ಬೆಂಗಳೂರು:
ಕರುನಾಡಿನ ಕಿಚ್ಚ ನಡೆಸಿಕೊಡುವ ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ನ ಇನ್ನೊಬ್ಬ ಸ್ಪರ್ಧಿಗೆ ಬಂಧನದ ಭೀತಿ ಎದುರಾಗಿದೆ.
ಎರಡು ವರ್ಷದ ಹಿಂದೆ ಬಿಗ್ ಬಾಸ್ ಸ್ಪರ್ಧಿಗಯಾದ ಭುವನ್ ತನ್ನ ಸಹ ಸ್ಪರ್ಧಿ ಪ್ರಥಮ್ ಅವರ ಜೊತೆ ಜಗಳವಾಡಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಈ ವೇಳೆ ಪ್ರಥಮ್ ಅವರು, ಭುವನ್ ಮನೆಗೆ ಹೋಗಿ ಅವರನ್ನು ಕಚ್ಚಿದ್ದರು. ಇದಾದ ಬಳಿಕ ಇಬ್ಬರು ಒಬ್ಬರ ಮೇಲೊಬ್ಬರು ಪ್ರಕರಣ ದಾಖಲಿಸಿಕೊಂಡರು. ಆದರೆ ಈಗ ಭುವನ್‍ಗೆ ಸಂಕಷ್ಟ ಎದುರಾಗಿದೆ.
ನ್ಯಾಯಾಲಯ ಭುವನ್‍ಗೆ ಜಾಮೀನು ರಹಿತ ವಾರೆಂಟ್ ನೀಡಿದೆ. ಈವರೆಗೂ ಸುಮಾರು 15 ಬಾರಿ ಸಮನ್ಸ್ ನೀಡಿದರೂ ಭುವನ್ ವಿಚಾರಣೆಗೆ ಹಾಜರಾಗಿಲ್ಲ. ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಸೆಷೆನ್ಸ್ ಕೋರ್ಟ್ ಅರೆಸ್ಟ್ ವಾರೆಂಟ್ ನೀಡಿದೆ. ಸದ್ಯ ಬಂಧನದ ಭೀತಿಯಲ್ಲಿರುವ ಭುವನ್ ಜಾಮೀನಿಗಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಪ್ರಕರಣದ ಹಿನ್ನೆಲೆ
ಧಾರಾವಾಹಿ ಚಿತ್ರೀಕರಣದ ವೇಳೆಯಲ್ಲಿ ಆನ್ ಶೂಟ್ ಮತ್ತೆ ಆಫ್ ಶೂಟ್‍ನಲ್ಲಿ ಸಂಜನಾ, ಭುವನ್ ಜೊತೆ ಚೆನ್ನಾಗಿ ಮಾತಾನಾಡುತ್ತಿದ್ದರು. ಆದರೆ ನನ್ನ ಜೊತೆ ಆನ್ ಶೂಟ್ ಮತ್ತೆ ಆಫ್ ಶೂಟ್ ನಲ್ಲಿ ಹೆಚ್ಚಾಗಿ ಮಾತನಾಡುತ್ತಿರಲಿಲ್ಲ. ಕೈ ಹಿಡಿದು ಮಾತಾನಾಡುವ ದೃಶ್ಯದ ಚಿತ್ರೀಕರಣ ಇತ್ತು. ಆನ್ ಶೂಟ್ ನಲ್ಲಿ ಕೈ ಹಿಡಿದು ಮಾತನಾಡಿಸಿದ್ರೂ ಆಕೆ ನನ್ನನ್ನು ತಿರಸ್ಕಾರ ಮಾಡುತ್ತಿದ್ದಳು. ಮತ್ತೆ ಆಫ್ ಶೂಟ್ ನಲ್ಲಿ ಸಹ ಅದೇ ರೀತಿ ಮಾಡುತ್ತಿದ್ದಳು. ಆದ್ದರಿಂದ ಆಕೆಯನ್ನು ನಾನು ಬೈದಿದ್ದೆ. ಆಗ ಭುವನ್ ಬಂದು ಹೆಣ್ಣು ಮಕ್ಕಳಿಗೆ ಮರ್ಯಾದೆ ಕೊಟ್ಟು ಮಾತನಾಡು ಅಂತ ಹೇಳಿದ್ದನು. ಈ ಸಂಬಂಧ ಇಬ್ಬರ ನಡುವೆ ಮಾತಿನ ಚಕಮಕಿ ಹಾಗೂ ತಳ್ಳಾಟ ನಡೆದಿತ್ತು ಎಂದು ಪ್ರಥಮ್ ತಿಳಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
