯಿಂದ ಬೇರೆ ಭಾಗಗಳಿಗೆ ನೀರು ಹರಿದರೆ ಸಾಕಷ್ಟು ಸಮಸ್ಯೆಯಾಗುತ್ತದೆ ಹಾಗಾಗಿ ನಮ್ಮ ಪ್ರಾಣ ಹೋದರು ಸಹ ಲಿಂಕೇಂಜ್ ಚಾನಲ್ ಮಾಡಲು ಬೀಡುವುದಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಗಿರೀಶ್, ಉಪಾಧ್ಯಕ್ಷೆ ನಾಗರತ್ನಮ್ಮ, ತಾಲೂಕು ಪಂಚಾಯತಿ ಸದಸ್ಯ ಸಿದ್ದರಾಮಣ್ಣ, ಗುತ್ತಿಗೆದಾರ ಚನ್ನಿಂಗಪ್ಪ, ಮುಖಂಡ ರಾಜೆಗೌಡ, ಗ್ರಾಪಂ ಸದಸ್ಯರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ