ನವದೆಹಲಿ: 

ಲೋಕಸಭೆ ಚುನಾವಣೆ ಕಾವೇರುತ್ತಿರುವಾಗ ಹಾಸನದಲ್ಲಿ ಕಾಂಗ್ರೆಸ್ ಗೆ ದೊಡ್ಡ ಆಘಾತವಾಗಿದೆ.
ಕೈ ನಾಯಕರು ಸಾಮೂಹಿಕ ರಾಜಿನಾಮೆ ನೀಡಿದ್ದಾರೆ. ಹಾಸನದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಂಥರ್ ಗೌಡ ವಜಾ ಮಾಡಿದ ಹಿನ್ನೆಲೆಯಲ್ಲಿ ಹಲವು ನಾಯಕರು ತಮ್ಮ ಸ್ಥಾನಕ್ಕೆ ಸಾಮೂಹಿಕವಾಗಿ ರಾಜಿನಾಮೆ ನೀಡಿದ್ದಾರೆ. ಡಿಯುಸಿಸಿ ಉಪಾಧ್ಯಕ್ಷ ಹಾಗೂ ಇತರೆ ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಮಂಥರ್ ಗೌಡ ಅವರ ತಂದೆ ಎಂ. ಮಂಜು ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆ ಯಾಗಿದ್ದರು. ಅಲ್ಲದೆ ಹಾಸನ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಎ. ಮಂಜು ಸ್ಪರ್ಧೆ ಮಾಡುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಮಂಥರ್ ಗೌಡ ಅವರ ರಾಜಕೀಯ ನಡೆ ಇನ್ನು ನಿಗೂಢವಾಗಿದೆ.








