ಚಿತ್ರದುರ್ಗ;
ನಗರದ ಕವಾಡಿಗರಹಟ್ಟಿ ಗ್ರಾಮದ ಪಂಚಾಕ್ಷರಿ ಎಂಬುವರು ಹೆಚ್.ಪಿ. ಕಂಪನಿಯ ಸಿಲಿಂಡರ್‍ಗಳನ್ನು ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ವಿತರಿಸಲಾಗುವ ಸಿಲಿಂಡರ್‍ಗಳನ್ನು ಕವಾಡಿಗರಹಟ್ಟಿ ಗ್ರಾಮದಲ್ಲಿ ತಮ್ಮ ಮನೆಯ ಹತ್ತಿರದ ದಾಸ್ತಾನು ಮಾಡಿ ಕಾನೂನನ್ನು ಉಲ್ಲಂಘಿಸಿ ಅಕ್ರಮವಾಗಿ ವಿತರಿಸುತ್ತಿರುವುದನ್ನು ಖಂಡಿಸಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಹಿಂದೆ ಅಂದರೆ ದಿ:25-01-2019ರಂದು ಉಪನಿರ್ದೇಶಕರು ಹಾಗೂ ನಗರ ಆಹಾರ ನಿರೀಕ್ಷಕರಿಗೆ ದೂರು ನೀಡಲಾಗಿತ್ತು. ಇದಾದ ನಂತರ ಖುದ್ದು ಉಪನಿರ್ದೇಶಕರು ಹಾಗೂ ನಗರ ಆಹಾರ ನಿರೀಕ್ಷಕರು ಸದರಿ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರ ಸಮ್ಮುಖದಲ್ಲೇ ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.
ಇದಾದ ಸುಮಾರು ಒಂದು ತಿಂಗಳೂ ಕಳೆದರೂ ತನಿಖೆ ಮಾಡದೇ ಬೇಜವಾಬ್ದಾರಿ ತೋರುತ್ತಿರುವುದು ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳಿಗೆ ಹೆಡೆಮಾಡಿಕೊಟ್ಟಿದೆ.ಪ್ರಕರಣದ ಬಗ್ಗೆ ಯಾವುದೇ ತನಿಖೆ ಮಾಡದೇ, ಪ್ರಕರಣವನ್ನು ದಾಖಲಿಸಿದೆ ಇರುವುದನ್ನು ಕಂಡು ಸಾರ್ವಜನಿಕರು ಅಧಿಕಾರಿಗಳನ್ನು ಅನುಮಾನದ ದೃಷ್ಠಿಯಿಂದ ನೋಡುವ ಪರಿಸ್ಥಿತಿ ಎದುರಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜಪ್ಪ ಮಲ್ಲಾಪುರ, ರವಿ, ಮಾರುತಿ, ತಿಮ್ಮಣ್ಣ, ಮಂಜುನಾಥ್.ಎ ತಾಳಿಕೆರೆ, ಅನಂತ್‍ಕುಮಾರ್ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
