ರೋಟರಿಯಿಂದ ಕಡಿಮೆ ಅವಧಿಯಲ್ಲಿ ಹೆಚ್ಚು ಸೇವೆ

ತುರುವೇಕೆರೆ 

       ಸದಾ ಸೇವಾ ನಿರತವಾಗಿರುವ ತುರುವೇಕೆರೆ ರೋಟರಿ ಸಂಸ್ಥೆ ಅತ್ಯಂತ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಸೇವೆ ಮಾಡುತ್ತಿದ್ದು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಸುವಂತಾಗಿದೆ ಎಂದು ಜಿಲ್ಲಾ ರೋಟರಿ ಸಹಾಯಕ ರಾಜ್ಯಪಾಲ ಎಸ್.ಕೆ.ಥಾಮಸ್ ತಿಳಿಸಿದರು.

      ಪಟ್ಟಣದ ಹಿರಣ್ಣಯ್ಯ ಬಯಲು ರಂಗಮಂದಿರದಲ್ಲಿ ಶುಕ್ರವಾರ ಸಂಜೆ ರೋಟೋ ಉತ್ಸವ ಹಾಗೂ ಸದಸ್ಯರ ಹುಟ್ಟುಹಬ್ಬದ ಸಂಭ್ರಮಾಚರಣೆ ಅಂಗವಾಗಿ ಏರ್ಪಡಿಸಿದ್ದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ತುರುವೇಕೆರೆ ರೋಟರಿ ಸಂಸ್ಥೆ ತಾಲ್ಲೂಕಿನಲ್ಲಿ ಅನೇಕ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ತಾಲ್ಲೂಕಿನಲ್ಲಿ ಹೆಚ್ಚು ಸೇವೆ ಮಾಡುವ ಅಗತ್ಯತೆ ಇದೆ. ಆ ನಿಟ್ಟಿನಲ್ಲಿ ಹಾಲಿ ಅಧ್ಯಕ್ಷರು ಹೆಚ್ಚು ಕ್ರಿಯಾಶೀಲರಾಗಿದ್ದು ಸಂಸ್ಥೆಯನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಲಿ. ನಮ್ಮಗಳ ಸಹಕಾರ ಸದ ಇರುತ್ತದೆ ಎಂದು ತಿಳಿದರು.

       ರೋಟರಿ ಅಧ್ಯಕ್ಷ ಡಾ|| ಚೇತನ್ ಮಾತನಾಡಿ ನಮ್ಮ ರೋಟರಿ ಸಂಸ್ಥೆ ಈಗಾಗಲೇ ರೋಟರಿ ಉದ್ಯಾನವನ ನಿರ್ಮಿಸಿ ನಿವೇಶನ ಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ರೋಟರಿ ಭವನ ನಿರ್ಮಾಣ ಮಾಡಿ ಎಲ್ಲಾ ಕುಟುಂಬದ ಸದಸ್ಯರುಗಳನ್ನು ಒಂದೆಡೆ ಸೇರಿಸಿ ಅವರಲ್ಲಿ ಸೇವಾ ಮನೋಭಾವ ಮೂಡಿಸುವ ಯತ್ನ ಇದಾಗಿದೆ ಎಂದರು.

        ಹುಟ್ಟುಹಬ್ಬ ಆಚರಿಸಿಕೊಂಡ ನಿಕಟ ಪೂರ್ವ ಅಧ್ಯಕ್ಷ ಅರಳಿಕೆರೆ ಲೋಕೇಶ್ ಹಾಗೂ ಪ್ರಕಾಶ್‍ಗುಪ್ತಾ ಮಾತನಾಡಿ, ಪ್ರತಿ ತಿಂಗಳ ಕೊನೆಯಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡು ಸಂಸ್ಥೆಯ ಎಲ್ಲಾ ಕುಟುಂಬದ ಸದಸ್ಯರನ್ನು ಒಂದೆಡೆ ಸೇರಿಸಿ ಅವರಲ್ಲಿ ಸೇವಾ ಮನೋಭಾವ ಮೂಡಿಸುವ ಯತ್ನ ಇದಾಗಿರುವುದು ಸಂತಸದ ಸಂಗತಿ ಎಂದರು.

      ಹುಟ್ಟುಹಬ್ಬ ಆಚರಿಸಿಕೊಂಡ ರೊ|| ರಾಜಣ್ಣ, ಅರಳಿಕೆರೆ ಲೋಕೇಶ್, ಪ್ರಕಾಶ್ ಗುಪ್ತಾ ಹಾಗೂ ಕಾರ್ತೀಕ್ ಅವರನ್ನು ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ರೋಟರಿ ವತಿಯಿಂದ ಶುಭಾಷಯ ಕೋರಲಾಯಿತು.

        ಈ ಸಂದರ್ಭದಲ್ಲಿ ಕಾರ್ಯದರ್ಶಿ ಬಸವರಾಜು, ಖಜಾಂಚಿ ಗ್ಯಾಷ್ ಪ್ರಭು, ಸಾ.ಶಿ. ದೇವರಾಜು, ಬಿಎಮ್‍ಎಸ್ ಉಮೇಶ್, ಶಿವರಾಜು, ನಟರಾಜು, ವಾಸವಿ ಸತೀಶ್, ತ್ರಿಜಿ, ಲಾಲು, ಬೇಲೂರಪ್ಪ, ತುಕಾರಾಂ, ರಾಮಚಂದ್ರ, ರಾಜಪ್ಪ, ಜಯರಾಮಯ್ಯ, ಅನಂತು, ಸೇರಿದಂತೆ ಇತರರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link