ಹರಪನಹಳ್ಳಿ:
ಬೈಕ್ ಮತ್ತು ಲಾರಿ ಮುಖಾಮುಖಿ ಡಿಕ್ಕಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಓರ್ವ ಸಾವನ್ನಪಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಮೃತರ ಸಂಬಂಧಿಕರಿಂಧ ಪ್ರತಿಭಟನೆ ನೆಡೆದ ಘಟನೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜರುಗಿದೆ.
ಪಟ್ಟಣದ ಚಿತ್ತಾರಗೇರಿ ನಿವಾಸಿ ಇಮ್ತಿಯಾಜ್(28) ಮೃತ ಯುವಕ. ಪೀರ್ ಎನ್ನುವವರಿಗೆ ತೀವ್ರ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗಾಗಿ ದಾವಣೆಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರ
ತಾಲೂಕಿನ ಕಂಬಟ್ರಹಳ್ಳಿ ಗ್ರಾಮದ ಸಬ್ ಜೈಲ್ ಬಳಿ ಅವಘಡ ಸಂಭವಿಸಿದೆ. ಮೃತ ಇಮ್ತಿಯಾಜ್ ದಾವಣಗೆರೆಯಿಂದ ಹರಪನಹಳ್ಳಿಗೆ ಬೈಕ್ ಮೇಲೆ ಬರುತ್ತಿದ್ದು ಹರಪನಹಳ್ಳಿ ಕಡೆಯಿಂದ ದಾವಣಗೆರೆಗೆ ಖಾಲಿಸಿಲೆಂಡರ್ ಹೊತ್ತೊಯ್ಯೂತ್ತಿದ್ದ ಲಾರಿ ಟಯರ್ ಸಿಡಿದು ಚಾಲಕನ ನಿಯಂತ್ರಣ ತಪ್ಪಿ ಬೈಕ್‍ಗೆ ಡಿಕ್ಕಿಹೊಡೆದಿದೆ. ಬೈಕ್ ಸವಾರ ಇಮ್ತಿಯಾಜ್ ತಲೆಗೆ ತೀವ್ರವಾದ ಪೆಟ್ಟು ಬಿದ್ದ ಪರಿಣಾಮ ಕೂಡಲೇ ಹರಪನಹಳ್ಳಿ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಗಿತ್ತು.
ಈ ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ವೈದ್ಯರು ಸೂಕ್ತ ಚಿಕಿತ್ಸೆ ನೀಡದಿರುವುದರಿಂದ ಇಮ್ತಿಯಾಜ್ ಸಾವನಪ್ಪಿದ್ದಾರೆ ಎಂದು ಆರೋಪಿಸಿ ಮೃತನ ಶವವನ್ನು ಶವಗಾರಕ್ಕೆ ಬಿಡದೆ ಸಂಬಂಧಿಕರು ಪ್ರತಿಭಟನೆ ನಡೆಸಿ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳು ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಬೇಕು ಮತ್ತು ನಿರ್ಲಕ್ಷ್ಯವಹಿಸಿದ ವೈದ್ಯರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೆಕು ಎಂದು ಆಗ್ರಹಿಸಿದರು.
ವೈದ್ಯ ರಾಜೇಶ್ ಹೇಳಿಕೆ ನೀಡಿ, ಆಸ್ಪತ್ರೆಗೆ ಬರುವ ಮುಂಚೆಯೇ ಅಪಘಾತಕ್ಕೊಳಗಾಗಿದ್ದ ವ್ಯಕ್ತಿ ಸಾವನ್ನಪ್ಪಿದ್ದ. ಆಸ್ಪತ್ರೆಯ ಸಿಬ್ಬಂದಿಯಿಂದಾಗಲಿ ನಮ್ಮಿಂದಾಗಲಿ ಚಿಕಿತ್ಸೆಯಲ್ಲಿ ಯಾವುದೇ ವಿಳಂಬವಾಗಿಲ್ಲ ಎಂದು ಹೇಳಿದ್ದಾರೆ.ಪ್ರತಿಭಟನೆಯಲ್ಲಿ ಲಾಠಿದಾದಾ, ಮಹಮ್ಮದ್ ಇರ್ಫಾನ್, ಡಿ.ಎಂ.ಸುಹೇಲ್, ಅಸ್ಲಾಂ, ಸೇರಿದಂತೆ ಮೃತನ ಸಂಬಂಧಿಕರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
