ಕೊರೋನಾ ವಾರಿಯರ್ಸ್ ಗೆ ತಲೆನೋವಾದ ಬಿಹಾರಿ ಕಾರ್ಮಿಕರು…!

ಬೆಂಗಳೂರು

       ಹೊಂಗಸಂದ್ರದಲ್ಲಿ ಕೊರೊನಾ ಸೋಂಕು ಹರಡಿ ಆತಂಕ ಸೃಷ್ಟಿ ಸಿದ್ದ ಬಿಹಾರಿ ಜೊತೆ ಸಂಪರ್ಕ ದಲ್ಲಿದ್ದು ಕ್ವಾರೆಂಟೈನ್ ಒಳಗಾಗಿರುವ ಬಿಹಾರ ಮೂಲದ ಕಾರ್ಮಿಕರು ಅಧಿಕಾರಿಗಳಿಗೆ, ಕೊರೊನಾ ವಾರಿಯರ್ಸ್ ಗೆ ತಲೆನೋವಾಗಿ ಪರಿಣಮಿಸಿದ್ದಾರೆ.

       ಕ್ವಾರೆಂಟೈನ್ ಒಳಗಾಗಿರುವ ಬಿಹಾರ ಮೂಲದ ಕಾರ್ಮಿಕರ ಮನವೊಲಿಕೆಗೆ ಕೊರೊನಾ ವಾರಿಯರ್ಸ್ ಹರಸಾಹಸ ನಡೆಸಬೇಕಿದೆ.ಕ್ವಾರೆಂಟೈನ್ ನಲ್ಲಿರುವ ಕಾರ್ಮಿಕರ ಪೈಕಿ ಮೂವರಂತೂ ಪದೇ ಪದೇ ಕಿರಿಕ್ ಮಾಡುತ್ತಲೇ ಇರುತ್ತಾರೆ ಎಂದು ಕೊರೊನಾ ವಾರಿಯರ್ಸ್ ಗೆ ಸಹಾಯ ಮಾಡಲು ಮುಂದಾಗಿರುವ ಸ್ಥಳೀಯರು ತಿಳಿಸಿದ್ದಾರೆ.

      ಬಿಹಾರಿ ಮೂಲದ ಕಾರ್ಮಿಕರ ಪುಂಡಾಟವನ್ನು ಈ ಸ್ಥಳೀಯರು ವಿವರಿಸಿದ್ದಾರೆ. ಕ್ವಾರೆಂಟೈನ್‍ನಲ್ಲಿರುವವರಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ತಾವು ಬಿಬಿಎಂಪಿ ಅಧಿಕಾರಿಗಳಿಗೆ ಸಹಕಾರ ನೀಡುತ್ತಿದ್ದೇವೆ. ಈ ವೇಳೆ ಬಿಹಾರಿ ಕಾರ್ಮಿಕರು ವಿನಾಕಾರಣ ಕಿರಿಕ್ ತೆಗೆಯುತ್ತಾರೆ. ಅವರನ್ನು ವಿಚಾರಿಸಿದರೆ ಒಂದಿಲ್ಲೊಂದು ಬೇಡಿಕೆ ಒಡ್ಡುತ್ತಾರೆ. ಅಲ್ಲದೇ ಸಿಟ್ಟಾಗಿ ತಮ್ಮ ಮೇಲೆ ಉಗುಳಿ ಪುಂಡತನ ಮೆರೆದಿದ್ದಾರೆಂದು ವಿವರಿಸಿದರು.

       ಬಿಹಾರಿ ಮೂಲದ 419ನೇ ಸೋಂಕಿತನ ಸಂಪರ್ಕದಲ್ಲಿದ್ದ ಹಿನ್ನೆಲೆಯಲ್ಲಿ ಬಿಹಾರಿ ಮೂಲದ ಕಾರ್ಮಿಕರನ್ನು ಕರೆದೊಯ್ದು ಖಾಸಗಿ ಹೊಟೇಲ್‍ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಆದರೆ, ಈ ಕಾರ್ಮಿಕರು ದಿನೇ ದಿನೇ ವಿಚಿತ್ರ ಬೇಡಿಕೆಗಳನ್ನು ಇಡುತ್ತಿದ್ದಾರೆ. ಕೆಲವರು ಬ್ರಾಡೆಂಡ್ ಬಟ್ಟೆ, ಗೋಬಿ, ಬಾಳೆಹಣ್ಣು, ಸಿಗರೇಟು, ಚಿಪ್ಸ್, ಮೊಬೈಲ್ ಚಾರ್ಜರ್ ಸೇರಿದಂತೆ ಇತರೆ ಅನಾವಶ್ಯಕ ವಸ್ತುಗಳನ್ನು ನೀಡುವಂತೆ ಪಟ್ಟು ಹಿಡಿಯುತ್ತಿದ್ದಾರೆ. ಅವರನ್ನು ವಿಚಾರಿಸಿದರೆ ಒಂದಿಲ್ಲೊಂದು ಬೇಡಿಕೆ ಒಡ್ಡುತ್ತಾರೆ. ಅಲ್ಲದೇ ಸಿಟ್ಟಾಗಿ ತಮ್ಮ ಮೇಲೆ ಉಗುಳಿ ಪುಂಡತನ ಮೆರೆದಿದ್ದಾರೆ ಎಂದು ವಿವರಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap