ಚಿತ್ರದುರ್ಗ
ಕನಕ ಜಯಂತಿಯ ಅಂಗವಾಗಿ ಇಂದು ನಗರದ ವಿವಿಧ ಬಡಾವಣೆಗಳಲ್ಲಿ ಬೃಹತ್ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು.ನಗರದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದಿಂದ ಪ್ರಾರಂಭವಾದ ಬೈಕ್ ರ್ಯಾಲಿಗೆ ಡಾ.ಶಿವಮೂರ್ತಿ ಮುರುಘಾ ಶರಣರು ಚಾಲನೆ ನೀಡಿದರು. ನಂತರ ಹೊಳಲ್ಕೆರೆ ರಸ್ತೆಯಿಂದ ಪ್ರಾರಂಭವಾದ ಬೈಕ್ ರ್ಯಾಲಿಯೂ ಸಂತೇಪೇಟೆ ವೃತ್ತದ ಮೂಲಕ ಮೇದೇಹಳ್ಳಿ ರಸ್ತೆ ಸಂತೇ ಮೈದಾನ ಗೋಪಾಲಪುರ ರಸ್ತೆ, ಜೆಸಿಆರ್ ಬಡಾವಣೆ,ಕೆಳಗೋಟೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ವೃತ್ತದ ಮೂಲಕ ಕುರುಬರ ಹಾಸ್ಟಲ್‍ನ್ನು ತಲುಪಿತು.
ಈ ಸಂದರ್ಭದಲ್ಲಿ ಕುರುಬ ಜನಾಂಗದವರು ತಮ್ಮಲ್ಲಿನ ವಿವಿಧ ರೀತಿಯ ದ್ವಿಚಕ್ರ ವಾಹನಗಳಿಗೆ ಜನಾಂಗದ ಬಾವುಟವನ್ನು ಕಟ್ಟಿಕೊಂಡು ಜೈ ಕನಕ, ಜೈ,ಜೈ ಕನಕ ಎಂದು ಘೋಷಣೆಗಳನ್ನು ಕೂಗುತ್ತಾ ಸಾಗುತ್ತಿದ್ದ ದೃಶ್ಯ ಕಂಡು ಬಂದಿತು. ಈ ಸಂದರ್ಭದಲ್ಲಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಶ್ರೀರಾಮ್, ಪ್ರಧಾನ ಕಾರ್ಯದರ್ಶಿ ಬಿ.ಹೆಚ್.ಗೌಡ್ರು ಸೇರಿದಂತೆ ಜನಾಂಗದ ಮುಖಂಡರು ಯುವಜನತೆ ಭಾಗವಹಿಸಿದ್ದರು.
ನ,15ರ ಬೆಳಿಗ್ಗೆ 9.30ಕ್ಕೆ ಕನಕ ವೃತ್ತದಿಂದ ಮೆರವಣಿಗೆ ಪಾರಂಭವಾಗಲಿದ್ದು, ಮಹಿಳೆಯರು ಪೂರ್ಣ ಕುಂಬದೊಂದಿಗೆ ಕನಕ ಕೀರ್ಥನೆಗಳೊಂದಿಗೆ 20ಕ್ಕೂ ಹೆಚ್ಚು ಕಲಾ ತಂಡಗಳೊಂದಿಗೆ ಸಂಗೋಳ್ಳಿರಾಯಣ್ಣ ಮಾಲಾರ್ಪಣೆ ಮಾಡಿ ಗಾಂಧಿವೃತ್ತದ ಮುಖಾಂತರ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಮದಕರಿನಾಯಕರ ಪ ್ರತಿಮೆಗೆ ಮಾಲಾರ್ಪಣೆ ಮಾಡಲಾಗುವುದು.
ತ.ರಾ.ಸುರಂಗಮಂದಿರದಲ್ಲಿ ಮಧ್ಯಾಹ್ನ 12.30ಕ್ಕೆ ಸಭಾ ಕಾರ್ಯಕ್ರಮ ಈ ಕಾರ್ಯಕ್ರಮದಲ್ಲಿ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳು, ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು, ಸಂಸದ ಎ.ನಾರಾಯಣ ಸ್ವಾಮಿ, ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಜಿ.ಎಂ.ವಿಶಾಲಾಕ್ಷಿನಟರಾಜ್, ಶಾಸಕ ಗೂಳಿಹಟ್ಟಿ ಡಿ.ಶೇಖರ್, ಶಾಸಕಿ ಶ್ರೀ ಪೂರ್ಣಿಮ.ಕೆ.ಶ್ರೀನಿವಾಸ್, ಚಿತ್ರದುರ್ಗ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಶ್ರೀರಾಮ್, ಪ್ರಧಾನ ಕಾರ್ಯದರ್ಶಿ ಬಿ.ಹೆಚ್.ಗೌಡ್ರು ಭಾಗವಹಿಸಲಿದ್ದಾರೆ.ಸಹಾಯಕ ಪ್ರಾಧ್ಯಾಪಕ ಎಸ್.ಎಂ.ಮುತ್ತಯ್ಯ ಉಪನ್ಯಾಸ ನೀಡಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
