ಫೆ.15ರಂದು ಬೆಳಗಾವಿಯಲ್ಲಿ ಬೃಹತ್ ಮೆರವಣಿಗೆ

ದಾವಣಗೆರೆ :

       ಕರ್ನಾಟಕ ರಾಜ್ಯ ಶಿವಶರಣ ಶ್ರೀಸಮಗಾರ ಹರಳಯ್ಯ ಚರ್ಮಕುಶಲ ಕರ್ಮಿಗಳ ಮಹಾ ಒಕ್ಕೂಟದ ವತಿಯಿಂದ ಬೆಳಗಾವಿಯಲ್ಲಿ ಫೆ.15ರಂದು ಶ್ರೀಸಂತ ರವಿದಾಸರ ಹಾಗೂ ಶರಣ ಹರಳಯ್ಯ ಗುರುಗಳ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ಶಿವಾನಂದ ಮುಬ್ರುಕರ್ ತಿಳಿಸಿದರು.

         ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಗಾರ ಸಮುದಾಯವನ್ನು ಸಂಘಟಿಸುವ ಉದ್ದೇಶದಿಂದ ಅಂದು ಬೆಳಗಾವಿಯಲ್ಲಿ ಆಯೋಜಿಸಿರುವ ಬೃಹತ್ ಮೆರವಣಿಗೆಯಲ್ಲಿ ಮಹಾಮಂಡಳಿ ಅಧ್ಯಕ್ಷ ರವಿ ಶಿಂಧೆ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದು, ಸುಮಾರು 10ರಿಂದ 12 ಸಾವಿರ ಜನರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ಹೇಳಿದರು.

        ಸಮಗಾರ ಸಮುದಾಯವು ರಾಜಕೀಯ, ಔದ್ಯೋಗಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದ್ದು, ನಮ್ಮ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯ ದೊರೆಯಬೇಕಾದರೆ, ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯ ಶಿಫಾರಸ್ಸುಗಳನ್ನು ಯಥಾವತ್ತಾಗಿ ಜಾರಿಗೆ ತರಬೇಕು ಹಾಗೂ ಚಮ್ಮಾರಿಕೆಯೇ ನಮ್ಮ ಸಮುದಾಯದ ಕುಲಕಸುಬಾಗಿದ್ದು, ಅದರಲ್ಲಿರುವ ನೈಪುಣ್ಯತೆ ನಮಗೆ ರಕ್ತಗತವಾಗಿ ಕರಗತವಾಗಿದೆ. ಈ ಹಿನ್ನೆಲೆಯಲ್ಲಿ ಲೀಡ್ಕರ್ ಸಂಸ್ಥೆಗೆ ನಮ್ಮ ಸಮುದಾಯದವರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕೆಂದು ಆಗ್ರಹಿಸಿದರು.

       ಸರ್ಕಾರ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ದೊರೆಯುವ ಸೌಲಭ್ಯಗಳಿಂದ ನಮ್ಮ ಸಮುದಾಯ ವಂಚಿತವಾಗಿದ್ದು, ನಿವೇಶನ, ಚರ್ಮಗಾರ ಕಟೀರ ಸೇರಿದಂತೆ ಇತರೆ ಸೌಲಭ್ಯಗಳನ್ನು ಸಮಗಾರ ಸಮುದಾಯಕ್ಕೆ ವಿಶೇಷ ಆದ್ಯತೆಯ ಮೇರೆಗೆ ಕಲ್ಪಿಸಬೇಕೆಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಗೌರವಾಧ್ಯಕ್ಷ ಮಾರ್ಕಂಡೆಯ ಮಾಡಮನಿ, ರಮೇಶ್ ಮಾನೆ, ಪಕ್ಕೀರ ಬೆಟಗೇರಿ, ಬಸವರಾಜ ತೆರದಾಳ್ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link