ಹರಪನಹಳ್ಳಿ:
ತಾಲ್ಲೂಕಿನಲ್ಲಿ ಪಕ್ಷಾತೀತವಾಗಿ ರಾಜಕೀಯ ಮುಖಂಡರು, ಸಂಘ-ಸಂಸ್ಥೆಗಳು, ಮಠಾಧೀಶ್ವರರು, ಸಾರ್ವಜನಿಕರು ಹೋರಾಟದ ನಡೆಸಿದರ ಫಲವಾಗಿ ಹರಪನಹಳ್ಳಿ ತಾಲ್ಲೂಕು ಸೇರ್ಪಡೆಗೊಂಡಿದೆ ಎಂದು ಶಾಸಕ ಜಿ.ಕರುಣಾಕರೆಡ್ಡಿ ಹೇಳಿದರು.
ಪಟ್ಟಣದ ಹಿರೇಕೆರೆ ವೃತ್ತ ಹಾಗೂ ಕೊಟ್ಟೂರು ವೃತ್ತಗಳಲ್ಲಿ ತಲಾ 25 ಲಕ್ಷದಲ್ಲಿ ವೃತ್ತಕ್ಕೆ ಗೋಡೆ, ವಾಲ್ಕ್ಲಾಕ್ ಹಾಗೂ ಫುಟ್ಪಾತ್ ಕಾಮಗಾರಿ ಹಳೆ ಬಸ್ ನಿಲ್ದಾಣ ಸೇರಿದಂತೆ ರಸ್ತೆ, ಚರಂಡಿ ಹಾಗೂ ಕೊಳವೆ ಬಾವಿಗಳ ಕಾಮಗಾರಿಗಳಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
`ಬೆಳಗಾವಿ ಅಧಿವೇಶನದಲ್ಲೂ ಹರಪಹಳ್ಳಿ ತಾಲ್ಲೂಕು ಬಳ್ಳಾರಿ ಜಿಲ್ಲೆಗೆ ಸೇರುವ ಬಗ್ಗೆ ಕಂದಾಯ ಸಚಿವರಲ್ಲಿ ಮನವರಿಕೆ ಮಾಡಿದ್ದೆ. ರಾಜ್ಯ ಸರ್ಕಾರದ ಆದೇಶದಂತೆ ದಾವಣಗೆರೆ ಜಿಲ್ಲಾಧಿಕಾರಿಗಳು ಕಡತಗಳನ್ನು ತಕ್ಷಣ ಬಳ್ಳಾರಿ ಜಿಲ್ಲೆಗೆ ವರ್ಗಾವಣೆ ಮಾಡಿ ಎಂದು ಹೇಳಿದ್ದಾರೆ. ಹೈದರಾಬಾದ್ ಕರ್ನಾಟಕ ಸೌಲಭ್ಯವನ್ನು ಪಡೆಯಲು ಹರಪನಹಳ್ಳಿ ಜನತೆ ಬಹು ನಿರೀಕ್ಷೆಯಲ್ಲಿದ್ದರು. ಅವರ ಹೋರಾಟದ ಫಲವಾಗಿ ತಾಲ್ಲೂಕಿಗೆ ಜಯ ಸಿಕ್ಕಿದೆ’ ಎಂದರು.
ಪುರಸಭೆ ಅಧ್ಯಕ್ಷ ಎಚ್.ಕೆ.ಹಾಲೇಶ್, ಪುರಸಭೆ ಉಪಾಧ್ಯಕ್ಷ ಸತ್ಯನಾರಾಯಣ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಂ.ಪಿ.ನಾಯ್ಕ, ತಾಲ್ಲೂಕು ಬಿಜೆಪಿ ಘಟಕದ ಉಪಾಧ್ಯಕ್ಷ ನಿಟ್ಟೂರು ಸಣ್ಣಹಾಲಪ್ಪ, ಪುರಸಭೆ ಮುಖ್ಯಾಧಿಕಾರಿ ನಾಗರಾಜನಾಯ್ಕ, ಪುರಸಭೆ ಸದಸ್ಯರಾದ ವಿಜಯಲಕ್ಷ್ಮಿ, ಎಂ.ದುರುಗಪ್ಪ, ಮೆಹಬೂಬ್ಸಾಬ್, ಎಂ.ಶಂಕರ, ಕೃಷ್ಣಪ್ಪ, ಮುಖಂಡರಾದ ಎಂ.ಜಾಫರ್ ಸಾಹೇಬ್, ಸಿ.ಅಬ್ದುಲ್ ಸತ್ತಾರ್, ಎನ್.ಎಂ. ರಹಿಮಾನ್ ಸಾಹೇಬ್, ಚಾಂದ್ ಬಾಷ, ರಾಘವೇಂದ್ರಶೆಟ್ಟಿ, ಆರ್. ಕರೇಗೌಡ, ಸತ್ತೂರು ಹಾಲೇಶ್, ಯು.ಪಿ.ನಾಗರಾಜ, ಲೋಕೇಶ್, ಕೆ.ಎಂ. ಪ್ರಾಣೇಶ್, ನಾಗರಾಜ, ಕೆಂಚಪ್ಪ, ಪಟ್ನಾಮದ ಪರಶುರಾಮ, ಯಲ್ಲಹಜ್ಜಿ ಹನುಮಂತ, ಶಿವಕುಮಾರ, ಕವಸರ ನಾಗರಾಜ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ