ಚಿತ್ರದುರ್ಗ
ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಸೋಮವಾರ ಕರೆ ನೀಡಲಾಗಿದ್ದ ಕರ್ನಾಟಕ ಬಂದ್‍ಗೆ ಕೋಟೆ ನಾಡಿನಲ್ಲಿ ಭಾಗಶ ಬೆಂಬಲ ವ್ಯಕ್ತವಾಗಿದೆ. ಪ್ರಮುಖ ರಸ್ತೆಗಳ ಅಂಗಡಿಗಳು ಮುಚ್ಚಲ್ಪಟ್ಟಿದ್ದು ಬಿಟ್ಟರೆ ಉಳಿದ ಜನಜೀವನ ಎಂದಿನಂತೆ ಇತ್ತು. ಆದರೂ ಬಸ್‍ಗಳಲ್ಲಿ ಆಟೋಗಳಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು.
ನಗರದ ಬಿ.ಡಿ.ರಸ್ತೆ, ಮೆದೇಹಳ್ಳಿ ರಸ್ತೆ, ಲಕ್ಷ್ಮಿಬಜಾರ್, ಆನೆಬಾಗಿಲು, ಸಂತೆಹೊಂಡ, ಗಾಂಧಿವೃತ್ತದ ಬಳಿ ಅಂಗಡಿಗಳನ್ನು ಮಾಲೀಕಸರು ಸ್ವಯಂಪ್ರೇರಿತರಾಗಿ ಮುಚ್ಚಲ್ಪಟ್ಟಿದ್ದರು. ಮೆಡಿಕಲ್ ಸ್ಟೋರ್ಸ್, ಬ್ಯಾಂಕುಗಳು, ಸರ್ಕಾರಿ ಕಚೇರಿಗಳು,. ಎಲ್‍ಐಸಿ, ಕೇಂದ್ರ ಸರ್ಕಾರ ಸ್ವಾಮ್ಯದ ಬಿಎಸ್‍ಎನ್‍ಎಲ್, ಅಂಚೆ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದರೂ ಜನರು ಕಡಿಮೆ ಇದ್ದರು. ಕೇಂದ್ರ ಸರ್ಕಾರ ಸ್ವಾಮ್ಯದ ಕಚೇರಿಗಳಿಗೆ ಪೊಲೀಸರ ನಿಯೋಜಿಸಲಾಗಿತ್ತು.
ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‍ಪೀರ್ ಎತ್ತಿನಗಾಡಿಯಲ್ಲಿ ಬರುವ ಮೂಲಕ ಎಲ್ಲರ ಗಮನಸೆಳೆದರು. ಇವರನ್ನು ಹೊರತುಪಡಿಸಿದರೆ ಉಳಿದ ರೈತ ಸಂಘಟನೆಗಳು. ಕಾರ್ಮಿಕ ಸಂಘಟನೆಗಳು, ಕರವೇ, ಕರ್ನಾಟಕ ನವನಿರ್ಮಾಣ ವೇದಿಕೆ, ಎಐಟಿಯುಸಿ, ಸಿಪಿಐ ಸಂಘಟನೆಗಳ ಮುಖಂಡರು ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದವು.
ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಕಾಯ್ದೆಗಳನ್ನು ತಕ್ಷಣವೇ ವಾಪಸ್ ಪಡೆಯಬೇಕು ಇಲ್ಲದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ‘ಉದ್ಯಮಿಗಳಿಗೆ, ಕಾಪೆರ್Çರೇಟ್ ಸಂಸ್ಥೆಗಳಿಗೆ ಅನುಕೂಲ ಕಲ್ಪಿಸಲು ಹಾಗೂ ಆಡಳಿತದಲ್ಲಿರುವ ರಾಜಕಾರಣಿಗಳಿಗೆ ಸರ್ಕಾರ ನಡೆಸಲು ಬೇಕಾದ ಹಣ ಸಂಗ್ರಹಿಸಲು ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತರಲಾಗುತ್ತಿದೆ. ತಕ್ಷಣ ಈ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಕೇಂದ್ರ ಮತು ರಾಜ್ಯ ಸರ್ಕಾರಗಳು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಮುಂದಾಗಿರುವ ಭೂ-ಸುಧಾರಣೆ ಕಾಯ್ದೆ. ಎಪಿಎಂ.ಸಿ. ಕಾಯ್ದೆ ಹಾಗೂ ವಿದ್ಯುತ್‍ಚ್ಛಕ್ತಿ ಖಾಸಗಿಕರಣ ಕಾಯ್ದೆ ತಿದ್ದುಪಡಿ ಮಾರಕವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಂಡವಾಳಶಾಹಿಗಳು, ಕಾರ್ಪೋರೇಟ್ ಕಂಪನಿಗಳು ಹಾಗೂ ಹಣವಂತ ರಾಜಕಾರಣಿಗಳಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿದೆ. ಸರ್ಕಾರ ರೈತರನ್ನು ಬೀದಿಗೆ ತಳ್ಳಿ ರೀಯಲ್ ಎಸ್ಟೇಟ್ ಉದ್ಯಮಿಗಳ ಹಿತ ಕಾಯಲು ಹೊರಟಿದೆ. ರೀಯಲ್ ಎಸ್ಟೇಟ್ ಉದ್ಯಮಿಗಳ ಕೈಗೊಂಬೆಯಾಗಿರುವ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗಾಂಧಿವೃತ್ತದಲ್ಲಿ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಸಮಾವೇಶಗೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿದರು.ಕೆಲವು ಕಡೆಗಳಲ್ಲಿ ಕೆಎಸ್‍ಆರ್‍ಟಿಸಿ ಬಸ್ ತಡೆದು ಧರಣಿ ನಡೆಸಲಾಯಿತು. ಪೊಲೀಸರು ಮಧ್ಯ ಪ್ರವೇಶಿಸಿ ತೆರವುಗೊಳಿಸಿದರು. ನಂತರ ಬಸ್ ಸಂಚಾರ ಸುಗಮವಾಯಿತು.
ಮೊದಲೇ ಕಡಿಮೆ ಪ್ರಯಾಣಿಕರ ಹಿನ್ನೆಲೆಯಲ್ಲಿ ಒಂದೆರೆಡು ಹೊರತುಪಡಿಸಿದರೆ ಉಳಿದ ಖಾಸಗಿ ಬಸ್‍ಗಳು ರಸ್ತೆಗೆ ಇಳಿಯಲಿಲ್ಲ. ಇನ್ನೂ ಆಟೋಗಳು ಮಾಮೂಲಿಯಂತೆ ಓಡಾಡಿದರೂ ಗ್ರಾಹಕರು ಇರಲಿಲ್ಲ. ಸುಮಾರು ಆಟೋಗಳು ಖಾಲಿ ಖಾಲಿಯಾಗಿದ್ದವು. ಕೊನೆಗೆ ಚಾಲಕರು ಬೇಸತ್ತು ಮನೆ ಕಡೆ ಪ್ರಯಾಣ ಬೆಳೆಸಿದರು.
ರೈತ ಸಂಘದ ರಾಜ್ಯ ಪ್ರಧಾನಕಾರ್ಯದರ್ಶಿ ನುಲೇನೂರು ಶಂಕ್ರರಪ್ಪ, ಸಿಪಿಎಂ ಮುಖಂಡ ಸುರೇಶ್ ಬಾಬು, ಸಿಐಟಿಯು ಗೌಸ್‍ಪೀರ್, ಕರವೇ ಅಧ್ಯಕ್ಷ ರಮೇಶ್, ರಕ್ಷಣಾ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎನ್.ಚಂದ್ರಕಲಾ, ರೈತ ಸಂಘದ ಅಧ್ಯಕ್ಷ ಲಕ್ಷ್ಮೀಕಾಂತ, ಜನಶಕ್ತಿ ಸಂಘದ ಷಫಿವುಲ್ಲಾ, ಎಸ್.ಸಿ.ಯು ಐ, ರವಿಕುಮಾರ್, ಚಾಲಕ ಸಂಘದ ಶಿವಕುಮಾರ್ ಕರಿಬಸಪ್ಪ, ಕಾಂಗ್ರೆಸ್‍ನ ಮೈಲಾರಪ್ಪ,, ಸತ್ಯಣ್ಣ,. ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಮಂಜುನಾಥ್ ಸೇರಿದಂತೆ ಇತರೆ ಸಂಘಟನೆಯ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
